ಕೋಡಿ ಸಂಪರ್ಕ ಸೇತುವೆ ಶಿಥಿಲ; ಅಪಾಯದಲ್ಲಿ ವಾಹನ ಸಂಚಾರ

ನೂತನ ಸೇತುವೆಗೆ 2 ಕೋ.ರೂ. ಮಂಜೂರು; 15 ದಿನಗಳಲ್ಲಿ ಟೆಂಡರ್‌ ಪೂರ್ಣ

Team Udayavani, Oct 19, 2020, 3:11 AM IST

ಕೋಡಿ ಸಂಪರ್ಕ ಸೇತುವೆ ಶಿಥಿಲ; ಅಪಾಯದಲ್ಲಿ ವಾಹನ ಸಂಚಾರ

ಕುಂದಾಪುರ: ಇಲ್ಲಿನ ಬಸ್ರೂರು ಮೂರುಕೈ ಸಮೀಪದಿಂದ ವಿನಾಯಕ ಥಿಯೇಟರ್‌ ಪಕ್ಕದ ರಸ್ತೆಯಲ್ಲಿ ಕೋಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಆದರೆ ಇದರಲ್ಲೇ ಕೋಡಿಗೆ ಹೋಗುವ ಬಸ್‌ಗಳು, ಘನ ವಾಹನಗಳ ಸಂಚಾರ ಮುಂದುವರಿದಿದ್ದು ತೀವ್ರ ಅಪಾಯಕಾರಿಯಾಗಿದೆ.

ಅಪಾಯದಲ್ಲಿ
ಸೇತುವೆ ಮೇಲೆ ಹಾಕಿದ್ದ ಡಾಮರು ಎಂದೋ ಎದ್ದು ಹೋಗಿದೆ. ತಡೆಹಿಡಿಕೆಗಳು ತುಕ್ಕು ಹಿಡಿದಿವೆ. ಸೇತುವೆ ಸ್ತಂಭದ ಕಲ್ಲುಗಳು ಕುಸಿಯಲಾರಂಭವಿಸಿವೆ. ಅನೇಕ ಸಮಯದಿಂದ ಈ ಕುರಿತು ಬೇಡಿಕೆ ಇದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂಬ ದೂರು ಕೂಡಾ ಕೇಳಿಬಂದಿತ್ತು. “ಉದಯವಾಣಿ’ “ಸುದಿನ’ ಈ ಕುರಿತು ವರದಿ ಮಾಡಿತ್ತು. ಇದೀಗ ಸೇತುವೆ ಮೇಲಿನ ಸಂಚಾರ ಮತ್ತಷ್ಟು ಅಪಾಯಕಾರಿ ಹಂತದಲ್ಲಿದೆ. ಇಲ್ಲಿ ಫಿಶ್‌ಮೀಲ್‌ ಕಾರ್ಖಾನೆಗಳಿಗೆ ಹೋಗುವ ದೊಡ್ಡ ಲಾರಿಗಳು ಸೇರಿದಂತೆ ಘನ ವಾಹನಗಳು ಓಡಾಡುವ ಕಾರಣ ಸೇತುವೆ ಮೇಲಿನ ಓಡಾಟ ತಂತಿ ಮೇಲಿನ ಓಡಾಟದಷ್ಟೇ ಗಂಭೀರವಾಗಿದೆ.

ಅನುದಾನ ಮಂಜೂರು
ರಾಷ್ಟ್ರೀಯ ಹೆದ್ದಾರಿ ಹಂಗಳೂರು ಜಂಕ್ಷನ್‌ನಿಂದ ಬಸ್‌, ರಿಕ್ಷಾ, ಲಾರಿ ಎಂದು ನೂರಾರು ವಾಹನಗಳು ಪ್ರತಿನಿತ್ಯ ಓಡಾಡುವ ಶ್ರೀರಾಮ ವಿದ್ಯಾ ಕೇಂದ್ರದ ಬಳಿಯ ಹಾಗೂ ಬಡಾಕೆರೆಯ ಸೇತುವೆಗಳು ಶಿಥಿಲವಾಗಿವೆ. ಪೂರ್ಣ ನಾದುರಸ್ತಿಯಲ್ಲಿರುವ ಈ ಎರಡು ಸೇತುವೆಗಳನ್ನು ತೆಗೆದು ಹೊಸದಾಗಿ ರಚಿಸಲು 2 ಕೋ.ರೂ. ಮಂಜೂರಾಗಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸೇತುವೆ ರಚನೆಗಾಗಿ ಫೆಬ್ರವರಿಯಲ್ಲೇ ಅನು ದಾನವನ್ನು ಮುಖ್ಯಮಂತ್ರಿಗಳಿಂದ ಖುದ್ದು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಆದರೆ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಈ ವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ಇದೀಗ ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಿದ್ದು 15-30 ದಿನಗಳಲ್ಲಿ ಕೆಲಸಕ್ಕೆ ಆದೇಶ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹೇಳಿದೆ.

ನಿಷೇಧ
ಕಳೆದ ಒಂದು ವರ್ಷದಿಂದ ಹಂಗಳೂರು, ಎಂ-ಕೋಡಿ, ಹಳೆ ಅಳಿವೆ, ಕೋಡಿ ಬೀಚ್‌ಗೆ ಸಂಬಂ ಧಿಸಿದಂತೆ ಓಡಾಟಕ್ಕೆ ವಾಹನಗಳು ಈ ಸೇತುವೆ ಮೇಲೆಯೇ ಭಯದಿಂದ ಸಂಚಾರ ನಡೆಸುತ್ತಿದ್ದರೂ ಹೊಸ ಸೇತುವೆ ಮಂಜೂರಾಗಿರಲಿಲ್ಲ. ಬಸ್‌, ಶಾಲಾ ಬಸ್‌, ಘನವಾಹನಗಳ ಓಡಾಟ ಸಂದರ್ಭ ಸೇತುವೆ ಗಡಗಡ ಎನ್ನುತ್ತಿತ್ತು. ಈಗ ಸ್ಥಳೀಯ ರಿಕ್ಷಾ ಚಾಲಕರೇ ಈ ರಸ್ತೆ ಮೂಲಕ ಫಿಶ್‌ ಕಟ್ಟಿಂಗ್‌ ಮಿಲ್‌ ಮೊದಲಾದೆಡೆಗೆ ಘನ ವಾಹನ ಹೋಗದಂತೆ ತಡೆದು ಬುದ್ಧಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಎಷ್ಟು ಹೊತ್ತು ಈ ರೀತಿ ಕಾವಲು ಕಾಯಲು ಸಾಧ್ಯ ಎನ್ನುತ್ತಾರೆ ರಿಕ್ಷಾ ಚಾಲಕ ಮಹೇಶ್‌ ಶೆಣೈ.

ದೂರದ ಬದಲಿ ರಸ್ತೆ
ಈ ಸೇತುವೆಗಳು ಶಿಥಿಲವಾದ ಕಾರಣ ಘನವಾಹನ ಸಂಚಾರ ನಿಷೇಧಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ. ಆದರೆ ಆದೇಶ ಕಡತದಲ್ಲಿಯೇ ಇದೆ. ಅನುಷ್ಠಾನಕ್ಕೆ ಬಂದರೆ ಬದಲಿ ರಸ್ತೆ ಬಲುದೂರ ಎಂಬ ಸ್ಥಿತಿಯಿದೆ ಎನ್ನುತ್ತಾರೆ ಸ್ಥಳೀಯರು. ಶಾಸ್ತ್ರಿ ಸರ್ಕಲ್‌ ಮೂಲಕ ಆಗಮಿಸಿ ಪಾರಿಜಾತ ಸರ್ಕಲ್‌ ದಾಟಿ ಚರ್ಚ್‌ ರಸ್ತೆ ಮೂಲಕ ಕೋಡಿಗೆ ಹೋಗಬೇಕಾಗು ತ್ತದೆ. ಆಗ ನಗರದ ಒಳಗೆ, ಚರ್ಚ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನನುಕೂಲವಾಗಲಿದೆ.

ಪ್ರವಾಸಿ ತಾಣ
ಕೋಡಿ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಸೀವಾಕ್‌, ಉದ್ಯಾನ, ಬೀಚ್‌, ರೆಸಾರ್ಟ್‌ ಸೇರಿದಂತೆ ಅನೇಕ ಆಕರ್ಷಣೆಗಳು ಕೋಡಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ವಾರಾಂತ್ಯದಲ್ಲಿ ಸಾವಿರಾರು ಜನ ಭಾಗವಹಿಸುವುದೂ ಇದೆ. ಅಷ್ಟಲ್ಲದೆ ಕೋಡಿ ಪ್ರದೇಶದಲ್ಲಿ ಆಸ್ಪತ್ರೆ, ಶಾಲೆ, ಕಾಲೇಜು, ಮಂದಿರ, ಮಸೀದಿ ಎಂದು ಎಲ್ಲ ಸೌಕರ್ಯಗಳೂ ಇವೆ. ನೂರಾರು ಮನೆಗಳಿದ್ದು ಬಸ್‌ ಸಂಪರ್ಕ ಕೂಡಾ ಇದೆ.

ಟಾಪ್ ನ್ಯೂಸ್

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.