‘ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಬೀಳದೆ ವಿದ್ಯಾರ್ಜನೆಗೆ ಒತ್ತು ನೀಡಿ’

Team Udayavani, Jun 27, 2019, 5:44 AM IST

ಶಿರ್ವ: ಉಡುಪಿ ಜಿಲ್ಲಾ ಪೊಲೀಸ್‌, ಕಾರ್ಕಳ ಉಪ ವಿಭಾಗದ ಶಿರ್ವ ಪೊಲೀಸ್‌ ಠಾಣಾ ವತಿಯಿಂದ ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜು ಮತ್ತು ಹಿಂದೂ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕಾನೂನು, ಮಾದಕ ದ್ರವ್ಯ ನಿರ್ಮೂಲನೆ ಜಾಗೃತಿ ಅರಿವು ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲೆ ಡಾ| ನಯನಾ ಪಕ್ಕಳ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ, ಜಿಲ್ಲಾ ಪೊಲೀಸ್‌ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಪಿ. ಕೃಷ್ಣಕಾಂತ್‌ ಕಾನೂನು ಮತ್ತು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಯುವಜನತೆ ಸಮಾಜದ ಆಸ್ತಿಯಾಗಿದ್ದು ರಾಷ್ಟ್ರದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಯುವ ಸಮಾಜವನ್ನು ದುಶ್ಚಟಗಳಿಂದ ಮುಕ್ತಗೊಳಿಸಬೇಕಾಗಿದ್ದು ಜೀವನದ ಪ್ರತಿ ಹಂತದಲ್ಲೂ ಕಾನೂನು ಪರಿಪಾಲಿಸಬೇಕಾದ ಅನಿವಾರ್ಯತೆ ಇದೆ. ಹೆಚ್ಚುತ್ತಿರುವ ಕಳ್ಳತನ, ದರೋಡೆ, ರಸ್ತೆ ಅಪಘಾತ, ಲೈಂಗಿಕ ಚಟುವಟಿಕೆ, ಮಾದಕದ್ರವ್ಯ ಸೇವನೆಯಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳೇ ಕಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳು ಕಾನೂನು ಕ್ರಮ ಪಾಲಿಸಿ ಯಾವುದೇ ದುಶ್ಚಟಗಳಿಗೆ ಬಲಿಬೀಳದೆ ವಿದ್ಯಾರ್ಜನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ ಪ್ರಜ್ಞಾವಂತ ನಾಗರಿಕರಾಗಿ ಬಾಳಬೇಕು ಎಂದರು.

ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್‌ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಬೀಳದೆ ಜಾಗೃತಿ ವಹಿಸಬೇಕಾಗಿದ್ದು , ಮಾದಕದ್ರವ್ಯ ಸೇವನೆ ಯಾ ಕಳ್ಳಸಾಗಾಟದ ಬಗ್ಗೆ ಸೂಚನೆ ಸಿಕ್ಕಿದಲ್ಲಿ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದರು.

ಪ್ರೊಬೆಷನರಿ ಪಿಎಸ್‌ಐ ಮಹಾದೇವ ಬೋಸ್ಲೆ, ಎಎಸ್‌ಐ ಭೋಜ, ಹೆಡ್‌ ಕಾನ್‌ಸ್ಟೆಬಲ್ಗಳಾದ ದಯಾನಂದ , ಉಮೇಶ್‌, ವೆಂಕಟೇಶ್‌, ದಾಮೋದರ್‌, ಕಾಲೇಜಿನ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಡಾ| ನಯನಾ ಎಂ. ಪಕ್ಕಳ ಸ್ವಾಗತಿಸಿದರು. ಉಪನ್ಯಾಸಕ ಪ್ರೊ| ಮುರುಗೇಶಿ ಟಿ. ಕಾರ್ಯಕ್ರಮ ನಿರೂಪಿಸಿ , ಹಿಂದೂ ಪ.ಪೂ. ಕಾಲೇಜಿನ ಪ್ರಾಂಶುಪಾಲ ಭಾಸ್ಕರ್‌ ಎ. ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಟುವಟಿಕೆಯ ಚಿಲುಮೆ ರೋನಿಕಾ ಲವಲವಿಕೆಯಿಂದ ರಂಗಪ್ರವೇಶಿಸಿ, ಆತ್ಮವಿಶ್ವಾಸದಿಂದ ನೃತ್ಯ ಪ್ರಸ್ತುತಪಡಿಸಿದ ಬಗೆ ಮುದ ತಂದಿತ್ತು. ಅಂಗಶುದ್ಧಿ, ಕಲಾನೈಪುಣ್ಯದ...

  • ಶ್ರೀಲಂಕೆಯ ದೋಲುಕಂಡ ಪ್ರದೇಶ, ಆಯುರ್ವೇದ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ತಾಣ. ಈ ಕುರಿತು ಸ್ಥಳೀಯರು ಹೇಳುವ ಕಥೆಯೇ ಬೇರೆ. ಸೈನ್ಯದಲ್ಲಿ ಆಘಾತಕ್ಕೊಳಗಾದ ರಾಮನ...

  • ಮಲೆನಾಡಿನ ಕಾಡಿನ ರಸ್ತೆಗಳಲ್ಲಿ ಓಲಾಡುತ್ತಾ ಬರುವ ಈ ಬಸ್ಸೆಂದರೆ ಹಳ್ಳಿ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶಾಲೆಗೆ ಒಂದು ಗಂಟೆ ಇರುವ ಮುನ್ನವೇ ಮನೆ ಬಾಗಿಲಿಗೇ...

  • ಹೋಟೆಲ್‌ನ ಕಮರ್ಷಿಯಲ್‌ ರೂಲ್ಸ್‌ಗಳನ್ನೆಲ್ಲಾ ತೆಗೆದು ಹಾಕಿ, ಅಪ್ಪಟ ಮನೆಯ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದು, "ಐಯ್ಯಂಗಾರ್‌ ತಟ್ಟೆ ಇಡ್ಲಿ'ಯ...

  • 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ಚಾಲನೆಗೊಂಡಿದೆ. ಜಗತ್ತಿನ ನೂರಾರು ಸಿನಿಮಾಗಳನ್ನು ಒಂದೆಡೆ ನೋಡುವಂಥ ಅವಕಾಶ ಸಿನಿಪ್ರಿಯರಿಗೆ....

ಹೊಸ ಸೇರ್ಪಡೆ