ಒಲಿಂಪಿಯನ್, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್ ಹುಸೇನ್ ನಿಧನ
Team Udayavani, Apr 17, 2021, 11:27 PM IST
ಬೆಂಗಳೂರು: ಭಾರತದ ಮಾಜಿ ಫುಟ್ಬಾಲಿಗ, ಒಲಿಂಪಿಯನ್ ಖ್ಯಾತಿಯ ಅಹ್ಮದ್ ಹುಸೇನ್ ಬೆಂಗಳೂರಿನಲ್ಲಿ ನಿಧನ ಹೊಂದಿದರು. 89 ವರ್ಷದ ಹುಸೇನ್ ಅವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.
1932ರಲ್ಲಿ ಹೈದರಾಬಾದ್ನಲ್ಲಿ ಜನಿಸಿದ ಅಹ್ಮದ್ ಹುಸೇನ್ “ಹೈದರಾಬಾದ್ ಸಿಟಿ ಪೊಲೀಸ್’ ತಂಡದ ಪರ ಮೊದಲ ಸಲ ಫುಟ್ಬಾಲ್ ಆಡಿದ್ದರು. ಬಳಿಕ ಬೆಂಗಳೂರಿಗೆ ಬಂದು ನೆಲೆಸಿದರು. 1956ರ ಮೆಲ್ಬರ್ನ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದಾಗಿದೆ. ಇಲ್ಲಿ ಆತಿಥೇಯ ಆಸ್ಟ್ರೇಲಿಯವನ್ನು 4-2 ಗೋಲುಗಳಿಂದ ಮಣಿಸಿದ ಭಾರತ 4ನೇ ಸ್ಥಾನಿಯಾಗಿತ್ತು.
ಹುಸೇನ್ 1951ರ ಹೊಸದಿಲ್ಲಿ ಏಶ್ಯಾಡ್ನಲ್ಲಿ ಬಂಗಾರ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ನಿವೃತ್ತಿ ಬಳಿಕ ಭಾರತದ ತಂಡದ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ :ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 2.31 ಲಕ್ಷ ಮಂದಿಗೆ ಕೋವಿಡ್ ಲಸಿಕೆ : ಸಚಿವ ಕೆ. ಸುಧಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು