ನಿಸ್ವಾರ್ಥ ಸೇವೆಯಿಂದ ಸಂಘಟನೆ ವೃದಿ
Team Udayavani, Jan 21, 2022, 10:04 PM IST
ಆನಂದಪುರ: ನಿಸ್ವಾರ್ಥ ಸೇವೆಯಿಂದ ಮಾತ್ರ ಸಂಘಟನೆಗಳು ಬೆಳೆಯಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು. ಇಲ್ಲಿನ ಮಿಡ್ಲ್ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಬೆಳೆಯಬೇಕಾದರೆ ಸಂಘಟನೆಗಳ ಪಾತ್ರ ಬಹುಮುಖ್ಯವಾಗಿದೆ ಎಂದರು. ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಸಾಹಿತಿ ವಿ.ಟಿ. ಸ್ವಾಮಿ ಮಾತನಾಡಿ, ಸಂಘಟನೆಗಳು ಸ್ವಾರ್ಥದಿಂದ ಹೊರ ಬರಬೇಕಿದೆ. ಜಾತ್ಯತೀತ, ಪûಾತೀತವಾಗಿ ಸಂಘಟನೆಗಳನ್ನು ಕಟ್ಟಿದರೆ ಮಾತ್ರ ಸಮಾಜ ಸುಧಾರಣೆಯಾಗಲೂ ಸಾಧ್ಯವಾಗುತ್ತದೆ ಎಂದರು.
ಸಂಘಟನೆಗಳ ಪ್ರಮುಖರಾದ ಬಿ.ಡಿ. ರವಿಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತ.ಮ. ನರಸಿಂಹ, ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಸ್ವಾಮಿ, ತಾಲೂಕು ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಹಿರಿಯ ಗಾಯಕ ಭದ್ರಪ್ಪ ಗೌಡ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಗೌಡ್ರು, ಹಿರಿಯ ಜಾನಪದ ಕಲಾವಿದ ಜಿ.ಸಿ. ಮಂಜಪ್ಪ ಕಣ್ಣೂರು ಇತರರು ಇದ್ದರು. ಚನ್ನಶೆಟ್ಟಿಕೊಪ್ಪದ ಚನ್ನಮ್ಮಾಜಿ ಜಾನಪದ ಸಂಘದ ಸದಸ್ಯರು ಪ್ರಾರ್ಥಿಸಿ, ಮಲ್ಲಿಕಾರ್ಜುನ ಸ್ವಾಗತಿಸಿ, ರಘು ವಂದಿಸಿ, ಗುಡವಿ ಸ್ವಾಮಿ ನಿರೂಪಿಸಿದರು.ಸಮಾಲೋಚನಾ ಸಭೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್
ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ