ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್
Team Udayavani, Jan 26, 2022, 10:44 PM IST
ಕೋಹಳ್ಳಿ: ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯಬೇಕು ಗ್ರಾಮ ಲೆಕ್ಕಾ ಧಿಕಾರಿ ಇರ್ಫಾನ್ ಆಲಗೂರ ಹೇಳಿದರು. ಮಂಗಳವಾರ ಸ್ಥಳೀಯ ಗ್ರಾಪಂ ಆವರಣದಲ್ಲಿ ನಡೆದ ರಾಷ್ಟ್ರೀಯ ಮತದಾರ ದಿನಾಚರಣೆಯಲ್ಲಿ ಮತದಾರರಿಗೆ ಪ್ರತಿಜ್ಞಾವಿ ಧಿ ಬೋಧಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಎಲ್ಲ ಮತದಾರರು ಕಡ್ಡಾಯ ಮತದಾನ ಮಾಡಬೇಕು. ಜನರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವನ್ನು ಮೂಡಿಸಬೇಕು. ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದರು. ಪಿಡಿಒ ಈರಪ್ಪ ತಮದಡ್ಡಿ ಮಾತನಾಡಿ, ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ-ದಾಕ್ಷಿಣ್ಯಗಳಿಂದ ಪ್ರಭಾವಿತ ರಾಗದೇ ಮತ ಚಲಾಯಿಸಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯ ಸೋಮಶೇಖರ ಝರೆ, ಸಂಗಪ್ಪ ಕರಿಗಾರ, ಸದಾಶಿವ ಹರಪಾಳೆ, ಶಿವಾಜಿ ನಾಗಣಿ, ನೀಲಪ್ಪ ಬಿರಾದಾರ, ಲಕ್ಷ್ಮಣ ಉಮರಾಣಿ, ಗಣೇಶ ಪೂಜಾರಿ, ನಿಜಾಮ್ ಪಡಸಲಗಿ, ಸಾಯಿನಾಥ ಮಾಳಿ, ಮಹಾಂತೇಶ ಗುಡ್ಡಾಪುರ, ಹಣಮಂತ ಸತ್ತಿ, ಸಾವಿತ್ರಿ ಕರಿಗಾರ, ಮತಗಟ್ಟೆ ಅ ಧಿಕಾರಿಗಳಾದ ಕೆ.ಡಿ. ಸತ್ತಿ, ಮಹಾಂತೇಶ ನಾಟೀಕಾರ ಇನ್ನಿತರರಿದ್ದರು.