ಐಪಿಎಲ್‌ಗೆ ಇನ್ನೆರಡು ತಂಡಗಳ ಸೇರ್ಪಡೆ


Team Udayavani, Dec 4, 2020, 6:15 AM IST

Udayavani Kannada Newspaper

ಹೊಸದಿಲ್ಲಿ: ಹೆಚ್ಚು ಕಡಿಮೆ ಒಂದು ವರ್ಷದಿಂದ ಐಪಿಎಲ್‌ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೀಗ ಹೊಸ ತಂಡಗಳು ಸೇರ್ಪಡೆಯಾಗುವ ದಿನಗಳು ಹತ್ತಿರವಾಗಿವೆ. ಡಿ. 24ರಂದು ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಹಮ್ಮಿಕೊಂಡಿದೆ. ಇಲ್ಲಿ 10 ತಂಡಗಳಿಗೆ ಅನುಮೋದನೆ ಪಡೆದುಕೊಳ್ಳುವುದು ಮುಖ್ಯ ವಿಷಯವಾಗಿದೆ. ಒಟ್ಟು 23 ಅಂಶಗಳು ಸರ್ವಸದಸ್ಯರ ಸಭೆಯಲ್ಲಿ ಚರ್ಚೆಯಾಗಲಿವೆ.

ಐಪಿಎಲ್‌ಗೆ ಹೊಸ ತಂಡಗಳು
ಐಪಿಎಲ್‌ಗೆ ಇನ್ನೆರಡು ತಂಡಗಳನ್ನು ಸೇರಿಸುವ ಬಗ್ಗೆ ಲೆಕ್ಕಾಚಾರ ನಡೆದೇ ಇದೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಒಂದು ತಂಡ ಸಿದ್ಧವಾಗುವುದು ಖಚಿತ. ಇನ್ನೊಂದು ತಂಡ ಪುಣೆಯನ್ನು ಪ್ರತಿನಿಧಿಸಬಹುದು. ಸದ್ಯದ ಲೆಕ್ಕಾಚಾರದಲ್ಲಿ ಗೌತಮ್‌ ಅದಾನಿ ಮಾಲಕತ್ವದ ಅದಾನಿ ಸಮೂಹ ಮತ್ತು ಉದ್ಯಮಿ ಸಂಜೀವ್‌ ಗೊಯೆಂಕಾ ಈ ಎರಡು ತಂಡಗಳನ್ನು ಖರೀದಿಸುವ ಪೈಪೋಟಿಯಲ್ಲಿದ್ದಾರೆ. ಆದರೆ ಈ ತಂಡಗಳು 2021ರಲ್ಲೇ ಆಡುತ್ತವೋ, 2022ರಲ್ಲಿ ಕಣಕ್ಕಿಳಿಯುತ್ತವೋ ಕಾದು ನೋಡಬೇಕು. ಜತೆಗೆ ಮುಂದಿನ ವರ್ಷ ಐಪಿಎಲ್‌ ಬೃಹತ್‌ ಹರಾಜು ನಡೆದೀತೇ ಎಂಬ ಪ್ರಶ್ನೆಯೂ ಇದೆ.

ಉಪಾಧ್ಯಕ್ಷರ ಆಯ್ಕೆ: ಇದುವರೆಗೆ ಬಿಸಿಸಿಐ ಉಪಾಧ್ಯಕ್ಷ ಸ್ಥಾನ ಖಾಲಿಯೇ ಇದೆ. ಆ ಸ್ಥಾನವನ್ನು ಚುನಾವಣೆ ನಡೆಸಿ ಭರ್ತಿ ಮಾಡಲಾಗುತ್ತದೆ.

ಮೂವರು ಆಯ್ಕೆಗಾರರ ನೇಮಕ: ಬಿಸಿಸಿಐ ಆಯ್ಕೆ ಸಮಿತಿಗೆ ಬಾಕಿ ಉಳಿದ ಮೂವರು ಆಯ್ಕೆ ಗಾರರನ್ನು ಸೇರಿಸಿಕೊಳ್ಳುವುದು, ಹಾಗೆಯೇ ಅವರಿ ಗಾಗಿ ಮುಖ್ಯಸ್ಥರೊಬ್ಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯಲಿದೆ.

ಐಸಿಸಿಯಲ್ಲಿ ಜಯ್‌ ಶಾ ಪ್ರತಿನಿಧಿ: ಬಿಸಿಸಿಐ ಯನ್ನು ಐಸಿಸಿ ಹಾಗೂ ಏಶ್ಯ ಕ್ರಿಕೆಟ್‌ ಕೌನ್ಸಿಲ್‌ನಲ್ಲಿ ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಇದೆ. ಸದ್ಯದ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಹೊಣೆ ಹೊತ್ತುಕೊಳ್ಳಲಿದ್ದಾರೆ.

ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ ಸಿದ್ಧತೆ, ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು, 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಸೇರ್ಪಡೆ ಬಗ್ಗೆಯೂ ಚರ್ಚೆಯಾಗಲಿದೆ.

ಟಾಪ್ ನ್ಯೂಸ್

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲ-ಆತಂಕ

ಸರ್ಕಾರಿ ಬಸ್ಸ್

ಡ್ರೈವರ್‌ ಕಮ್‌ ಕಂಡಕ್ಟರ್‌ ಅಪಘಾತಕ್ಕೆ ಆಹ್ವಾನ ?

22constitution

ವಿಶ್ವದಲ್ಲೇ ನಮ್ಮ ಸಂವಿಧಾನ ಶ್ರೇಷ್ಠ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

hdk

2023ಕ್ಕೆ ಜೆಡಿಎಸ್‌ಗೆ ಅಧಿಕಾರ ಖಚಿತ: ಎಚ್ಡಿಕೆ

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

Untitled-2

ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲ-ಆತಂಕ

ಸರ್ಕಾರಿ ಬಸ್ಸ್

ಡ್ರೈವರ್‌ ಕಮ್‌ ಕಂಡಕ್ಟರ್‌ ಅಪಘಾತಕ್ಕೆ ಆಹ್ವಾನ ?

22constitution

ವಿಶ್ವದಲ್ಲೇ ನಮ್ಮ ಸಂವಿಧಾನ ಶ್ರೇಷ್ಠ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

hdk

2023ಕ್ಕೆ ಜೆಡಿಎಸ್‌ಗೆ ಅಧಿಕಾರ ಖಚಿತ: ಎಚ್ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.