ಎಲ್‌ಸಿಡಿ ಟಿವಿ ಸ್ಫೋಟ : 16 ವರ್ಷದ ಬಾಲಕ ಸಾವು, ಇಬ್ಬರಿಗೆ ಗಾಯ
Team Udayavani, Oct 5, 2022, 3:50 PM IST
ಗಾಜಿಯಾಬಾದ್: ಗೋಡೆಗೆ ಅಳವಡಿಸಿದ್ದ ಎಲ್‌ಸಿಡಿ ಟಿವಿ ಸ್ಫೋಟಗೊಂಡ ಪರಿಣಾಮ 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷ್ ವಿಹಾರ್ ಕಾಲೋನಿಯಲ್ಲಿ ಓಮೇಂದ್ರ ಎಂಬ ಬಾಲಕ ತನ್ನ ಸ್ನೇಹಿತ ಕರಣ್ ಮನೆಯಲ್ಲಿ ಟಿವಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ ದೊಡ್ಡ ಸದ್ದಿನಿಂದ ಸ್ಫೋಟಗೊಂಡಿದೆ. ಅದೇ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಕರಣ್ ಮತ್ತು ಅವರ ತಾಯಿ ಓಂವತಿ ಕೂಡ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಎಸ್‌ಪಿ ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ : ಹಿಮಾಚಲಕ್ಕೆ ಎರಡು ದೊಡ್ಡ ಗಿಫ್ಟ್ ಸಿಕ್ಕಿದೆ : ಬಿಲಾಸ್‌ಪುರದಲ್ಲಿ ಪ್ರಧಾನಿ ಮೋದಿ
ಮೂವರನ್ನು ಚಿಕಿತ್ಸೆಗಾಗಿ ದೆಹಲಿಯ ಜಿಟಿಬಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಓಮೇಂದ್ರ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಕರಣ್ ಮತ್ತು ಓಂವತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಘಟನೆಯನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಶವಪರೀಕ್ಷೆ ನಡೆಸಲಾಗಿದೆ ಎಂದು ಸಿಂಗ್ ಹೇಳಿದರು.