ಮಹಿಳಾ ಸಬಲೀಕರಣರಣಕ್ಕೆ ಕ.ಕ. ಸಂಘದಿಂದ ಹಲವು ಯೋಜನೆ
Team Udayavani, Jan 23, 2022, 1:09 PM IST
ಕನಕಗಿರಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮತ್ತು ಕೊಪ್ಪಳದ ಮಹಿಳಾ ಮತ್ತು ಪರಿಸರದ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ರೈತರಿಗೆ ಹಸು ವಿತರಿಸಲಾಯಿತು.
ಈ ವೇಳೆ ಕ.ಕ. ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕಿ ಲೀಲಾ ಮಾತನಾಡಿ, ಕೃಷಿ ಪಶು ಸಂಗೋಪನಾ, ಮಹಿಳೆಯರ ಸಬಲೀಕರಣಕ್ಕೆ ಕ.ಕ. ಸಂಘದಿಂದ ಹಲವಾರು ಕಾರ್ಯಕ್ರಮ ಜಾರಿಗೆ ತಂದು ಬಡವರಿಗೆ ಹಾಗೂ ಅರ್ಹರಿಗೆ ಇದರ ಉಪಯೋಗ ಪಡೆದುಕೊಳ್ಳಲು ಮಾಹಿತಿ ನೀಡುತ್ತಿದೆ.
ದೇಶಿ ತಳಿಯ ಹಸುಗಳನ್ನು ಉಳಿಸಿ ಈ ಭಾಗದ 25 ಫಲಾನುಭವಿಗಳಿಗೆ 80 ಸಾವಿರ ಮೊತ್ತದಲ್ಲಿ 2-3 ಕರುಗಳನ್ನು ಖರೀದಿಸಲು ಸೂಚಿಸಲಾಗಿದೆ ಎಂದು ಹೇಳಿದರು. ನಂತರ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿ, ಪಶು ಪ್ರಾಣಿಗಳು ಕುಟುಂಬದ ಸದಸ್ಯರಿದ್ದಂತೆ ಅವುಗಳನ್ನು ಮನೆಯವರಂತೆ ನೋಡಿ ಕೊಳ್ಳಬೇಕು. ರೈತರು ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಮಿತವಾಗಿ ಬಳಸಬೇಕೆಂದರು. ಶರಣಪ್ಪ ಭತ್ತದ, ರವಿ, ಪ್ರಶಾಂತ ಪ್ರಭು ಶೆಟ್ಟರ್, ಶಿವಕುಮಾರ ಮ್ಯಾಗೇರಿ, ಮಂಜುನಾಥ ಹೊಸಗೆರ, ಮಂಜುನಾಥ ಮಸ್ಕಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾತ್ರೆಗೆ ಹೊರಟ ವಾಹನ ಅಪಘಾತ: 18 ಮಂದಿ ಭಕ್ತಾಧಿಗಳಿಗೆ ಗಾಯ
ಪಂಪಾ ಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀ ಚಕ್ರ ಸ್ಥಳಾಂತರಕ್ಕೆ ಸಂಜೀವ ಮರಡಿ ವಿರೋಧ
ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ
ಕುಷ್ಟಗಿ: ಬೈಕ್ ಗಳ ಮುಖಾಮುಖಿ ; ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ