ತುಮಕೂರು ಥಂಡಾ; ಬಿಜೆಪಿಗೆ ಚಿಕ್ಕೋಡಿ ಬಿಸಿ

ನಾಮಪತ್ರ ವಾಪಸ್‌ ಪಡೆದ ಮುದ್ದಹನುಮೇಗೌಡ, ಕೆ.ಎನ್‌. ರಾಜಣ್ಣಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ, ರಮೇಶ್‌ ಕತ್ತಿಗೆ ಕೈತಪ್ಪಿದ ಟಿಕೆಟ್‌

Team Udayavani, Mar 30, 2019, 6:30 AM IST

5 g

ಬೆಂಗಳೂರು: ಮೊದಲ ಹಂತದ ನಾಮಪತ್ರ ಹಿಂದೆಗೆತದ ಅವಧಿ ಅಂತ್ಯವಾಗಿದ್ದು, ತುಮಕೂರಿನಲ್ಲಿ ಬಂಡಾಯ ಅಭ್ಯರ್ಥಿಗಳಾಗಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಕಣದಿಂದ ಹಿಂದೆಗೆದಿದ್ದಾರೆ. ಇವರಿಬ್ಬರ ಈ ನಡೆಯಿಂದಾಗಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್‌.ಡಿ. ದೇವೇಗೌಡರು ನಿಟ್ಟುಸಿರುಬಿಟ್ಟಿದ್ದಾರೆ. 2ನೇ ಹಂತಕ್ಕಾಗಿ ಬಿಜೆಪಿ ಮೂವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಅಸಮಾಧಾನದ ಹೊಗೆ ಕಾಣಿಸಿದೆ.

ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದನ್ನು ವಿರೋಧಿಸಿ, ಬಂಡಾಯ ನಾಮಪತ್ರ ಸಲ್ಲಿಸಿದ್ದ ಹಾಲಿ ಸಂಸದ ಮುದ್ದಹನುಮೇಗೌಡರು ಕಡೆಗೂ ಮಣಿದಿ ದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ದೇಶನದ ಮೇರೆಗೆ ಮುದ್ದ ಹನುಮೇ  ಗೌಡರ ನಿವಾಸಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಡಿಸಿಎಂ ಡಾ| ಜಿ. ಪರಮೇಶ್ವರ ಅವರು ಮನ ವೊಲಿಕೆ ಮಾಡು ವಲ್ಲಿ ಯಶಸ್ವಿಯಾಗಿ ದ್ದಾರೆ. ಹೈಕಮಾಂಡ್‌ ತೀರ್ಮಾನ ದಂತೆಯೇ ತುಮ ಕೂರನ್ನು ಜೆಡಿಎಸ್‌ಗೆ
ಬಿಟ್ಟು  ಕೊಡ  ಲಾಗಿದ್ದು, ಇದರಲ್ಲಿ ರಾಜ್ಯ ನಾಯ ಕರ ಪಾತ್ರ  ವಿಲ್ಲ ಎಂದು ಅವರು ಸ್ಪಷ್ಟ ಪಡಿ ಸಿದರು. ಹೀಗಾಗಿ ಮುದ್ದಹನುಮೇಗೌಡರು ತಮ್ಮ ಏಜೆಂಟ್‌ ಮೂಲಕ ನಾಮಪತ್ರ ವಾಪಸ್‌ ಪಡೆ ದರು. ಅನಂತರ ಮತ್ತೂಬ್ಬ ಕಾಂಗ್ರೆಸ್‌ ಮುಖಂಡ ಕೆ.ಎನ್‌. ರಾಜಣ್ಣ ಕೂಡ ಕಣದಿಂದ ಹಿಂದೆಗೆದರು.

ಕೋಲಾರದಲ್ಲೂ ಬಂಡಾಯ ಶಮನ
ಇತ್ತ ಕೋಲಾರ ಬಿಜೆಪಿಯಲ್ಲಿ ಕಾಣಿಸಿದ್ದ ಬಂಡಾಯದ ಹೊಗೆ ತಣಿದಿದೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಕ್ಷದ ಹಿರಿಯ ನಾಯಕ ಡಿ.ಎಸ್‌. ವೀರಯ್ಯ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಈ ಮೂಲಕ ಎಸ್‌. ಮುನಿಸ್ವಾಮಿ ಅವರ ಹಾದಿ ಸುಗಮ ಮಾಡಿದ್ದಾರೆ.

ಮೈಸೂರಿನಲ್ಲೂ ಮೂಡದ ಸಮನ್ವಯ
ಚುನಾವಣೆ ಸಂಬಂಧ ಕಾಂಗ್ರೆಸ್‌- ಜೆಡಿಎಸ್‌ ಪೂರ್ವಭಾವಿ ಸಭೆಗೆ ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಬಂದರೂ ಮೈಸೂರು ಜಿಲ್ಲೆಯಲ್ಲಿ ಸಮನ್ವಯ ಸಾಧಿಸಲಾಗಿಲ್ಲ. ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಭೆ ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಜೆಡಿಎಸ್‌ನಿಂದ ಯಾರೂ ಬರಲಿಲ್ಲ. ಈ ಮೂಲಕ ದೋಸ್ತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೂಮ್ಮೆ ಜಗಜ್ಜಾಹೀರಾಯಿತು. ಸಚಿವ ಜಿ.ಟಿ. ದೇವೇಗೌಡರೂ ಮೈಸೂರಿನಿಂದ ದೂರ ಉಳಿದರೆ, ಮತ್ತೂಬ್ಬ ಸಚಿವ ಸಾ.ರಾ. ಮಹೇಶ್‌ ಅವರು ನಿಖೀಲ್‌ ಜತೆ ಕೆ.ಆರ್‌. ನಗರಕ್ಕೆ ತೆರಳಿದ್ದರು.

ಬಿಜೆಪಿಗೆ ಮತ ಹಾಕುತ್ತೇವೆ!
ಜೆಡಿಎಸ್‌ ಮುಖಂಡರಿಂದ ನಾವು ಸಾಕಷ್ಟು ಕಿರುಕುಳ ಅನುಭವಿಸಿದ್ದೇವೆ, ಯಾವುದೇ ಕಾರಣಕ್ಕೂ ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕುವುದಿಲ್ಲ, ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಸಚಿವ ಎಚ್‌.ಡಿ. ರೇವಣ್ಣ ಮುಂದೆಯೇ ಕೂಗಾಡಿದ ಘಟನೆ ಅರಸೀಕೆರೆಯಲ್ಲಿ ನಡೆ ದಿದೆ. ಇಲ್ಲಿ ನಡೆದ ಕಾಂಗ್ರೆಸ್‌- ಜೆಡಿಎಸ್‌ ಸಮನ್ವಯ ಸಭೆಯಲ್ಲಿ ಇದು ನಡೆದಿದ್ದು, ಕಾಂಗ್ರೆಸ್‌ ಕಾರ್ಯ ಕರ್ತರು ಸಭೆಯಿಂದಲೇ ನಿರ್ಗಮಿಸಿದ್ದಾರೆ.

ಚಿಕ್ಕೋಡಿ ಬಿಜೆಪಿಯಲ್ಲಿ ಬಂಡಾಯ?
ರಾಜ್ಯ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರ ಬಿದ್ದಿದ್ದು, ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್‌ ಜೊಲ್ಲೆ, ರಾಯಚೂರಿನಿಂದ ರಾಜಾ ಅಮರೇಶ್‌ ನಾಯಕ್‌ ಮತ್ತು ಕೊಪ್ಪಳದಿಂದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಅವಕಾಶ ನೀಡಲಾಗಿದೆ. ಚಿಕ್ಕೋಡಿಯಲ್ಲಿ ಉಮೇಶ್‌ ಕತ್ತಿ ಸಹೋದರ ರಮೇಶ್‌ ಕತ್ತಿ ಮತ್ತು ಅಣ್ಣಾ ಸಾಹೇಬ್‌ ಜೊಲ್ಲೆ ನಡುವೆ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕಡೆಗೆ, ಕೇಂದ್ರ ಚುನಾವಣಾ ಸಮಿತಿ ಜೊಲ್ಲೆ ಅವರಿಗೆ ಮಣೆ ಹಾಕಿದೆ. ಇದು ಕತ್ತಿ ಸಹೋದರರಲ್ಲಿ ಅಸಮಾಧಾನ ಮೂಡಿಸಿದೆ.

ಪಟ್ಟಿ ಹೊರಬೀಳುತ್ತಿದ್ದಂತೆ ಬೆಂಬಲಿಗರ ಜತೆ ಸಭೆ ನಡೆಸಿದ ಉಮೇಶ್‌ ಕತ್ತಿ, ಮರುಪರಿಶೀಲನೆಗೆ ಮನವಿ ಮಾಡಿದ್ದೇವೆ. ಎ.4ರ ವರೆಗೂ ಕಾಯಿರಿ ಎನ್ನುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಈಗ ಜೊಲ್ಲೆ ಅವರ ಉತ್ಸಾಹ ನೋಡಿ ಟಿಕೆಟ್‌ ಕೊಟ್ಟಿರಬಹುದು, ಮುಂದೆ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.

ಎ. 8ರಂದು ರಾಜ್ಯಕ್ಕೆ ಮೋದಿ
ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರಚಾರ ದಿನಾಂಕ ನಿಗದಿ ಯಾ ಗಿದ್ದು, ಎ. 8ರಂದು ಮೈಸೂರು ಮತ್ತು ಚಿತ್ರ ದುರ್ಗ ದಲ್ಲಿ ರ್ಯಾಲಿ ನಡೆಸಲಿದ್ದಾರೆ. ಅಂದು ಬೆಳಗ್ಗೆ ಮೈಸೂರು, ಸಂಜೆ ಚಿತ್ರದುರ್ಗದಲ್ಲಿ ಸಾರ್ವ  ಜನಿಕ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಜತೆಗೆ ಬೆಂಗಳೂರು, ತುಮಕೂರು, ಉಡುಪಿ, ವಿಜಯಪುರ, ಕೋಲಾರ ಮತ್ತು ಚಿಕ್ಕ ಬಳ್ಳಾ  ಪುರ ಗಳಲ್ಲಿ ಅವರ ಚುನಾವಣ ರ್ಯಾಲಿ ಆಯೋ ಜಿಸಲು ಚಿಂತಿಸ ಲಾಗಿದೆ ಎಂದು ರಾಜ್ಯ ಬಿಜೆಪಿ ಚುನಾವಣ ನಿರ್ವಹಣ ಸಮಿತಿ ಸಂಚಾ ಲಕ ಆರ್‌. ಅಶೋಕ್‌ ಮಾಹಿತಿ ನೀಡಿದ್ದಾರೆ. ಎ.7ರಂದು ಕಾರ್ಕಳದಲ್ಲಿ ಸಭೆ ನಡೆಸ ಲಿದ್ದಾರೆ ಎಂಬ ಮಾತಿದ್ದರೂ ಅಂತಿಮವಾಗಿಲ್ಲ.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.