ಮಾತನಾಡುವ ರೋಬೋಟ್‌ ಅಭಿವೃದ್ಧಿ

Team Udayavani, Dec 10, 2019, 6:49 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಂಫಾಲ್‌: ಕೆಳಗೆ ಬಿದ್ದ ವಸ್ತುಗಳನ್ನು ಹೆಕ್ಕಿ ಕೊಡುವ ಮತ್ತು ಸಂಭಾಷಣೆ ನಡೆಸುವ ರೋಬೋಟ್‌ ಅನ್ನು ಮಣಿಪುರ ರಾಜಧಾನಿ ಇಂಫಾಲ್‌ನ ಇರಾಮ್‌ ರೋಶನ್‌ (21) ಎಂಬ ಯುವಕ ಅಭಿವೃದ್ಧಿಪಡಿಸಿದ್ದಾರೆ. ಇಂಫಾಲ್‌ ಪಶ್ಚಿಮ ಜಿಲ್ಲೆಯ ಸಂಗೋಲ್‌ಬಂದ್‌ ಮೊಯಿರಾಂಗ್‌ ಹನುಬಾ ಪ್ರದೇಶದ ಈ ಯುವಕ ಅಭಿವೃದ್ಧಿಪಡಿಸಿರುವ ರೋಬೋಟ್‌ ಅನ್ನು ಮೊಬೈಲ್‌ ಫೋನ್‌ಗಳಿಂದಲೂ ನಿಯಂತ್ರಿಸುವುದು ಸಾಧ್ಯವಿದೆ. ಜತೆಗೆ ಅದು ಇಲೆಕ್ಟ್ರಾನಿಕ್‌ ವಸ್ತುಗಳನ್ನೂ ಗುರುತು ಹಿಡಿಯಲಿದೆ.

ಸಿಎಂ ಎನ್‌.ಬಿರೇನ್‌ ಸಿಂಗ್‌ ರವಿವಾರ ಯುವಕನನ್ನು ಭೇಟಿ ಮಾಡಿ ಆತನ ಸಂಶೋಧನೆಯನ್ನು ಕೊಂಡಾಡಿದ್ದಾರೆ. ಆತ ಮೊದಲ ವರ್ಷದ ಐಟಿಐನಲ್ಲಿ ಕಲಿಯುತ್ತಿದ್ದಾನೆ. ಈ ಸಾಧನೆಗೆ ಸರಕಾರದ ವತಿಯಿಂದ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ