ಶಿಕ್ಷಣ ಕಾಯ್ದೆ ಉಲ್ಲಂಘಿಸುವಂತಿಲ್ಲ

ಮಕ್ಕಳಿಗೆ ಯಾವುದೇ ಶಿಕ್ಷಣ ಸಂಸ್ಥೆ ತೊಂದರೆ ಕೊಡುವಂತಿಲ್ಲ: ಶಿವಮಾದಪ್ಪ ಸೂಚನೆ

Team Udayavani, Jun 1, 2019, 3:07 PM IST

Udayavani Kannada Newspaper

ಕನಕಪುರ: ಶಿಕ್ಷಣದ ಹಕ್ಕು ಕಾಯ್ದೆಯನ್ನು ಯಾರು ಸಹ ಉಲ್ಲಂಘಿಸುವ ಹಾಗಿಲ್ಲ, ಅಂತಹ ದೂರುಗಳು ಬಂದರೆ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಪೋಷಕ‌ರಿಗೆ ಹಣ ವಸೂಲಿ ಮಾಡುವಂತಿಲ್ಲ ಎಂದು ಮಂಡ್ಯ ಜಿಲ್ಲಾ ಡಯೆಟ್ ಉಪನಿರ್ದೇಶಕ ರಾಮನಗರ ಜಿಲ್ಲಾ ಆರ್‌ಟಿಇ ಸಂಬಂಧಿಸಿದ ದೂರುಗಳನ್ನು ಪರಿಶೀಲನೆಗೆ ನಿಯೋಜಿತ ಅಧಿಕಾರಿಯಾದ ಶಿವಮಾದಪ್ಪ ಹೇಳಿದರು.

ನಗರದ ಸೆಂಟ್ಥಾಮಸ್‌ ಶಾಲೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ಆರ್‌ಟಿಇ ಸಂಭಂದಿಸಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಮತ್ತು ದೂರುಗಳ ಸ್ವೀಕಾರ ಸಭೆಯಲ್ಲಿ ಖಾಸಗಿ ಶಾಲೆಗಳ ವ್ಯವಸ್ಥಾಪಕರನ್ನು ಉದ್ದೇಶಿಸಿ ಮಾತನಾಡಿದರು.

ದೂರು ಬರದಂತೆ ಎಚ್ಚರವಹಿಸಿ: ಶಿಕ್ಷಣ ಹಕ್ಕು ಕಾಯ್ದೆಯನ್ವಯ ದಾಖಲಾದ ಯಾವುದೇ ಮಗುವಿಗೆ ಯಾವುದೇ ಶಿಕ್ಷಣ ಸಂಸ್ಥೆಯವರು ತೊಂದರೆ ಕೊಡುವ ಆಗಿಲ್ಲ, ಹಣ ವಸೂಲಿ ಮಾಡುವಂತಿಲ್ಲ ಈ ಬಗ್ಗೆ ವ್ಯಾಪಕ ದೂರು ಕೇಳಿಬಂ ದಿರುವುದರಿಂದ ಇಂತಹ ಸಭೆ ನಡೆಸಲು ಇಲಾಖೆಯ ಸೂಚನೆ ಇದ್ದು, ಒಂದು ದೂರು ಬಂದಿದ್ದು ಅದನ್ನು ಸ್ಥಳದಲ್ಲೇ ಬಗೆಹರಿಸಿದ್ದೇವೆ. ಯಾವುದೇ ಶಾಲೆಯಿಂದ ಇಂತಹ ದೂರು ಬರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು. ಈ ಮೂಲಕ ದೇಶಕ್ಕೆ ಉತ್ತಮ ಮಕ್ಕಳನ್ನು ರೂಪಿಸುವ ಜವಾಬ್ದಾರಿಯನ್ನು ನೆನಪಿಸಿದರು.

ಪೋಷಕರೊಂದಿಗೆ ಸಹಕರಿಸಬೇಕು: ಪ್ರತಿಷ್ಠಿತ ಶಾಲೆಯಲ್ಲಿ ಮಗು ಕಲಿಕೆಯಲ್ಲಿ ಹಿಂದುಳಿದಿದೆ ಎಂದು ಆ ಮಗುವನ್ನು ದೂಷಿಸುವ ಹಾಗಿಲ್ಲ ಅಂತಹ ಮಕ್ಕಳಿಗೆ ನೀವು ಬೇರೆ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ನೋಡುವಂತಿಲ್ಲ ಆ ಮಗು ಕಲಿಕೆಯಲ್ಲಿ ಹಿಂದುಳಿಯಲು ಕಾರಣವೇನು ಎಂಬುದನ್ನು ಅರಿತು ನೀವು ಮಗುವಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸಲು ಪೋಷಕರೊಂದಿಗೆ ಸಹಕರಿಸಬೇಕು ಎಂದರು.

ಸಮಸ್ಯೆ ಬಗೆಹರಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್‌ ಮಾತನಾಡಿ, ಕನಕಪುರ ತಾಲೂಕಿನ ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲೆಗಳ ವ್ಯವಸ್ಥಾಪಕರ ಸಭೆ ಕರೆದು ಈಗಾಗಲೇ ಈ ಸಂಬಂಧ ಎಲ್ಲರಿಗೂ ಸೂಚನೆ ನೀಡಲಾಗಿದ್ದು, ನಮ್ಮ ಹಂತದಲ್ಲಿ ಬಂದಿರುವ ದೂರುಗಳನ್ನು ಬಗೆಹರಿಸಿ ಅವುಗಳನ್ನು ಮುಂದಿನ ಹಂತಕ್ಕೆ ಹೋಗದಂತೆ ಸರಿಪಡಿಸಿದ್ದೇವೆ ಇನ್ನು ಮುಂದೆ ನೀವು ನಮ್ಮನ್ನು ಬಿಟ್ಟು ಮೇಲಧಿಕಾರಿಗಳಿಗೆ ದೂರು ಹೋಗದಂತೆ ಎಚ್ಚರಿಕೆಯಿಂದ ಪೋಷಕ‌ರ ಬಳಿ ಸಮಾಧಾನದಿಂದ ನಡೆದುಕೊಂಡು ಎದುರಾಗು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು.

ಫಲಕ ಪ್ರದರ್ಶನ ಮಾಡಬೇಕು: ಇನ್ನು ಪ್ರತಿ ಶಾಲೆಯಲ್ಲಿ ಮಗುವಿನ ಶುಲ್ಕದ ಫಲಕ ಪ್ರದರ್ಶನ ಮಾಡಬೇಕು, ಕರ್ತವ್ಯದಲ್ಲಿರುವ ಶಿಕ್ಷಕರ ಸೇವಾ ದಾಖಲೆ ಸಿದ್ಧಮಾಡಬೇಕು, ಅವರ ಪಿ.ಎಫ್. ನೀಡಬೇಕು, ಕಡ್ಡಾಯವಗಿ ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯ, ಉತ್ತಮ ಕಟ್ಟಡ, ಸಂಚಾರ ಸುರಕ್ಷತೆ ಸಂಬಂಧಿಸಿದಂತೆ ವಾಹನ ಸೇರಿದಂತೆ ಎಲ್ಲವು ನಿಯಮಾವಳಿಗೆ ಒಳಪಡಬೇಕು ಎಂದು ತಿಳಿಸಿದರು. ದರು. ಖಾಸಗಿ ಶಾಲೆಗಳ ವ್ಯವ ಸ್ಥಾಪಕರು ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯ ವಿದ್ಯಾರ್ಥಿಗಳ ಹಣ ಬಿಡುಗಡೆ ಮಾಡಿಲ್ಲ ಅದನ್ನು ಮಾಡಿಕೊಡುವ ಮೊದಲು ಈ ದೂರು ಸಭೆ ಕರೆದಿದ್ದೀರಿ ನಮಗೆ ಮೊದಲು ಸರಕಾರದಿಂದ ಹಣ ಕೊಡಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಕರಾದ ರಾಮಪ್ರಸ್ನನ್ನ, ದೇವೇಗೌಡ , ಶ್ರೀನಿವಾಸ್‌, ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.