ರಾಯಣ್ಣನ ಮೂರ್ತಿ ಭಗ್ನ ಮಾಡಿದವರ ಬಂಧನಕ್ಕೆ ಆಗ್ರಹ
Team Udayavani, Dec 19, 2021, 12:32 PM IST
ಸುರಪುರ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದಲ್ಲಿ ಕುರುಬ ಸಮಾಜ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಶನಿವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗೆ ಮಾಡಿರುವ ಅಪಮಾನದಿಂದ ನಾಡಿನ ಕನ್ನಡಿಗರ ಸ್ವಾಭಿಮಾನ ಕೆರಳಿಸಿದಂತಾಗಿದೆ ಎಂದರು.
ಕರ್ನಾಟಕ ಪ್ರದೇಶ ಕುರುಬ ಸಂಘ ರಾಜ್ಯ ಘಟಕದ ನಿರ್ದೇಶಕ ಮಲ್ಲೇಶಿ ಪಾಟೀಲ ನಾಗರಾಳ ಮತ್ತು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಕಾಳಪ್ಪ ಕವಾತಿ ಮಾತನಾಡಿದರು.
ಸಮಾಜದ ತಾಲೂಕು ಉಪಾಧ್ಯಕ್ಷರಾದ ಶಿವರಾಯ ಕಾಡ್ಲೂರ, ಭೀಮರಾಯ ಮೂಲಿಮನಿ, ಪ್ರಮುಖರಾದ ಕೃಷ್ಣಾ ಬಾದ್ಯಾಪುರ, ಮಲ್ಲಿಕಾರ್ಜುನ ಕೆಂಗೂರಿ, ಸುಭಾಷ ಬೊಮ್ಮನಳ್ಳಿ, ಭೀಮರಾಯ ತಿಪನಟಗಿ, ಮಲ್ಲಣ್ಣ ಕುರುಕುಂದಿ, ಮಾಳಪ್ಪ ಮಾಲಳ್ಳಿ, ಮಾಳಪ್ಪ ವಂಟೂರ, ಬೋಜಪ್ಪ ಮಲ್ಲಿಭಾವಿ, ಗೋಪಣ್ಣ ಮಂಗ್ಯಾಳ, ಮಾನಪ್ಪ ಪ್ರಧಾನಿ, ಬಸವರಾಜ ಬಡಿಗೇರ, ಬಸವರಾಜ ಹಸನಾಪುರ ಇದ್ದರು.