ಉಡುಪಿ-ಚಿಕ್ಕಮಗಳೂರು: 15.13 ಲಕ್ಷ ಮತದಾರರು; 1,837 ಮತಗಟ್ಟೆಗಳು

Team Udayavani, Apr 15, 2019, 6:30 AM IST

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಅಂತಿಮಪಟ್ಟಿ ಪೂರ್ಣ ಗೊಂಡಿದ್ದು ಅದರಂತೆ ಒಟ್ಟು 15,13,231 ಮತದಾರರಿದ್ದಾರೆ. ಇದರಲ್ಲಿ ಮಹಿಳಾ ಮತದಾರರು 7,74,674, ಪುರುಷ ಮತದಾರರು 7,38,503 ಹಾಗೂ ಇತರೆ ಮತದಾರರು 54 ಮಂದಿ ಇದ್ದಾರೆ. ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ 1,837 ಮತಗಟ್ಟೆಗಳಿವೆ.

ಕುಂದಾಪುರ ವಿ.ಸಭಾ ಕ್ಷೇತ್ರದ 222 ಮತಗಟ್ಟೆ ವ್ಯಾಪ್ತಿಯಲ್ಲಿ 97,692 ಪುರುಷರು, 1,05,585 ಮಹಿಳೆಯರು ಮತ್ತು ಇತರೆ 2 ಮಂದಿ ಸೇರಿದಂತೆ ಒಟ್ಟು 2,03,279 ಮಂದಿ ಮತದಾರರಿದ್ದಾರೆ. ಉಡುಪಿ ಕ್ಷೇತ್ರದ 226 ಮತಗಟ್ಟೆ ವ್ಯಾಪ್ತಿಯಲ್ಲಿ 1,01,386 ಪುರುಷರು, 1,08,116 ಮಹಿಳೆಯರು ಮತ್ತು ಇತರೆ 2 ಮಂದಿ ಸೇರಿ ಒಟ್ಟು 2,09,504 ಮಂದಿ ಮತದಾರರಿದ್ದಾರೆ.

ಕಾಪುವಿನ 208 ಮತಗಟ್ಟೆ ವ್ಯಾಪ್ತಿಯಲ್ಲಿ 87,704 ಪುರುಷರು, 96,384 ಮಹಿಳೆಯರು ಮತ್ತು ಇತರೆ 13 ಮಂದಿ ಸೇರಿ ಒಟ್ಟು 1,84,101 ಮತದಾರರಿದ್ದಾರೆ. ಕಾರ್ಕಳದ 209 ಮತಗಟ್ಟೆ ವ್ಯಾಪ್ತಿಯಲ್ಲಿ 87,915 ಪುರುಷರು, 95,612 ಮಹಿಳೆಯರು ಮತ್ತು ಇತರೆ ಓರ್ವರು ಸೇರಿ ಒಟ್ಟು 1,83,528 ಮಂದಿ ಮತದಾರರಿದ್ದಾರೆ.

ಶೃಂಗೇರಿಯ 256 ಮತಗಟ್ಟೆ ವ್ಯಾಪ್ತಿ ಯಲ್ಲಿ 81,605 ಪುರುಷರು, 83,889 ಮಹಿಳೆಯರು ಮತ್ತು ಇತರೆ 4 ಮಂದಿ ಸೇರಿ ಒಟ್ಟು 1,65,498 ಮತದಾರರಿದ್ದಾರೆ. ಮೂಡಿಗೆರೆಯ 231 ಮತಗಟ್ಟೆ ವ್ಯಾಪ್ತಿ ಯಲ್ಲಿ 83,054 ಪುರುಷರು, 85,711 ಮಹಿಳೆಯರು ಮತ್ತು ಇತರೆ 9 ಮಂದಿ ಸೇರಿ ಒಟ್ಟು 1,68,774 ಮಂದಿ ಮತ ದಾರರಿದ್ದಾರೆ. ಚಿಕ್ಕಮಗಳೂರಿನ 257 ಮತಗಟ್ಟೆ ವ್ಯಾಪ್ತಿಯಲ್ಲಿ 1,06,964 ಪುರುಷರು, 1,07,971 ಮಹಿಳೆಯರು ಮತ್ತು ಇತರೆ 23 ಮಂದಿ ಸೇರಿ ಒಟ್ಟು 2,19,958, ತರೀಕೆರೆಯ 228 ಮತ ಗಟ್ಟೆ ವ್ಯಾಪ್ತಿಯಲ್ಲಿ 92,183 ಪುರುಷರು, 91,406 ಮಹಿಳೆಯರು ಸೇರಿ ಒಟ್ಟು 1,83,589 ಮಂದಿ ಮತದಾರರಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ