
ಸಹಾಯಕ ಆಯುಕ್ತರ ಮುಂದೆ ಅಂಗವಿಕಲರ ಅಳಲು
Team Udayavani, May 11, 2022, 4:58 PM IST

ಲಿಂಗಸುಗೂರು: ಸರ್ಕಾರಿ ಆಸ್ಪತ್ರೆ, ಕಂದಾಯ ಅ ಧಿಕಾರಿಗಳು ಸೇರಿದಂತೆ ತಾಲೂಕಿನಲ್ಲಿ ಅಂಗವಿಕಲರಿಗೆ ನಿಯಮದಂತೆ ಸೌಲತ್ತುಗಳನ್ನು ನೀಡುತ್ತಿಲ್ಲ ಎಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಅಂಗವಿಕಲರ ಕುಂದು-ಕೊರತೆ ಸಭೆಯಲ್ಲಿ ಅಂಗವಿಕಲರು ಎಸಿ ರಾಹುಲ್ ಸಂಕನೂರು ಮುಂದೆ ಅಳಲು ತೋಡಿಕೊಂಡರು.
ವೈದ್ಯರು ಅಂಗವಿಕಲತೆ ಪ್ರಮಾಣ ಪತ್ರ ನೀಡುವಾಗ ಅರ್ಹರಲ್ಲದವರಿಗೆ ಹಣ ಪಡೆದು ಅಂಗವಿಕಲತೆ ಪ್ರಮಾಣ ಪತ್ರ ನೀಡುತ್ತಾರೆ. ಅರ್ಹ ಅಂಗವಿಕಲರು ಹಣ ನೀಡದೇ ಇದ್ದಾಗ ವಿಕಲತೆ ಪ್ರಮಾಣ ಕಡಿಮೆ ತೋರಿಸುತ್ತಾರೆ. ಇದರ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಮಾಸಾಶನ, ಪಂಚಾಯಿತಿ ವಸತಿ ಸೌಕರ್ಯ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಸಹಾಯಕ ಆಯುಕ್ತರ ಗಮನಕ್ಕೆ ತಂದರು.
ಈ ವೇಳೆ ಬಿಇಒ ಹುಂಬಣ್ಣ ರಾಠೊಡ, ಬಿಸಿಎಂ ಅಧಿ ಕಾರಿ ಮರಿಯಮ್ಮ, ಶಿಕ್ಷಣ ಇಲಾಖೆಯ ಎ.ಆರ್. ನದಾಫ್, ಸುರೇಶ ಬಂಡಾರಿ, ವಿರುಪಾಕ್ಷಯ್ಯ ಹಿರೇಮಠ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
