ಮಾತುಗಳಿಗೆ ತಡಕಾಡುತ್ತಿದ್ದ ಹುಡುಗನ ಸಾಧನೆ ಜಗತ್ತನ್ನು ಮೌನವಾಗಿಸಿತು!


Team Udayavani, Oct 27, 2020, 3:53 PM IST

einstein

ಆ ಹುಡುಗನನ್ನು ನೋಡಿದಾಗ ಹೆತ್ತವರಿಗೇ ಏನೋ ಕೊರತೆ ಇದೆ ಎಂದೆನಿಸುತ್ತಿತ್ತು.

ಅಂಗ ನ್ಯೂನತೆಗಳಿಲ್ಲದಿದ್ದರೂ ಆ ಹುಡುಗನಲ್ಲಿ ಮಾತುಗಳ ಕೊರತೆ ಇತ್ತು.

ಐದು ವರ್ಷಗಳವರೆಗೆ ಕೇವಲ ಬೆರಳೆಣಿಕೆಯಷ್ಟು ಮಾತುಗಳನ್ನು ಮಾತ್ರ ಆಡುತ್ತಿದ್ದ ಅವನ ನಡವಳಿಕೆ ಶಾಲೆಯಲ್ಲಿ ಅಧ್ಯಾಪಕರಿಗೂ ಸೋಜಿಗವೆನಿಸಿತ್ತು.

ಮಾತು ಆಡುವುದಕ್ಕಿಂತ ಮೊದಲು ಅವುಗಳನ್ನು ಬರೆದು ಅದನ್ನು ಓದಿ ಮನದಟ್ಟು ಮಾಡಿದ ಬಳಿಕ ಹೇಳುತ್ತಿದ್ದ. ಇದಕ್ಕೆ ಸಮಯವೂ ಬಹಳಷ್ಟು ಬೇಕಾಗುತ್ತಿತ್ತು.

ಹಾಗಾಗಿಯೇ ಶಾಲೆಯಲ್ಲಿ ಇತರ ಮಕ್ಕಳಿಗೂ ಅವನೆಂದರೆ ಹಾಸ್ಯಾಸ್ಪದನಾಗಿದ್ದ. ಆದರೆ ಅದೇ ಬಾಲಕ ಮುಂದೊಂದು ದಿನ ಇಡೀ ಜಗತ್ತು ತನ್ನೆಡೆಗೆ ತಿರುಗಿ ನೋಡುವಂತೆ ಮಾಡುತ್ತಾನೆಂಬ ಯಾವ ಕಲ್ಪನೆ ಇರಲಿಲ್ಲ. ಅವರೇ ಆಲ್ಬರ್ಟ್‌ ಐನ್‌ಸ್ಟೀನ್‌.

1879ರಲ್ಲಿ ಜರ್ಮನಿಯ ಮಧ್ಯಮ ವರ್ಗದಲ್ಲಿ ಜನಿಸಿದ ಐನ್‌ಸ್ಟೀನ್‌ಗೆ ಮಾತು ಬಹುದೊಡ್ಡ ಕೊರತೆಯಾಗಿತ್ತು. ಆದರೆ ಅದು ಅವರ ಸಾಧನೆಗೆ ಯಾವತ್ತೂ ಅಡ್ಡಿಯಾಗಲಿಲ್ಲ ಎಂಬುದೇ ವಿಶೇಷ. ಕೇವಲ ಪಠ್ಯದಲ್ಲಿರುವ ವಿಷಯವನ್ನು ಮಾತ್ರ ಬೋಧಿಸುವ ಶಿಕ್ಷಣ ಪದ್ಧತಿಯೆಂದರೆ ಐನ್‌ಸ್ಟೀನ್‌ಗೆ ಸ್ವಲ್ಪ ಕಷ್ಟವೇ ಆಗಿತ್ತು.

ಅದಕ್ಕಿಂತ ಹೆಚ್ಚಾಗಿ ಅದರತ್ತ ಒಲವೇ ಮೂಡಲಿಲ್ಲ ಎಂದರೂ ತಪ್ಪಾಗಲಾರದು. ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಹೊಸತನ್ನು ಪ್ರಯೋಗಿಸಬೇಕೆಂದುಕೊಂಡು ಬೆಳೆದ ಆತನಿಗೆ ಶಾಲೆ ಅದಕ್ಕೆ ನೆರವಾಗಲಿಲ್ಲ. ಆ ಕಾರಣಕ್ಕಾಗಿಯೇ 15ನೇ ವಯಸ್ಸಿಗೆ ಶಾಲೆ ತೊರೆದು ಹೋಗುತ್ತಾನೆ. ಮುಂದೆ ಸ್ವಿಸ್‌ ಫೆಡರಲ್‌ ಪಾಲಿಟೆಕ್ನಿಕ್‌ ಸ್ಕೂಲ್‌ ಸೇರಿಕೊಳ್ಳುತ್ತಾರೆ.

ಗಣಿತ, ಫಿಸಿಕ್ಸ್‌ ವಿಷಯಗಳು ಬಿಟ್ಟರೆ ಇತರ ವಿಷಯಗಳಲ್ಲಿ ಅವರಿಗೆ ಆಸಕ್ತಿ ಇಲ್ಲದುದರಿಂದ ಹಾಗೂ ಮಾತುಗಳು ಎಡುವುತ್ತಿದ್ದುದರಿಂದ ಕಾಲೇಜಿನಲ್ಲಿ ಸೀಟ್‌ ದೊರಕಲು ಹಾಗೂ ಮುಂದೆ ಉದ್ಯೋಗ ದೊರಕಲು ಕಷ್ಟವಾಯಿತು.

ವಿದ್ಯಾಭ್ಯಾಸ ಮುಗಿಸಿದ ಐನ್‌ಸ್ಟಿàನ್‌ ಪೇಟೆಂಟ್‌ ಸಂಸ್ಥೆಯೊಂದರಲ್ಲಿ ಕ್ಲರ್ಕ್‌ ಆಗಿ ಸೇರಿಕೊಳ್ಳುತ್ತಾರೆ. ತನ್ನ ಸಂಶೋಧನೆಗೆ ಬಹು ದೊಡ್ಡ ತಿರುವು ಇಲ್ಲಿಂದಲೇ ದೊರಕಿತು. ಕೆಲಸದ ಜತೆ ಬಿಡುವು ಆದಾಗಲೆಲ್ಲ ಸಂಶೋಧನೆ ಆರಂಭಿಸಿದ ಐನ್‌ಸ್ಟೀನ್‌. ಅಲ್ಲಿಯೇ ತನ್ನ ಪ್ರಮುಖ ಥಿಯರಿ E=mc2ಯನ್ನು ಹಾಗೂ ಸಾಪೇಕ್ಷ ಸಿದ್ಧಾಂತವನ್ನು ಅಭಿವೃದ್ಧಿಪಡಿಸುತ್ತಾರೆ. ಇದಕ್ಕಾಗಿ ಆತ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗುತ್ತಾನೆ. ಆದರೆ ಅನಂತರದ 11 ವರ್ಷಗಳವರೆಗೆ ಅವನಿಗೆ ಪ್ರಶಸ್ತಿ ಲಭಿಸುವುದಿಲ್ಲ. ಆ ಬಳಿಕ ಅವನ ಸಾಧನೆಗೆ ನೊಬೆಲ್‌ ಪ್ರಶಸ್ತಿ ಲಭಿಸುತ್ತದೆ. ನೂರಾರು ಪುಸ್ತಕಗಳನ್ನು ಬರೆದ ಆಲ್ಬರ್ಟ್‌ ತಮ್ಮ ನ್ಯೂನತೆಗಳ ಬಗ್ಗೆ ಹಿಂಜರಿಯುವವರಿಗೆ ಸ್ಫೂರ್ತಿಯಾಗುತ್ತಾರೆ. ಹೊಸತನ್ನು ಪ್ರಯತ್ನಿಸದವ ಯಾವುದನ್ನೂ ಸಾಧಿಸಲಾರ ಎಂಬ ಅವರ ಮಾತು ಕಾಲಾತೀತವಾಗಿದೆ.

ಅಣುಬಾಂಬ್‌ ಬಳಸದಿರಲು ಕರೆ
2ನೇ ಮಹಾಯುದ್ಧದ ಸಂದರ್ಭ ಜರ್ಮನಿಯಲ್ಲಿ ಹಿಟ್ಲರ್‌ನ ದಬ್ಟಾಳಿಕೆ ತುಸು ಜೋರಾಗಿಯೇ ಇತ್ತು. ಆ ಸಮಯದಲ್ಲಿ ಐನ್‌ಸ್ಟೀನ್‌ ಅಮೆರಿಕದಲ್ಲಿ ಇದ್ದರು. ಅಣ್ವಸ್ತ್ರಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಈ ಬಗ್ಗೆ ಅಮೆರಿಕ ಸರಕಾರಕ್ಕೆ ಎಚ್ಚರಿಸುತ್ತಿದ್ದ ಕೆಲವು ವಿಜ್ಞಾನಿಗಳು ಐನ್‌ಸ್ಟೀನ್‌ರನ್ನು ಭೇಟಿ ಮಾಡಿ ಮಾಹಿತಿ ಪಡೆದರು.

ಐನ್‌ಸ್ಟೀನ್‌. ಅಣುಬಾಂಬ್‌ನ ಸಾಧ್ಯತೆಗಳನ್ನು ವಿವರಿಸಿ ಅಮೆರಿಕ ಸರಕಾರಕ್ಕೆ ಪತ್ರ ಬರೆದಿದ್ದರು. ಬಳಿಕ ಅಮೆರಿಕ ಅಣುಬಾಂಬ್‌ ಅಭಿವೃದ್ಧಿಪಡಿಸಿ ಜಪಾನ್‌ನ ಹಿರೋಶಿಮಾ, ನಾಗಸಾಕಿಯ ಮೇಲೆ ಪ್ರಯೋಗಿಸಿ ವಿಶ್ವ ದುರಂತಕ್ಕೆ ಮುನ್ನುಡಿ ಬರೆಯಿತು. ಇದರಿಂದ ಮನನೊಂದಿದ್ದ ಐನ್‌ಸ್ಟೀನ್‌ ಅಣು ವಿಜ್ಞಾನವನ್ನು ಜಾಗತಿಕ ಶಾಂತಿ ಹಾಗೂ ಮಾನವ ಒಳಿತಿಗಾಗಿ ಬಳಸಬೇಕೆಂದು ಕರೆಕೊಟ್ಟರು.

ಶ್ರಾವ್ಯಾ, ಸೈಂಟ್‌ ಆ್ಯಗ್ನೆಸ್‌ , ಮಂಗಳೂರು 

ಟಾಪ್ ನ್ಯೂಸ್

1-ffsdf

ಸಿಎಂಗೆ ಬಿಜೆಪಿ‌ ಅಭಿನಂದನೆ : ಪಕ್ಷ-ಸರಕಾರದ ನಡುವಿನ ಅಂತರ ತಗ್ಗಿಸಲು ಕ್ರಮ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

1dsadsa

ಗೋವಾ :ಮಹಿಳಾ ಸಬಲೀಕರಣಕ್ಕಾಗಿ ಕಣದಿಂದ ಹಿಂದೆ ಸರಿದ ಮಾಜಿ ಸಿಎಂ ಫಲೈರೊ

6arrest

ಕುಣಿಗಲ್: ಕತ್ತು ಸೀಳಿ ಹತ್ಯೆ; ಆರೋಪಿಗಳಿಬ್ಬರ ಬಂಧನ

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ICC U-19 World Cup: Afghanistan beat Sri Lanka

ಲಂಕಾಗೆ ಶಾಕ್ ನೀಡಿದ ಅಫ್ಘಾನ್ ಹುಡುಗರು: ಸೆಮಿ ಫೈನಲ್ ತಲುಪಿದ ಅಫ್ಘಾನ್ ಅಂಡರ್ 19 ತಂಡ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

1-ffsdf

ಸಿಎಂಗೆ ಬಿಜೆಪಿ‌ ಅಭಿನಂದನೆ : ಪಕ್ಷ-ಸರಕಾರದ ನಡುವಿನ ಅಂತರ ತಗ್ಗಿಸಲು ಕ್ರಮ

7drugs

2.24 ಕೆ.ಜಿ ಗಾಂಜಾ-ವ್ಯಕ್ತಿ ವಶಕ್ಕೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

1dsadsa

ಗೋವಾ :ಮಹಿಳಾ ಸಬಲೀಕರಣಕ್ಕಾಗಿ ಕಣದಿಂದ ಹಿಂದೆ ಸರಿದ ಮಾಜಿ ಸಿಎಂ ಫಲೈರೊ

vವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣವಚನ

ವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣವಚನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.