ಆಡಿದ ಅಟ್ಲಾಸ್‌ ಈಗ ನೆನಪಷ್ಟೇ…

Team Udayavani, Sep 21, 2020, 3:15 PM IST

sunset-5431000_1280

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅದೊಂದು ದಿನ ನಮ್ಮ ಮನೆಗೆ ಹೊಸ ಗಾಡಿ ಬಂತು. ಹೊಸದಂದ್ರೆ ಶೋ ರೂಂ ನಿಂದ ನೇರವಾಗಿ ತಂದಿದ್ದು ಅಲ್ಲ. ಸೆಕೆಂಡ್‌ ಹ್ಯಾಂಡ್‌ಗೆ ಎಷ್ಟೋ ನೂರು ರೂ.ಗಳು ಕೊಟ್ಟು ತೆಗದುಕೊಂಡು ಬಂದಿದ್ದು.

ಈಗಿನ ರಾಯಲ್‌ ಎನ್‌ಫೀ‌ಲ್ಡ್‌ ತರ. ಆಗ ಆ ಸೈಕಲ್‌ಗ‌ಳದ್ದೇ ಒಂದು ಜಮಾನ. ಎತ್ತರವಾಗಿ ಕಾಲು ನಿಲುಕಾದಾಗಿತ್ತು ಆ ಸೈಕಲ್‌. ಅದರ ಹೆಸರು ಅಟ್ಲಾಸ್‌…

ಮನೇಲಿ ನಾವು ನೋಡ್ತಿರೋ ಮೊದಲ ಗಾಡಿಯೇ ಇದಾಗಿತ್ತು. ನಾನು ಮತ್ತು ನನ್ನ ತಂಗಿ ಆ ಸೈಕಲ್‌ ಆಗಮನವನ್ನು ಕಂಡು ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದ್ವಿ. ಸ್ನೇಹಿತರಿಗೆ, ಅಪ್ಪ ಸೈಕಲ್‌ ತಂದ ಸುದ್ದಿಯನ್ನು ಕೇರಿಯ ಎಲ್ಲ ಜನರಿಗೆ ಹೇಳಿ ಬಂದಿದ್ದೆವು.

ನಮ್ಮ ಹೈಸ್ಕೂಲ್‌ ಮನೆಯಿಂದ ನೂರು ಮೀ. ದೂರದಲ್ಲೇ ಇತ್ತು. ರೋಡ್‌ನ‌ ದಾರಿಯನ್ನು ಹಿಡಿದು ಹೊರಟರೇ ಮಾತ್ರ ಸುಮಾರು ಅರ್ಧ ಕಿ. ಮೀ. ಆಗುತ್ತಿತ್ತು. ಅದಕ್ಕೆ ನಾವು ನಡ್ಕೊಂಡು ಹೋಗುವ ಬದಲು ಅಪ್ಪನಿಗೆ ಅಟ್ಲಾಸ್‌ ಸೈಕಲ್‌ನಲ್ಲಿ ಬಿಟ್ಟು ಬರಲು ಹೇಳ್ತಾಯಿದ್ವಿ. ಇಲ್ಲಂದ್ರೆ ಹಠ ಮಾಡ್ತಾಯಿದ್ವಿ. ಇಲ್ಲೇ ಸಮೀಪದಲ್ಲಿ ಸ್ಕೂಲ್‌ ಇದೆಯಲ್ಲ ಹೋಗಿ ಅಂದ್ರೆ ನಾವು ಕೇಳ್ತಾಯಿರಲಿಲ್ಲ. ಕೊನೆಗೆ ಅಪ್ಪನ ಅಂಬಾರಿಯಲ್ಲಿ ನಮ್ಮನ್ನು ಕೂರಿಸಿಕೊಂಡು ರಾಜ ಮೆರವಣಿಗೆ ಹೊರಡ್ತಾಯಿದ್ರು. ಶಾಲೆಗೆ ಆ ಅಟ್ಲಾಸ್‌ ಅಂಬಾರಿ ಮೇಲೆ ಹೋದ್ರೆ ನಮಗೆ ರಾಜ ಮರ್ಯಾದೆ.

ಅಪ್ಪನೂ ತಾವು ಹೊಲಕ್ಕೆ, ಪೇಟೆಗೆ ಹೋಗಬೇಕಾದ್ರೆ ಇದೇ ಅಟ್ಲಾಸ್‌ ಸೈಕಲ್‌ನ್ನೇ ಆಶ್ರಯಿಸುತ್ತಿದ್ದರು. ಪ್ರತಿ ಅಮಾವಾಸ್ಯೆ ರಾತ್ರಿ ನನ್ನ ಸಣರ್ಮಿ ಮುತ್ಯಾನ (ಗುಡ್ಡದಲ್ಲಿ ಇರೋ ಸಂತರ ಗುಡಿ) ಹತ್ರ ಕರ್ಕೊಂಡ್‌ ಹೋಗ್ತಾ ಇದ್ದುದ್ದು ನನ್ನ ಕಣ್ಣಲ್ಲಿ ಕಟ್ಟಿದಂತೆಯಿದೆ.

ಹೀಗೆ ದಿನ ಕಳೆದಂತೆ ಅಪ್ಪ ಬೈಕ್‌ ತೆಗದುಕೊಂಡ ಬಳಿಕ ಸೈಕಲ್‌ ನನ್ನ ಪಾಲಾಯ್ತು. ಎರಡು ರಾಡ್‌ಗಳ ಮಧ್ಯೆ ಕಾಲು ತೂರಿಸಿ ಸೈಕಲ್‌ ಕಲಿಕೆ ಮುಂದಾಗಿ ಮುಂದಿನ ಸೀಟ್‌ ಏರಿ ಸೈಕಲ್‌ ಸವಾರಿ ನಡೆಸತೊಡಗಿದೆ. ನಾನು ತುಂಬಾ ಗಿಡ್ಡವಾಗಿರುವ ಕಾರಣ ಸೀಟ್‌ನ ಮೇಲೆ ಕುಳಿತರೇ ಪೆಡಲ್‌ಗೆ ಕಾಲು ನಿಲುಕ್ತಾಯಿರಲಿಲ್ಲ. ಹಾಗಾಗಿ ನಾನು ಎಷ್ಟೋ ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದು ಇದೆ. ಕೊನೆಗೆ ಸೈಕಲ್‌ ಓಡಿಸುವುದು ಕಲಿತೆ. ಅಟ್ಲಾಸ್‌ ಸೈಕಲ್‌ನೊಂದಿಗೆ ನನ್ನದು ಎಂದೂ ಮರೆಯದ ಬಂಧ.

ರಂಗು ರಂಗಾದ ರಿಬ್ಬನ್‌ ಕಟ್ಟುವುದು, ಪ್ರತಿ ದಿನ ಶುಚಿಗೊಳಿಸುತ್ತ ಅಂಬಾರಿಯಂತೆ ನಾನು ನೋಡಿಕೊಳ್ಳುತ್ತಿದ್ದೆ. ಆದರೆ ಇಂದು ಆ ಅಟ್ಲಾಸ್‌ ಸೈಕಲ್‌ ಇಲ್ಲವಾಗಿರುವುದು ನೆನಸಿಕೊಂಡರೆ ಹೃದಯಭಾರವೆನಿಸುತ್ತದೆ.

 ಮಹೇಶ ಬಿ. ನಾಯಕ, ಎನ್‌.ವಿ. ಡಿಗ್ರಿ ಕಾಲೇಜ್‌, ಕಲಬುರ್ಗಿ 

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.