Udayavni Special

ನಮ್ಮ ಕಾಲಂ: ಆತ್ಮ ಸಾಕ್ಷಾತ್ಕಾರಕ್ಕೆ ಆತ್ಮವಿಶ್ವಾಸವೇ ಮೊದಲ ಮೆಟ್ಟಿಲು


Team Udayavani, Aug 30, 2020, 4:45 PM IST

self confidence 1

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸಾಧಿಸುವ ಛಲವಿದ್ದರೂ ಮುಂದುವರಿಯಲಾಗದ ಕೀಳರಿಮೆ, ಹಿಂಜರಿಕೆ. ಪ್ರತಿಭೆ ಇದ್ದರೂ ಅನಾವರಣಗೊಳಿಸಲಾಗದ ಅಪಮಾನಗಳು ಮನುಷ್ಯನನ್ನ ಕಟ್ಟಿಹಾಕುತ್ತವೆ.

ಇಂತಹ ಸನ್ನಿವೇಶದಲ್ಲಿ ನಾವು ಆತ್ಮವಿಶ್ವಾಸವನ್ನು ತಡಕಾಡಲು ಶುರು ಮಾಡುತ್ತೇವೆ.

ಅಸಲಿಗೆ ಆತ್ಮವಿಶ್ವಾಸವನ್ನು ಪಡೆದುಕೊಳ್ಳಬೇಕೆನ್ನುವ ಹಂಬಲವನ್ನು ಯಾವ ವ್ಯಕ್ತಿ ಹೊಂದುತ್ತಾನೆ. ಅವನಿಗೆ ಜೀವನದಲ್ಲಿ ಆತ್ಮವಿಶ್ವಾಸವೇ ಆಧಾರ ಸ್ತಂಭವಾಗಿ ನಿಲ್ಲುತ್ತದೆ.

“ಎಷ್ಟು ದೇವರನ್ನ ನಂಬಿದರೇನು ನೀನು ಮೊದಲು ನಿನ್ನ ನೀ ನಂಬು’ ಎಂಬ ಕುವೆಂಪುರವರ ವಾಣಿ ಆತ್ಮವಿಶ್ವಾಸಕ್ಕೆ ಮದ್ದಿನಂತಿದೆ. ಮನುಷ್ಯನ ಮೊದಲನೆಯ ಶತ್ರು ತನ್ನಲ್ಲಿರುವ ಅವಿಶ್ವಾಸ, ಅಪನಂಬಿಕೆ. ಬಹಳಷ್ಟು ಮಂದಿಗೆ ತನ್ನಲ್ಲಿರುವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ.

ಏಕೆಂದರೆ ತಮ್ಮನ್ನ ತಾವು ಎಂದು ಪರೀಕ್ಷಿಸಿ ಕೊಂಡಿರುವುದಿಲ್ಲ. ಯಾವುದೇ ಸೃಜನಾತ್ಮಕತೆಗೆ ಪ್ರಯತ್ನಿಸದೆ ಕೇವಲ ಯಾಂತ್ರಿಕವಾದ ಜೀವನವನ್ನು ಸಾಗಿಸುತ್ತಿರುತ್ತಾರೆ. ಪ್ರಪಂಚದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಭಿನ್ನ ಅವಲೋಕನ, ಆಲೋಚನೆ, ವಿಮರ್ಶೆ ಶಕ್ತಿ ಇರುತ್ತದೆ. ಆದರೆ ನಾವು ನಮ್ಮನ್ನು ಆತ್ಮಾವಲೋಕನ ಮಾಡಿಕೊಂಡಿರುವುದಿಲ್ಲ. ಬೇರೆಯವರು ಸಾಧಿಸುವುದನ್ನು ನೋಡಿ ಹಾಗೆಯೇ ಇದ್ದು ಬಿಡುತ್ತೇವೆ. ಬೇರೆಯವರನ್ನು ನೋಡಿದ ಮೇಲಾದರೂ ಹೊಸ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಅದೇ ನಾವು ಮಾಡುವ ದೊಡ್ಡ ತಪ್ಪು.

ಬಿಲ್ವಿದ್ಯೆಯನ್ನು ಕಲಿಯಲು ಹೊರಟ ಏಕಲವ್ಯನಿಗೆ ಗುರುಗಳು ಅವಕಾಶ ನೀಡದಿದ್ದಾಗ ತನ್ನ ವಿಶ್ವಾಸವನ್ನೇ ಪರೀಕ್ಷೆ ಮಾಡಿ ನೋಡುತ್ತಾನೆ ಆಗ ಆತ್ಮವಿಶ್ವಾಸವೇ ಅವನನ್ನು ಸಕಲ ಪಾರಂಗತನಾಗಿ ಮಾಡುತ್ತದೆ. ಆದ್ದರಿಂದ ನಾವು ನಮ್ಮಲ್ಲಿರುವ ಹಿಂಜರಿಕೆ, ಋಣಾತ್ಮಕ ಭಾವನೆ ಬಿಟ್ಟು ಸಕರಾತ್ಮಕ ಚಿಂತನೆಗಳ ಬಗ್ಗೆ ಆಲೋಚಿಸುತ್ತಾ ಹೋದರೆ ಗೆಲುವು ತನ್ನಿಂದತಾನಾಗಿಯೇ ಒಲಿಯುತ್ತದೆ. ಹೀಗಾಗಿ ನಾವು ಭೂತ- ಭವಿಷ್ಯತ್‌ ಕಾಲದ ಚಿಂತನೆ ಬಿಟ್ಟು ವರ್ತಮಾನದಲ್ಲಿ ಪ್ರಯತ್ನ ಪಟ್ಟರೆ ಕನಸು ನನಸಾಗುತ್ತದೆ. ಗೆಲುವು ನಿಶ್ಚಿತ.

 ಸಂಪತ್‌ ಶೈವ, ಸಂತ ಫಿಲೋಮಿನಾ ಕಾಲೇಜು, ಮೈಸೂರು 

 

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

832

ʼಇಂಗ್ಲಿಷ್‌ ಚಾನೆಲ್‌ʼ ಈಜಿದ ಏಷ್ಯಾದ ಮೊದಲ ಮಹಿಳೆ

ಹಾಜಿಕ್‌ ಕಾಜಿ

ಎಳವೆಯಲ್ಲಿ ಪರಿಸರ ಸರಂಕ್ಷಣೆ ಕುರಿತು ಅರಿವು ಮೂಡಿಸಲು ಹೊರಟ ಚಿನ್ನರು

apple

ಸ್ಟೇ ಹಂಗ್ರಿ ಆ್ಯಂಡ್‌  ಸ್ಟೇ ಫ‌ೂಲಿಶ್‌; ಖ್ಯಾತ ಆ್ಯಪಲ್‌ ಕಂಪೆನಿ ಹುಟ್ಟಿಕೊಂಡಿದ್ದೇಗೆ?

rangabhoomi

ಎಲ್ಲರನ್ನೂ ಸೆಳೆಯುವ ರಂಗಭೂಮಿ

girafe

ಭೂಮಿಯ ಮೇಲಿನ ಅತ್ಯಂತ ಎತ್ತರದ ಪ್ರಾಣಿಗೆ ಮುಳುವಾಗಿದ್ದು ಏನು?

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

ಕೊಡಗು: ಗುರುವಾರ 53 ಹೊಸ ಪ್ರಕರಣ

ಕೊಡಗು: ಗುರುವಾರ 53 ಹೊಸ ಪ್ರಕರಣ

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ: ಡಿಸಿ ಡಾ| ರಾಜೇಂದ್ರ

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ: ಡಿಸಿ ಡಾ| ರಾಜೇಂದ್ರ

ಡ್ರಗ್ಸ್‌ ಕಾರ್ಯಾಚರಣೆ: ಮೂವರು ಆರೋಪಿಗಳು ಸಿಸಿಬಿ ವಶಕ್ಕೆ

ಡ್ರಗ್ಸ್‌ ಕಾರ್ಯಾಚರಣೆ: ಮೂವರು ಆರೋಪಿಗಳು ಸಿಸಿಬಿ ವಶಕ್ಕೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.