Udayavni Special

ಭಾರತೀಯ ಸೇನೆಯ ಕಲಿ ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರ್ಯಪ್ಪ


Team Udayavani, Sep 17, 2020, 7:58 PM IST

FMC

ಭಾರತ ಸೈನ್ಯದ ಪ್ರಪ್ರಥಮ ಫೀಲ್ಡ್ ಮಾರ್ಷ್‌ಲ್‌ ಮಹಾದಂಡನಾಯಕ ಕೊದಂಡೆರ ಮಾದಪ್ಪ ಕಾರ್ಯಪ್ಪ ಅವರು ಭಾರತೀಯರ ಜನಮನದಲ್ಲಿ ಕಳಶಪ್ರಾಯರು. ಇವರು ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಭಾರತೀಯ ಸೇನೆಯಲ್ಲಿ ಅತ್ಯುನ್ನತ ಪದವಿ ಗಳಿಸಿದ್ದ ಇವರು ಶಿಸ್ತು, ಆದರ್ಶಕ್ಕೆ ಹೆಸರಾಗಿದ್ದರು. ಈ ಕಾರಣದಿಂದಲೇ ಅವರು ಕೊಡಗಿನ ಮಂದಿಗಷ್ಟೇ ಅಲ್ಲ; ಎಲ್ಲ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಇವರ ಸೇನೆಯ ಬದುಕಿನ ರೋಚಕ ಕ್ಷಣಗಳು ಕೇಳಿದರೆ ಮೈ ರೋಮಾಂಚನಗೊಂಡು ನಮ್ಮಲ್ಲೊಂದು ಕಿಡಿ ಹಚ್ಚುವಂತೆ ಮಾಡುತ್ತದೆ.

ಕಾರ್ಯಪ್ಪನವರು 1899ರ ಜನವರಿ 28ರಂದು ಕೊಡಗಿನ ಶನಿವಾರ ಸಂತೆಯಲ್ಲಿ ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ಆ ಬಳಿಕ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಕಾಲೇಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರ್ಯಪ್ಪನವರನ್ನು ಬಹಳಷ್ಟು ಆಕರ್ಷಿಸಿದ್ದವು. ಸಕ್ರಿಯ ಕ್ರೀಡಾಪಟು ಕೂಡ ಆಗಿದ್ದ ಇವರು ಹಾಕಿ ಮತ್ತು ಟೆನಿಸ್‌ನಂತಹ ಆಟಗಳಲ್ಲಿಯೂ ನಿಪುಣರಾಗಿದ್ದರು.

1918ರ ಮೊದಲನೆಯ ಮಹಾಯುದ್ಧ ಮುಗಿದಾಗ ಭಾರತೀಯರನ್ನೂ ಸೈನ್ಯಾಧಿಕಾರಿಗಳ ಸ್ಥಾನಕ್ಕೆ ಪರಿಗಣಿಸಲು ಕೂಗು ಕೇಳಿಬಂತು. ಆಗ ನಡೆದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಆಯ್ಕೆಗೊಂಡವರಲ್ಲಿ ಕಾರ್ಯಪ್ಪನವರೂ ಓರ್ವರು. ಮೊದಲು ಇಂದೂರಿನ ಡೆಲ್ಲಿ ಕೆಡೆಟ್‌ ಕಾಲೇಜಿನಲ್ಲಿ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡ ಕಾರ್ಯಪ್ಪನವರು ಮುಂದೆ ಮುಂಬಯಿಯಲ್ಲಿದ್ದ ಕಾರ್ನಾಟಿಕ್‌ ಪದಾತಿ ದಳಕ್ಕೆ ನಿಯುಕ್ತಿಗೊಂಡರು.

ಕ್ವೆಟ್ಟಾ ಮಹಾವಿದ್ಯಾಲಯಕ್ಕೆ ಸೇರಿದ ಮೊದಲ ಭಾರತೀಯ
ಮೊದಲ ಬಾರಿಗೆ ಇರಾಕ್‌(ಅಂದಿನ ಮೆಸೊ ಪೊಟಾಮಿಯಾ)ನಲ್ಲಿದ್ದ ವೇಲ್ಸ್ ರಾಜಕುಮಾರನ ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆ ಆರಂಭಿಸಿ, ಅನಂತರ ಇವರನ್ನು ವಿಕ್ಟೋರಿಯಾ ರಾಣಿಯ ಆಪ್ತ ದಳವಾದ 2ನೇ ರಾಜಪೂತ್‌ ಲಘು ಪದಾತಿ ದಳಕ್ಕೆ ವರ್ಗಾಯಿಸಲಾಯಿತು.ಸೇನೆಯಿಂದ ನಿವೃತ್ತಿಹೊಂದುವವರಿಗೂ ಇವರು ಇದೇ ಸೇನೆಯಲ್ಲಿ ಸೇವೆಗೈದರು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿ ಕಾರ್ಯಪ್ಪನವರಾಗಿದ್ದರು. ಮುಂದೆ 1946ರಲ್ಲಿ ಇವರಿಗೆ ಫ್ರಾಂಟಿಯರ್‌ ಬ್ರಿಗೇಡ್‌ ದಳದ ಬ್ರಿಗೇಡಿಯರ್‌ ಆಗಿ ಭಡ್ತಿ ನೀಡಲಾಯಿತು.

ತುಕಡಿಯನ್ನು ಪಡೆದ  ಮೊದಲ ಭಾರತೀಯ ಅಧಿಕಾರಿ
1941-42ರ ಅವಧಿಯಲ್ಲಿ ಇರಾಕ್‌, ಸಿರಿಯಾ ಮತ್ತು ಇರಾನ್‌ ಪ್ರದೇಶಗಳಲ್ಲಿ, 1943-44ರಲ್ಲಿ ಬರ್ಮಾ, ವಝಿರಿಸ್ತಾನದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ. 1942ರಲ್ಲಿ ಇವರ ಸ್ವಾಧೀನಕ್ಕೆ ಒಂದು ತುಕಡಿಯನ್ನು ಒಪ್ಪಿಸಲಾಯಿತು. ಈ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಇವರು. ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ 26ನೇಯ ಸೈನ್ಯವಿಭಾಗದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿದ ಕಾರ್ಯಪ್ಪನವರು ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್‌ ಆಫ್ ದಿ ಬ್ರಿಟಿಷ್‌ ಎಂಪೈರ್‌ ಗೌರವವನ್ನು ಪ್ರದಾನಿಸಲಾಯಿತು.

ಸಮರ್ಥ ನಾಯಕತ್ವ
ಕಾರ್ಯಪ್ಪನವರು ಇದ್ದ ಕಾಲದಲ್ಲಿ ಲೆಫ್ಟಿನೆಂಟ್‌ ಜನರಲ್‌ಎಂದಿದ್ದ ಹುದ್ದೆಯನ್ನು ಔನ್ನತ್ಯಗೊಳಿಸಿ ಈಸ್ಟರ್ನ್ ಆರ್ಮಿ ಕಮಾಂಡರ್‌ ಎಂದು ಮಾಡಲಾಯಿತು. ಝಿಲಾ, ದ್ರಾಸ್‌ ಮತ್ತು ಕಾರ್ಗಿಲ್‌ ಪ್ರದೇಶಗಳನ್ನು ಹಿಂದಿರುಗಿ ಪಡೆಯಲು ಸೈನ್ಯಕ್ಕೆ ಕಾರ್ಯಪ್ಪನವರು ಸಮರ್ಥ ನಾಯಕತ್ವ ನೀಡಿ, ಲೆಹ್‌ ಪ್ರದೇಶಕ್ಕೆ ಕಡಿದು ಹೋದ ಸಂಪರ್ಕವನ್ನು ಮರಳಿ ದೊರಕಿಸಿಕೊಟ್ಟರು. 1949ರಲ್ಲಿ ಅವರನ್ನು ಕಮಾಂಡರ್‌ ಇನ್‌ ಚೀಫ್ ಎಂದು ನೇಮಿಸಲಾಯಿತು. ಇಂಪೀರಿಯಲ್‌ ಆರ್ಮಿ ಎಂದು ಅಲ್ಲಲ್ಲಿ ಹಂಚಿಹೋಗಿದ್ದ ಭಾರತೀಯ ಸೈನ್ಯವನ್ನು ರಾಷ್ಟ್ರೀಯ ಸೈನ್ಯವಾಗಿ ಒಂದುಗೂಡಿಸಿದ ಶ್ರೇಯಸ್ಸು ಕಾರ್ಯಪ್ಪನವರಿಗೆ ಸಲ್ಲುತ್ತದೆ.‌

1953ರಲ್ಲಿ ಸೈನ್ಯದಿಂದ ನಿವೃತ್ತಿಯ ಅನಂತರದಲ್ಲಿ ಕಾರ್ಯಪ್ಪನವರು ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಭಾರತೀಯ ರಾಯಭಾರಿಯಾಗಿ ನಿಯೋಜಿಸಲ್ಪಟ್ಟಿದ್ದರು. ಬಹಳಷ್ಟು ದೇಶಗಳಲ್ಲಿನ ಸೈನ್ಯಗಳ ಸಂಘಟನೆಗಳ ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದ ಕಾರ್ಯಪ್ಪ ಚೀನ, ಜಪಾನ್‌, ಅಮೆರಿಕ, ಬ್ರಿಟನ್‌ ಮತ್ತು ಬಹುತೇಕ ಯೂರೋಪ್‌ ರಾಷ್ಟ್ರಗಳಲ್ಲಿಯೂ ಕಾರ್ಯಾಚರಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಟ್ರೂಮನ್‌ ಅವರು ಕಾರ್ಯಪ್ಪನವರಿಗೆ Order of the Chief Commander of the Legion of Merit ಪ್ರಶಸ್ತಿ ನೀಡಿ ಗೌರವಿಸಿದ್ದರು.

1962, 1965, 1971ರಲ್ಲಿ ಯುದ್ಧಗಳಾದಾಗ ಕಾರ್ಯಪ್ಪನವರು ಗಡಿಯಲ್ಲಿ ಸಂಚರಿಸಿ ಭಾರತೀಯ ಸೈನ್ಯಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದರು. 1983ರ ವರ್ಷದಲ್ಲಿ ಕಾರ್ಯಪ್ಪನವರ ಉತ್ಕೃಷ್ಟ ಸೇವೆಯ ಸ್ಮರಣಾರ್ಥವಾಗಿ ಭಾರತ ಸರಕಾರ ಅವರಿಗೆ ಫೀಲ್ಡ್ ಮಾರ್ಷಲ್‌ ಗೌರವವನ್ನು ಸಮರ್ಪಿ ಸಿತು. ತಮ್ಮ ನಿವೃತ್ತಿಯ ಬಹಳಷ್ಟು ವರ್ಷಗಳನ್ನು ಕಾರ್ಯಪ್ಪ ನವರು ಮಡಿಕೇರಿಯ ಸುಂದರ ಪರಿಸರದಲ್ಲಿ ಕಳೆದರು.
ಜತೆಗೆ ಸ್ವತಃ ಪ್ರಕೃತಿ ಪ್ರೇಮಿಯಾದ ಕಾರ್ಯಪ್ಪನವರು ಜನರಿಗೆ ಪ್ರಕೃತಿ ಪ್ರೇಮ, ಸ್ವತ್ಛತೆ ಮತ್ತು ಬದುಕಿನ ಹಲವಾರು ಸೌಂದರ್ಯ ವಿಚಾರಗಳ ಕುರಿತಾದ ಶಿಕ್ಷಣ ನೀಡುವ ಕೆಲಸವನ್ನು ಸಾಂಗವಾಗಿ ನಡೆಸಿದರು. 94 ವರ್ಷಗಳ ಶುದ್ಧ ಜೀವನವನ್ನು ನಡೆಸಿದ ಕಾರ್ಯಪ್ಪನವರು ಮೇ 15, 1993ರಂದು ಬೆಂಗಳೂರಿನಲ್ಲಿ ನಿಧನರಾದರು.

ಪ್ರತಿಯೊಬ್ಬ ಯೋಧ‌ನೂ ನನ್ನ ಮಗನೆ
1965ರ ಅವಧಿಯಲ್ಲಿ ಭಾರತೀಯ ವಾಯುದಳದ ಪೈಲಟ್‌ ಆದ ಅವರ ಮಗ ಪಾಕಿಸ್ಥಾನಿ ಸೇನೆಗೆ ಸೆರೆಸಿಕ್ಕ ಸಂದರ್ಭ ದಲ್ಲಿ ಸ್ವಾತಂತ್ರÂ ಪೂರ್ವದಲ್ಲಿ ಅವರ ಸಹಾಯಕರಾಗಿದ್ದ ಸ್ನೇಹದಲ್ಲಿ ಪಾಕಿಸ್ಥಾನದ ಅಧ್ಯಕ್ಷ ಅಯೂಬ್‌ ಖಾನ್‌ ಅವರು, ಕಾರ್ಯಪ್ಪನವರಿಗೆ ಅವರ ಮಗನನ್ನು ಉಳಿದ ಶತ್ರುಸೈನಿಕರಂತೆ ಕಾಣುವುದಿಲ್ಲ ಎಂಬ ಮಾತನಾಡಿದಾಗ, ಅದನ್ನು ತಿರಸ್ಕರಿಸಿದ ಕಾರ್ಯಪ್ಪನವರು ಈ ದೇಶದ ಪ್ರತಿಯೊಬ್ಬ ಯೋಧನೂ ನನ್ನ ಮಗ ಎಂದಿದ್ದರು.

 ಸುಶ್ಮಿತಾ ಜೈನ್‌, ಉಜಿರೆ 

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

000.

ಆರ್ ಸಿಬಿ vs ಚೆನ್ನೈ ಕಾದಾಟ : ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

bihar

ಬಿಹಾರ: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

News-tdt-01

ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ರಾಜ್ಯಕ್ಕೆ ಪರಿಹಾರ ತರಲಿ:  ಸಿದ್ದರಾಮಯ್ಯ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pooja (nam shifarassu)(3)

ಸಾಧನೆಯ ಹಾದಿಯಲಿ ಯುವ ಪ್ರತಿಭೆ ಪೂಜಾ

Tour circle-gadayikallu 1

ನೆನಪುಗಳ ಬುತ್ತಿಯೊಳಗಣ ಮಧುರ ಅನುಭವ ಗಡಾಯಿಕಲ್ಲು

MallaKhamba

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ

speed

ಗೆಲ್ಲಲು ಕಲಿಯುವ ಮೊದಲು ಸೋಲಲೇಬೇಕು !

Stif

ವ್ಹೀಲ್‌ಚೇರ್‌ನಲ್ಲಿ ಕುಳಿತು ವಿಜ್ಞಾನ ಲೋಕಕ್ಕೇ ಮಾರ್ಗದರ್ಶನ ನೀಡಿದ ಸ್ಟೀಫ‌ನ್‌ ಹಾಕಿಂಗ್‌

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

uk-tdy-2

ಕೋವಿಡ್‌ನಿಂದ ನಲುಗುತ್ತಿದೆ ಜಿಲ್ಲೆಯ ಆರ್ಥಿಕತೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

UK-TDY-1

ಅಪರೂಪದ ಅಪ್ಪೆ ಮಾವಿಗೆ ಕಸಿ ಕಾಯಕಲ್ಪ

KOPALA-TDY-1

ಕೆರೆ ಭರ್ತಿಯಾದರೂ ರೈತರಿಗಿಲ್ಲ ನೆಮ್ಮದಿ

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.