ಜಾನಪದ ಆಟಗಳನ್ನು ಮುನ್ನೆಲೆಗೆ ತಂದ ಲಾಕ್‌ ಡೌನ್‌


Team Udayavani, Jun 13, 2020, 2:39 PM IST

ಜಾನಪದ ಆಟಗಳನ್ನು ಮುನ್ನೆಲೆಗೆ ತಂದ ಲಾಕ್‌ ಡೌನ್‌

ಕೋವಿಡ್‌ ತಡೆಗಟ್ಟಲು ಜಾರಿಗೊಳಿಸಲಾದ ಲಾಕ್‌ಡೌನ್‌ ಕ್ರಮಗಳು ಹಲವು ಬದಲಾವಣೆಗಳಿಗೆ ಕಾರಣವಾಗಿವೆ. ಮನೆಯಲ್ಲಿಯೇ ಕುಳಿತು ಸುಸ್ತಾಗಿರುವ ಜನರು ಆಟಗಳ ಮೊರೆ ಹೋಗುತ್ತಿದ್ದಾರೆ. ಜಾನಪದ ಆಟಗಳು ಜನರ ನಡುವೆ ಹಾಸುಹೊಕ್ಕಾಗಿರುವ ಆಟಗಳು. ಗ್ರಾಮೀಣ ಜನರು ಮನೋರಂಜನೆಗಾಗಿ ಹಾಗೂ ದೈಹಿಕ ವ್ಯಾಯಾಮಕ್ಕಾಗಿ ಕಂಡುಕೊಂಡ ಆಟಗಳಾಗಿವೆ. ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿ-ವಸ್ತುಗಳನ್ನು ಬಳಸಿಕೊಂಡು ಆಟವಾಡಬಹುದು. ಈ ಮೂಲಕ ತಾವು ಮತ್ತು ತಮ್ಮ ಕುಟುಂಬದವರನ್ನು ರಂಜಿಸಿಕೊಳ್ಳಲು ಬಹಳ ಹಿಂದಿನಿಂದಲೂ ಇದರ ಮೊರೆ ಹೋಗಿದ್ದಾರೆ. ಈಗ ಅದೇ ಕ್ರೀಡೆಯನ್ನೇ ನಮ್ಮ ನಗರ ವಾಸಿಗಳು ಸಹ ಅಳವಡಿಸಿಕೊಂಡಿದ್ದಾರೆ.
ನಗರವಾಸಿಗಳು ಆರಿಸಿಕೊಂಡ ಆಟಗಳು ಒಳಾಂಗಣ ಕ್ರೀಡೆಗಳು. ನಮ್ಮ ಜನರು ಈ ಆಟಗಳನ್ನು ಮನೆಯ ಮಂದಿಯ ಜತೆ ಆಟವಾಡುತ್ತಾ, ಮಾನಸಿಕವಾದ ನೆಮ್ಮದಿ ಹಾಗೂ ಸಂತಸವನ್ನು ಪಡೆಯುತ್ತಿದ್ದಾರೆ. ಒಬ್ಬರನೊಬ್ಬರು ಅರ್ಥೈಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಎಲ್ಲಾ ಹಳ್ಳಿಗಳಿಗೆ ಸೀಮಿತವಾಗಿದ್ದ ಆಟಗಳು ಇಂದು ನಗರ ಪ್ರದೇಶಗಳ ಮಕ್ಕಳಲ್ಲಿ ಕಂಡುಬರುತ್ತಿವೆ.

ನಮ್ಮ ನಗರ ವಾಸಿ ಮಕ್ಕಳಿಗೆ ಈ ಆಟ ಪರಿಚಯವಾಗುತ್ತಿದೆ ಎಂಬ ಖುಷಿ ಇದೆ. ಮಕ್ಕಳಿಗೆ ನೀಡುತ್ತಿದ್ದ ದುಬಾರಿ ವಸ್ತುಗಳು ಮನೆಯ ಮೂಲೆ ಸೇರಿವೆ. ಮೂಲೆಯಲ್ಲಿದ್ದ ಸಾಮಾನ್ಯ ವಸ್ತುಗಳು ಮಕ್ಕಳ ಆಟಿಕೆಯಾಗಿವೆ. ಜನರಿಗೆ ಇಷ್ಟು ದಿನಗಳ ಕಾಲ ಅವರದೇ ಕೆಲಸದ ಜವಾಬ್ದಾರಿಗಳಿಂದ ಮನೆಯವರ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಅದೇ ಈಗ ಲಾಕ್‌ಡೌನ್‌ ಮೂಲಕ ಜನರು ತಮ್ಮ ಮನೆಯವರನ್ನು , ತಮ್ಮ ಮಕ್ಕಳನ್ನು ಸಂತೋಷದಿಂದ ಅರ್ಥಮಾಡಿಕೊಂಡು ಆಡುತ್ತಿದ್ದಾರೆ. ಲಾಕ್‌ಡೌನ್‌ ಅನಂತರವೇ ಈ ಜನಪದ ಆಟಗಳು ನೆನಪಾಗಿವೆ. ಮಕ್ಕಳಿಗೆ ಒಂದು ರೀತಿಯ ಹೊಸ ಅನುಭವ ಮನೆಯಲ್ಲೇ ಇದ್ದು ಇಷ್ಟು ರೀತಿಯ ಆಟಗಳನ್ನು ಆಡಬಹುದು ಎಂಬುವುದನ್ನು ಅರಿತುಕೊಂಡಿದ್ದಾರೆ. ಮಕ್ಕಳನ್ನು ಚುರುಕಾಗಿಡಲು ಅಳಿಗುಳಿ, ಚೌಕಾಬಾರದಂತಹ ಕೆಲವು ಆಟಗಳಿವೆ. ಇವುಗಳು ಮನೋರಂಜನೆಯ ಜತೆಗೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ.


ಐಶ್ವರ್ಯ ಕೆ.ಆರ್‌. ಸಂತ ಫಿಲೋಮಿನಾ ಕಾಲೇಜ್‌, ಮೈಸೂರು

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.