ಸೂರ್ಯನಂತೆ ಹೊಳೆಯಲು ಮೊದಲು ಉರಿಯಬೇಕು


Team Udayavani, Feb 26, 2021, 3:16 PM IST

Sun and life

ಜೇನುನೊಣವು ಝೇಂಕರಿಸುತ್ತಾ ಪ್ರತಿಯೊಂದು ಹೂವಿನ ಬಳಿ ಸಾಗಿ ಮಕರಂದವನ್ನು ಸಂಗ್ರಹಿಸುತ್ತದೆ. ಒಂದೊಂದು ಹನಿಗೂ ಅದು ಪಡುವ ಕಷ್ಟವೂ ಸವಿಯಾದ ಜೇನನ್ನು ರೂಪಿಸುತ್ತದೆ.

ನಮ್ಮ ವ್ಯಕ್ತಿತ್ವವೂ ಹೀಗೆಯೇ. ಹಲವು ವ್ಯಕ್ತಿಗಳು, ಘಟನೆಗಳು, ಸಂದರ್ಭ, ಸನ್ನಿವೇಶ, ಅವಕಾಶಗಳು ನಮ್ಮನ್ನು ಸಾಧನೆಗೆ ಪ್ರೇರೇಪಿಸುತ್ತವೆ. ಒಬ್ಬ ರೋಗಿ, ಮುದುಕ, ಶವವೂ ಬುದ್ಧನ ಹುಟ್ಟಿಗೆ ಕಾರಣವಾದಂತೆ ನಮ್ಮ ವ್ಯಕ್ತಿತ್ವದ ಉಗಮದಲ್ಲು ಹಲವು ಅಂಶಗಳು ಪ್ರಭಾವ ಬೀರುತ್ತವೆ.

ನನ್ನ ಮೇಲೆ ಪ್ರಭಾವ ಬೀರಿರುವ ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಲೇಬೇಕು. ಅಬ್ಬರಿಸುವ ತೆರೆಯ ನಡುವೆ ಈಜಿ, ಬಂಡೆಗಲ್ಲನ್ನೇರಿ ಧ್ಯಾನಸಕ್ತರಾದ ವಿವೇಕಾನಂದರ ಆತ್ಮಾಭಿಮಾನ, ದೇಶಭಕ್ತಿ, ಧೈರ್ಯ ಯುವಜನತೆಗೆ ಆದರ್ಶವಾಗಿರುವ ಅವರ ಸಂದೇಶಗಳಿಂದ ನಾನು ಪುಳಕಗೊಳ್ಳುತ್ತೇನೆ. ಸಾಗರದಾಚೆ ಸಹೋದರತ್ವ ಸಾರಿದ ಅವರ “ಶಕ್ತಿಯೇ ಜೀವನ, ದುರ್ಬಲತೆಯೇ ಮರಣ, ಅಧೈರ್ಯವೂ ಪತನಕ್ಕೆ ಹಾಗೂ ಪಾಪಕಾರ್ಯಕ್ಕೆ ಮೂಲ, ಆತ್ಮವಿಶ್ವಾಸದಿಂದ ಸಕಲವೂ ಸಾಧ್ಯ, ಗುರಿ ಮುಟ್ಟುವವರೆಗೂ ಪ್ರಯತ್ನಶೀಲರಾಗಿರಬೇಕು’ ಎಂಬ ಸಂದೇಶ ನನಗೆ ಸ್ಫೂರ್ತಿ. ಈ ಸಂದೇಶಗಳು ನಾನು ಸೋಲುವಾಗ ನನ್ನ ಜತೆ ನಿಲ್ಲುತ್ತವೆ. ನನ್ನನ್ನು ಪ್ರಯತ್ನ ಶೀಲಳಾನ್ನಾಗಿಸುತ್ತದೆ. ಧೈರ್ಯ ನೀಡಿ ಧನಾತ್ಮಕ ಚಿಂತನೆಗಳನ್ನು, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ನನಗೆ ವಿವೇಕಾನಂದರೇ ಸ್ಫೂರ್ತಿ.

ಭಾರತದ ಸುಪುತ್ರ, ಕನ್ನಡಿಗರ ಹೆಮ್ಮೆಯ ವಿಶ್ವೇಶ್ವರಯ್ಯನವರ ಹೆಸರು ಕೇಳದವರಿಲ್ಲ. ಇವರು ಕೇವಲ ಭಾರತದ ಉತ್ಥಾನಕ್ಕೆ ಕಾರಣರಲ್ಲ. ನನ್ನಲ್ಲೂ ಕ್ರಿಯಾಶೀಲತೆಯನ್ನು ಮೂಡಿಸಿದವರು. ಇವರು ಸಮಯಕ್ಕೆ ಮತ್ತು ಶಿಸ್ತಿಗೆ ಮಹತ್ವ ಕೊಡುತ್ತಿದ್ದುದು ಅನುಕರಣೀಯವಾಗಿದೆ. ಅವರ ಆರೋಗ್ಯ ಮತ್ತು ಕ್ರಿಯಾಶೀಲ ದೀರ್ಘಾಯುಷ್ಯದ ಗುಟ್ಟು ನನ್ನನ್ನು ಕುತೂಹಲಗೊಳಿಸುತ್ತದೆ. ಅವರು ಸದಾ ಪರಿಶ್ರಮಿಯಾಗಿದ್ದರು.

ಉಳಿದವರಿದಂಲೂ ಅದನ್ನೇ ಅಪೇಕ್ಷಿಸುತ್ತಿದ್ದರು. ಎಲ್ಲಿಯವರೆಗೆ ಅಲಸ್ಯವನ್ನು ತೊರೆಯುವುದಿಲ್ಲವೊ ಅಲ್ಲಿಯವರೆಗೆ ವಿಕಾಸ ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ವಿನಯಶೀಲತೆ ಮತ್ತು ಸಾಧು ಪ್ರಕೃತಿ ನನ್ನಲ್ಲೂ ಬೆಳೆಯ ಬೇಕೆನಿಸುತ್ತದೆ.

ಪ್ರಾಮಾಣಿಕತೆಯಂತೂ ಅವರ ಚರಿತ್ರೆಯ ಅವಿ ಭಾಜ್ಯ ಅಂಗವಾಗಿದೆ. ಅಸಾಧಾರಣ ಪ್ರತಿಭೆಯಿದ್ದರೂ ಗರ್ವದಿಂದ ಮೆರೆದವರಲ್ಲ. ಸದಾ ದೇಶದ ಅಭಿವೃದ್ಧಿ ಕನಸು ಕಾಣುತ್ತಿದ್ದರು. ಅವರ ಈ ಎಲ್ಲ ನಡೆಗಳು ನನ್ನಲ್ಲಿ ಹುರುಪು ಮೂಡಿಸುತ್ತವೆ.

ನಾವು ಪಡೆಯುವ ಗೌರವವು ನಮ್ಮ ಕಾರ್ಯದಿಂದ ಬರುತ್ತದೆಯೇ ಹೊರತು ನಾವು ನಿರ್ವಹಿಸುವ ವೃತ್ತಿ ಅಥವಾ ಹುದ್ದೆಯಿಂದಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಡಾ|ಎ.ಪಿ.ಜೆ ಅಬ್ದುಲ್‌ ಕಲಾಂ ನನ್ನ ಕನಸಿನ ನಕ್ಷತ್ರ. ಪತ್ರಿಕೆ ವಿತರಣೆ ಮಾಡುತ್ತಿದ್ದ ಹುಡುಗ ಶಿಕ್ಷಕ, ಲೇಖಕ, ಕ್ಷಿಪಣಿ ವಿಜ್ಞಾನಿ, ರಾಷ್ಟ್ರಪತಿ ಹುದ್ದೆಯನ್ನು ದಕ್ಷತೆಯಿಂದ ನಿರ್ವಹಿಸಿದರು. ಇದಕ್ಕೆ ಕಾರಣ ಅವರ ಪರಿಶ್ರಮ, ಚುರುಕು ಬುದ್ಧಿ, ವಿಷಯದ ಮೇಲೆ ಆಸಕ್ತಿ ಎಂಬುದು ನಮಗೆ ತಿಳಿದಿರುವ ಸತ್ಯ. ಕಲಾಂ ಅವರ ಈ ಸಾಧನೆ ನನ್ನ ಅಭಿರುಚಿಗೆ ಸ್ಫೂರ್ತಿ ಮಂತ್ರವಾಗಿದೆ.

ಹನಿ ಹನಿ ಕೂಡಿ ಹಳ್ಳವೆಂಬಂತೆ ಹಲವು ಸದ್ಗುಣಗಳು ಸೇರಿ ಉತ್ತಮಳಾಗಬೇಕೆಂಬುದು ನನ್ನ ಅಭಿಲಾಷೆ. ಸೂರ್ಯನಂತೆ ಹೊಳೆಯಲು ಮೊದಲು ಉರಿಯಬೇಕು ಎಂಬಂತೆ ನಾನು ಅವರು ಹಾಕಿ ಕೊಟ್ಟ ಹಾದಿಯಂತೆ ನಡೆಯಲು ಸಂಕಲ್ಪ ಮಾಡಿದ್ದೇನೆ.

 ಅಭಿಜ್ಞಾ ಲಕ್ಷ್ಮೀ ಪಿ., ವಿವೇಕಾನಂದ ಕಾಲೇಜು, ಪುತ್ತೂರು 

ಟಾಪ್ ನ್ಯೂಸ್

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

7-belthanagdy

Belthangady: ಎಕ್ರೆ ಪ್ರದೇಶದಲ್ಲಿ ಭತ್ತದ ಗದ್ದೆಗೆ ಆನೆ ದಾಳಿ

Sandalwood ; 7 movies releasing on October 6

Sandalwood ಸಿನಿಜಾತ್ರೆ; ಅಕ್ಟೋಬರ್‌ 6ಕ್ಕೆ 7 ಸಿನಿಮಾಗಳು ಬಿಡುಗಡೆ

6-vitla

Vitla: ಪೇಟೆಯ ಮೂರು ಕಡೆ ಸರಣಿ ಕಳ್ಳತನ

Kambala; ರಾಜಧಾನಿಯಲ್ಲಿ ಕಂಬಳ ಕಹಳೆ ಮೊಳಗಲು ದಿನಗಣನೆ; ಕರಾವಳಿಯಿಂದಲೇ ಕೋಣಗಳ ಮೆರವಣಿಗೆ

Kambala; ರಾಜಧಾನಿಯಲ್ಲಿ ಕಂಬಳ ಕಹಳೆ ಮೊಳಗಲು ದಿನಗಣನೆ; ಕರಾವಳಿಯಿಂದಲೇ ಕೋಣಗಳ ಮೆರವಣಿಗೆ

4-shobha

Politics: ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ: ಕೇಂದ್ರ ಸಚಿವೆ ಶೋಭಾ

Mysore; ಮಗಳನ್ನು ರಕ್ಷಿಸಲು ಹೋದ ತಂದೆ-ತಾಯಿಯೂ ನೀರುಪಾಲು; ಅಜ್ಜಿಯ ತಿಥಿಕಾರ್ಯದ ವೇಳೆ ಘಟನೆ

Mysore; ಮಗಳನ್ನು ರಕ್ಷಿಸಲು ಹೋದ ತಂದೆ-ತಾಯಿಯೂ ನೀರುಪಾಲು; ಅಜ್ಜಿಯ ತಿಥಿಕಾರ್ಯದ ವೇಳೆ ಘಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-fusion-tour

UV Fusion: ಅಚ್ಚರಿಯ ಆಗರ ಇಕ್ಕೇರಿಯ ಅಘೋರೇಶ್ವರ

14–fusion-hasthashilpa

Hasta Shilpa Heritage Village Museum ಬಲು ಸುಂದರ ಹೆರಿಟೇಜ್‌ ವಿಲೇಜ್‌

10-fusion-college-campus

UV Fusion: ಸ್ವಾರಸ್ಯಗಳ ತಾಣ ಕಾಲೇಜು ಕ್ಯಾಂಪಸ್‌

9-fusion-camparison

UV Fusion: ಹೋಲಿಕೆಯೆಂಬ ವಿಷದ ಮಾಲಿಕೆ

8–fusion-paper

UV Fusion: ಪೇಪರ್‌ ಬಾಯ್‌ಗೊಂದು ಸಲಾಂ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

7-belthanagdy

Belthangady: ಎಕ್ರೆ ಪ್ರದೇಶದಲ್ಲಿ ಭತ್ತದ ಗದ್ದೆಗೆ ಆನೆ ದಾಳಿ

Sandalwood ; 7 movies releasing on October 6

Sandalwood ಸಿನಿಜಾತ್ರೆ; ಅಕ್ಟೋಬರ್‌ 6ಕ್ಕೆ 7 ಸಿನಿಮಾಗಳು ಬಿಡುಗಡೆ

6-vitla

Vitla: ಪೇಟೆಯ ಮೂರು ಕಡೆ ಸರಣಿ ಕಳ್ಳತನ

Kalabauragi; ಶ್ರಮದಾನ: ಕಾರಿಡಾರ್ ಸುತ್ತಾಡಿ ಕಸಗುಡಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್

Kalabauragi; ಶ್ರಮದಾನ: ಕಾರಿಡಾರ್ ಸುತ್ತಾಡಿ ಕಸಗುಡಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.