ಹಾಕಿ ದಂತಕತೆ ಧ್ಯಾನ್‌ಚಂದ್‌


Team Udayavani, Jun 12, 2020, 3:13 PM IST

ಹಾಕಿ ದಂತಕತೆ ಧ್ಯಾನ್‌ಚಂದ್‌

ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಹಾಕಿ ಆಟಗಾರ, ಕ್ರೀಡಾಭಿಮಾನಿಗಳ ಪ್ರೀತಿಯ ದಾದಾ ಧ್ಯಾನ್‌ಚಂದ್‌. ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ರಜಪೂತ ಕುಟುಂಬವೊಂದರಲ್ಲಿ ಆಗಸ್ಟ್‌ 29, 1905ರಂದು ಜನಿಸಿದ ಇವರು ಹಾಕಿ ಕ್ಷೇತ್ರದ ದಂತಕತೆ. ಧ್ಯಾನ್‌ಚಂದ್‌ ಅವರ ವಿದ್ಯಾಭ್ಯಾಸ ಅತೀ ಕಡಿಮೆಯಾದರೂ ತಮ್ಮ 16ನೇ ವಯಸ್ಸಿನಲ್ಲೇ ಸೈನ್ಯ ಸೇರಿದ್ದರು. ಇವರ ತಂದೆ ಸುಬೇದಾರ್‌ ಸಾಮೇಶ್ವರ್‌ ದತ್‌ ಸಿಂಗ್‌ ಅವರೂ ಭಾರತದಲ್ಲಿದ್ದ ಬ್ರಿಟಿಷ್‌ ಸೈನ್ಯದಲ್ಲಿದ್ದರು ಎಂಬುದು ಗಮನಾರ್ಹ. 14ನೇ ಪಂಜಾಬ್‌ ರೆಜಿಮೆಂಟ್‌ ಸೇರಿ ಸ್ನೇಹಪೂರ್ವಕವಾಗಿ ಸೈನ್ಯದ ಇತರ ಸಿಬಂದಿಯೊಂದಿಗೆ ಆಡುತ್ತಿದ್ದರು. ಈವೇಳೆ ಇವರಲ್ಲೇನೋ ವಿಶೇಷವಿದೆ ಎಂದು ಗಮನಿಸಿದ ಮೇಜರ್‌ ಭೋಲೆ ತಿವಾರಿ ಅವರು ವೈಯಕ್ತಿಕ ನಿಗಾ ವಹಿಸುವ ಮೂಲಕ ಧ್ಯಾನ್‌ಚಂದ್‌ ಅವರಿಗೆ ಹಾಕಿ ತರಬೇತಿ ನೀಡಿದರು. ಬಳಿಕ ಸೇನೆ, ವಿವಿಧ ವಲಯ ಮಟ್ಟಗಳಲ್ಲಿ ಆಡಿ ಮತ್ತಷ್ಟು ನೈಪುಣ್ಯತೆ ಪಡೆದ ಇವರ ಅಂತಾರಾಷ್ಟ್ರೀಯ ಮಟ್ಟದ ಸಾಧನೆಯೇ ಒಂದು ಇತಿಹಾಸ.

ಹಾಕಿ ಮಾಂತ್ರಿಕ
1936ರ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಬಳಿಕ ಧ್ಯಾನ್‌ಚಂದ್‌ರ ಆಟ ನೋಡಲೆಂದೇ ಪ್ರೇಕ್ಷಕರು ಮುಗಿಬೀಳುತ್ತಿದ್ದರು. “ಹಾಕಿ ಆಟ ಇದೀಗ ಮ್ಯಾಜಿಕ್‌ ಶೋ ಆಗಿ ಪರಿವರ್ತನೆಯಾಗಿದೆ. ಭಾರತದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ರ ಆಟ ನೋಡಲು ತಪ್ಪದೇ ಕ್ರೀಡಾಂಗಣಕ್ಕೆ ಬನ್ನಿ ‘ ಎಂದು ಜರ್ಮನ್‌ ಪತ್ರಿಕೆಯೊಂದು ವರದಿ ಮಾಡಿತ್ತು.

ಮೇಜರ್‌ ಹುದ್ದೆಯ ನಿರಾಕರಣೆ
ಇವರ ಹಾಕಿ ಆಟಕ್ಕೆ ಮನಸೋತಿದ್ದ ಅಡಾಲ್ಫ್ ಹಿಟ್ಲರ್‌ ಜರ್ಮನ್‌ ತಂಡಕ್ಕಾಗಿ ಆಡುವಂತೆ ಹಲವು ಆಮಿಷಗಳನ್ನು ಒಡ್ಡಿದ್ದ. ಬ್ರಿಟಿಷ್‌ ಸೇನೆಯಲ್ಲಿ ಮೇಜರ್‌ ಹುದ್ದೆ, ಜರ್ಮನಿಯ ಪೌರತ್ವ ಮತ್ತು ಕರ್ನಲ್‌ ಗೌರವ ನೀಡುವುದಾಗಿ ತಿಳಿಸಿದರೂ ಧ್ಯಾನ್‌ಚಂದ್‌ ಅವರು ಮಾತ್ರ ಇದಾವುದಕ್ಕೂ ಒಪ್ಪಿರಲಿಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಸ್ವಲ್ಪ ಕಾಲ ಮಾತ್ರ ಆಡಿದ ಇವರು 1948ರಲ್ಲಿ ನಿವೃತ್ತರಾದರು. ಡಿಸೆಂಬರ್‌ 3, 1979ರಂದು
ನಿಧನ ಹೊಂದಿದರು.

ರೆಫ‌ರಿಯೊಂದಿಗೇ ವಾಗ್ವಾದ !
ಪಂದ್ಯವೊಂದರಲ್ಲಿ ಧ್ಯಾನ್‌ಚಂದ್‌ ಅವರಿಗೆ ಒಂದೂ ಗೋಲ್‌ ಬಾರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ರೆಫ‌ರಿಯೊಂದಿಗೇ ವಾಗ್ವಾದಕ್ಕಿಳಿದಿದ್ದ ಅವರು, ಕ್ರೀಡಾಂಗಣದಲ್ಲಿರುವ ಗೋಲ್‌ ಪೋಸ್ಟ್‌ ಅಳತೆ ಸರಿ ಇಲ್ಲ. ಅಂತಾರಾಷ್ಟ್ರೀಯ ನಿಯಮಗಳಿಗೆ ಇದು ವಿರುದ್ಧವಾಗಿದೆ ಎಂದು ದೂರಿದ್ದರು. ಇವರ ಮಾತಿನಂತೆಯೇ ಅಳತೆ ಮಾಡಿದಾಗ ಧ್ಯಾನ್‌
ಚಂದ್‌ರ ಅಭಿಪ್ರಾಯ ಅಕ್ಷರಶಃ ನಿಜವಾಗಿತ್ತು.

ಮೊದಲ ಪಂದ್ಯದಲ್ಲೇ ಮಿಂಚಿದ್ದ ಧ್ಯಾನ್‌ಚಂದ್‌
1928ರಲ್ಲಿ ಭಾರತೀಯ ಹಾಕಿ ತಂಡ ಸೇರಿದ್ದ ಇವರಿಗೆ ನೆದರ್‌ಲ್ಯಾಂಡ್‌ನ‌ ಆಮ್‌ಸ್ಟೆರ್‌ಡ್ಯಾಮ್‌ನಲ್ಲಿ ಆಯೋಜಿಸಲಾಗಿದ್ದ ಬೇಸಗೆಯ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆಯಿತು. ನೆದರ್‌ಲ್ಯಾಂಡ್‌ ವಿರುದ್ಧ 3-0 ಗೋಲ್‌ಗ‌ಳಲ್ಲಿ 2 ಗೋಲು ಬಾರಿಸುವ ಮೂಲಕ ಸಿಕ್ಕ ಮೊದಲ ಅವಕಾಶ ಸದ್ವಿನಿಯೋಗಿಸಿದ್ದ ಧ್ಯಾನ್‌ಚಂದ್‌ ಅವರು ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದರು. 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ಭಾರತ ತಂಡದ ಸದಸ್ಯರೂ ಇವರಾಗಿದ್ದರು. ಆಡಿದ ಮೂರು ಒಲಿಂಪಿಕ್ಸ್‌ ಪಂದ್ಯಾಟಗಳಲ್ಲಿ ಧ್ಯಾನ್‌ಚಂದ್‌ ಭಾರಿಸಿದ್ದ ಗೋಲ್‌ಗ‌ಳ ಸಂಖ್ಯೆ ಬರೋಬ್ಬರಿ 33.

-  ರಾಕೇಶ್‌, ಎಚ್‌.ಎಸ್‌. ಸಕ್ಲೇಶಪುರ

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.