ಇನ್‌ಲ್ಯಾಂಡ್‌ ಲೆಟರ್‌: ಏಕೋ ಅಜ್ಜಿ ನೆನಪಾಗುತ್ತಿದ್ದಾಳೆ…

Team Udayavani, Jul 14, 2020, 4:13 PM IST

ಇನ್‌ಲ್ಯಾಂಡ್‌ ಲೆಟರ್‌: ಏಕೋ ಅಜ್ಜಿ ನೆನಪಾಗುತ್ತಿದ್ದಾಳೆ…

“ಅಮ್ಮಾಜಿ ಈ ಸಲ ಸಂಕ್ರಾಂತಿಗೆ ನನಗೆ ಜಾಸ್ತಿ ಎಳ್ಳು ಮಾಡಿಕೊಡಿ, ಸಕ್ಕರೆ ಅಚ್ಚು ಇಪ್ಪತ್ತು ಕೊಡಿ, ಬೇರೆ ಬೇರೆ ಆಕಾರದ ಅಚ್ಚುಗಳು ಬೇಕು. ಪ್ಲೀಸ್‌ ಅಮ್ಮಾಜಿ. ಮೊಮ್ಮಗಳು ಕೇಳಿದ ಮೇಲೆ, ಮಾಡಿಕೊಡ್ದೆ ಇರ್ತೀರಾ? ನಂಗೊತ್ತು ಮಾಡೇ ಮಾಡ್ತೀರ.’ ಹೀಗೆ ಪ್ರತೀ ವರ್ಷ, ಬಹುಶಃ ನನಗೆ ಬುದ್ಧಿ ಬಂದಾಗಲಿಂದಲೂ ಅಮ್ಮಾಜಿಯನ್ನು ಕೇಳುತ್ತಿದ್ದೆ. ಅಮ್ಮಾಜಿ ಎಂದರೆ ನನ್ನ ಅಜ್ಜಿ. ಹೀಗೆ ವಿಶೇಷವಾಗಿ ಅಜ್ಜಿಯನ್ನು ಕರೆಯಲು ಎಲ್ಲ ಮೊಮ್ಮಕ್ಕಳಲ್ಲಿ ರೂಢಿಸಿದ್ದು ನನ್ನ ದೊಡ್ಡಮ್ಮ.

ಪ್ರತಿ ಮೊಮ್ಮಕ್ಕಳಿಗೆ ಅಜ್ಜಿ-ತಾತ ಎಂದರೆ ಒಂದು ರೀತಿಯ ಪ್ರೀತಿ, ರಕ್ಷಣಾಭಾವ, ಮಮಕಾರ ಇರುತ್ತದೆ. ಹಾಗೆಯೇ ಅವರೊಡನೆ ವಿಶೇಷ ಬಾಂಧವ್ಯ ಇರುತ್ತದೆ. ತಂದೆ-ತಾಯಿ ಬೈದಾಗ ಅಜ್ಜಿಯ ಸೆರಗ ಹಿಂದೆ ಅವಿತುಕೊಂಡು, ಆಕೆಯ ಬೆಂಬಲ ಪಡೆದು ಎಷ್ಟೋ ಬಾರಿ ಬೀಳುವ ಏಟುಗಳಿಂದ ಕೂಡ ಪಾರಾಗುತ್ತೇವೆ. ಅಮ್ಮಾಜಿ ಕೂಡ ಹಾಗೆ ನನ್ನ ಹಾಗೂ ಆಕೆಯದು ಪದಗಳಲ್ಲಿ ವಿವರಿಸಲಾಗದ ಬಾಂಧವ್ಯ. ಏನು ಕೇಳಿದರೂ ಇಲ್ಲ, ಆಗೋಲ್ಲ ಎಂದು ಹೇಳದೆ ಎಲ್ಲವನ್ನು ಮಾಡಿಕೊಡುತ್ತಿದ್ದರು.

ನಾವಿಬ್ಬರು ಸೇರಿ ಬಿಟ್ಟರೆ ಹರಟೆ ಕಟ್ಟೆಯನ್ನೇ ನಿರ್ಮಿಸಿ ಬಿಡುವೆವು ಎಂದು ಅಮ್ಮ ಹೇಳುತ್ತಿದ್ದರು. ನಮ್ಮದು ಮುಗಿಯದ ಮಾತುಗಳು. ಎಲ್ಲ ವಿಷಯದ ಬಗ್ಗೆ ವಿಮರ್ಶೆ, ಚರ್ಚೆ ನಡೆಸುತ್ತಿದ್ದೆವು. ಆಕೆಗೆ ನಾನು ಯಾವುದೇ ಸಿನೆಮಾ ನೋಡಿ ಬಂದರೆ ಪ್ರತೀ ದೃಶ್ಯದ ಸಂಪೂರ್ಣ ಚಿತ್ರಣವನ್ನು ನೀಡುತ್ತಿದ್ದೆ. ಹಾಸ್ಟೆಲ್‌ ಸೇರಿದ ಮೇಲಂತೂ ಮನೆಗೆ ಹೋದಾಗಲೆಲ್ಲ ಒಂದಿಷ್ಟು ಸಿನೆಮಾ ಹಿಡಿದುಕೊಂಡು ಹೋಗುತ್ತಿದ್ದೆ. ಅದನ್ನು ಕಂಡು ಅದೆಷ್ಟು ಖುಷಿ ಪಡುತ್ತಿದ್ದರೋ? ಕಾಣೆ. ನೋಡಿದ ಎಲ್ಲ ಸಿನೆಮಾಗಳನ್ನು ಒಂದು ಪುಸ್ತಕದಲ್ಲಿ ಅದರ ಹೆಸರು ಬರೆದು, ಸಂಹಿತಾ ತೋರಿಸಿದ್ದು ಎಂದು ಪಟ್ಟಿ ಮಾಡಿಡುತ್ತಿದ್ದರು.

ಹೆಚ್ಚು ಪುಸ್ತಕವನ್ನು ಓದುತ್ತಾ ಹೊಸದನ್ನು ಕಲಿಯುವ ಹುಮ್ಮಸ್ಸು ಇಟ್ಟುಕೊಂಡಿದ್ದರು. ಇಂಗ್ಲಿಷ್‌ ಬರದಿದ್ದರೂ ಕೇಳಿ ತಿಳಿದುಕೊಳ್ಳುತ್ತಿದ್ದರು. ರವಿ ಬೆಳಗೆರೆಯ “ನೀ ಹಿಂಗ ನೋಡ ಬ್ಯಾಡ ನನ್ನ’ ಕಾದಂಬರಿಯನ್ನು ಓದಲು ನಾ ಕೊಟ್ಟಾಗ ಅದೆಷ್ಟು ಖುಷಿ ಪಟ್ಟರೋ ನಾ ಕಾಣೆ. ಅದರಲ್ಲಿ ಬರುವ ಇಂಗ್ಲಿಷ್‌ ಪದದ ಅರ್ಥವನ್ನು ನಾನು ಕರೆ ಮಾಡಿದಾಗಲೆಲ್ಲ ಕೇಳುತ್ತಾ ಕಥೆಯ ವಿಮರ್ಶೆ ಮಾಡುತ್ತಿದ್ದರು.

ಮೊಮ್ಮಕ್ಕಳೆಂದರೆ ಅಮ್ಮಾಜಿಗೆ ಅದೇನು ಪ್ರೀತಿ-ವಾತ್ಸಲ್ಯ, ಮೋಹ ನನಗೆ ಗೊತ್ತಿಲ್ಲ, ಎಲ್ಲರನ್ನೂ ಸಮನಾಗಿ ಕಂಡ ಮಹಾತಾಯಿ ಆಕೆ. ಹಾಸ್ಟೆಲ್‌ನಿಂದ ಮನೆಗೆ ಹೋದಾಗ ಇದು ನಿನ್ನ ಪಾಲು ಎಂದು ಎತ್ತಿಟ್ಟಿದ್ದ ತಿಂಡಿಯನ್ನು ಕೊಡುತ್ತಿದ್ದರು. ಆಕೆಯದು ನಿಷ್ಕಲ್ಮಶ ಹೃದಯ. ತನ್ನೆಲ್ಲಾ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಆಕೆಯಿಂದ ನೋಡಿ ಕಲಿತ ಪಾಠಗಳಲ್ಲಿ ಇದೂ ಒಂದು. ರಜೆ ಬಂದಾಗಲೆಲ್ಲ ಅಜ್ಜಿ ಮನೆಗೆ ಓಡಿ ಹೋಗುತ್ತಿದ್ದೆ.

ಈಗ ಅವುಗಳು ಕೇವಲ ನೆನಪಷ್ಟೆ. ಏಕೋ ನೆನಪಾಗುತ್ತಿದ್ದಾಳೆ. ಸಂಕ್ರಾಂತಿ ಹಬ್ಬದಲ್ಲಂತೂ ತುಂಬಾ ಅವರ‌ದೇ ನೆನಪು ಕಾಡುತ್ತಿತ್ತು. ಈ ಬಾರಿ ಎಳ್ಳು ಮಾಡಿಕೊಡಲು ಆಕೆ ಇಲ್ಲ. ಆಕೆಯ ಬಳಿ, ಬೇಡಿಕೆಯ ಪಟ್ಟಿಯನ್ನು ಇಡಲು ಸಾಧ್ಯವಿಲ್ಲ. ಹಿಂದಿನ ವರ್ಷ ಉಜಿರೆಗೆ ಎಳ್ಳನ್ನು ಕಳುಹಿಸಿದಾಗ, ಅದೇ ಕೊನೇ ಬಾರಿ ಎಂದು ನಾನು ಊಹಿಸಿರಲಿಲ್ಲ. ಕಳೆದ ವರ್ಷ ಹೀಗೆ ಹೇಳಿದ್ದೆ, “ಮುಂದಿನ ವರ್ಷ ಬಣ್ಣ ಬಣ್ಣದ ಸಕ್ಕರೆ ಅಚ್ಚು ಬೇಕು, ಇವತ್ತೇ ಕೇಳಿ ಬಿಟ್ಟಿದ್ದೇನೆ, ಮರಿಬೇಡಿ’ ಎಂದಿದ್ದೆ. ಆದರೆ ಮಾಡಿಕೊಡಲು ಇಂದು ಆಕೆ ಇಲ್ಲ.

ಕೋಡುಬಳೆ ಜಾಮೂನು ಮಾಡಿಕೊಟ್ಟಿದ್ದರು. ಮೂಗುತಿ ಕೊಡಿಸಿದ್ದರು. ಇವೆಲ್ಲವೂ ಕೊನೆಯ ಬಾರಿ ಎಂದು ಯಾರಿಗೆ ಗೊತ್ತಿತ್ತು? ರೇಗಿಸುತ್ತಾ, ಕೀಟಲೆ ಮಾಡುತ್ತಾ ದಿನಾಲೂ ಮಲಗಿಸಿ ಬರುತ್ತಿದ್ದೆ. ಅಂದೂ ಹಾಗೆ ಮಾಡಿದೆ. ಮಾರನೇ ದಿನ ಸುಳಿವಿಲ್ಲದೆ ಕಣ್ಣು ಮಿಟುಕಿಸುವಷ್ಟರಲ್ಲಿ ನನ್ನ ಕಾಲ ಬಳಿಯೇ ನನ್ನನ್ನು ತೊರೆದು ಹೋಗುತ್ತಾರೆಂದು ಊಹಿಸಿರಲಿಲ್ಲ. ಆಕೆ ಏಕೆ ಹೀಗೆ ಮಾಡಿದ್ದು? ಸುಳಿವಿಲ್ಲದೆ ಕೈ ಬಿಟ್ಟಿದ್ದು? ಏಕೋ ಅಮ್ಮಾಜಿ ನೆನಪಾಗುತ್ತಿದ್ದಾಳೆ. ಅದೆಲ್ಲೋ ನಿಂತು ಬಲವಾಗಿ ಆಶೀರ್ವದಿಸುತ್ತಿದ್ದಾರೆ, ಹಾರೈಸು ತ್ತಿದ್ದಾರೆ. ಆಕೆಯನ್ನು ಪದಗಳಲ್ಲಿ ವರ್ಣಿ ಸುತ್ತಿರುವುದನ್ನು ಓದುತ್ತಿದ್ದಾರೆ. ಅಮ್ಮಾಜಿ ನೆನಪಾಗುತ್ತಿದ್ದಾಳೆ. ಇಂತಿ ನಿಮ್ಮ ಅಕ್ಕರೆಯ ಮೊಮ್ಮಗಳು.

ಸಂಹಿತಾ ಎಸ್‌. ಮೈಸುರೆ‌

ಜೈನ್‌ ಕಾಲೇಜು, ಬೆಂಗಳೂರು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.