ಸ್ಥಳೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸೋಣ…


Team Udayavani, Jul 26, 2021, 11:50 AM IST

ಸ್ಥಳೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸೋಣ…

ಮನಸಿದ್ದರೆ ಸಾಲದು ಮಾಸಕ್ಕೊಂದು ಪ್ರವಾಸವಿರಬೇಕು. ಕಣ್ಣಲ್ಲಿ ಗುರಿ ಇದ್ದರೆ ಸಾಲದು ಜಗತ್ತಿನ ವಿಸ್ಮಯ ನೋಡುವ ಕನಸಿರಬೇಕು. ಸಾಮಾನ್ಯವಾಗಿ ನಾವು ಮಾಸ ಪೂರ್ತಿ ದುಡಿದು ಅಥವಾ ಓದಿ ಅಥವಾ ಬೇರೊಂದನ್ನು ಮಾಡಿ ಬೇಸರಗೊಂಡಿರುತ್ತೇವೆ. ಮನದಲ್ಲಿ ಆಸೆ ಇಲ್ಲದಿದ್ದರೂ ಕಣ್ಣಿಗೆ ಹೊಸದೊಂದು ನೋಡುವ ಹಂಬಲವಿರುತ್ತದೆ. ಎಷ್ಟೇ ಸುಸ್ತಾದರು, ಪ್ರವಾಸವೆಂದರೆ ತಟ್ಟನೆ ಎದ್ದು ಬರುತ್ತೇವೆ. ಅದರಲ್ಲೂ ಮನೆಯವರ ಜತೆಗೆ ಹೋಗುವುದೆಂದರೆ ಅದೇನೋ ಹೆಚ್ಚಿನ ಖುಷಿ.

ಗುರಿಗಿಂತ ಹಾದಿ ಸುಗಮ ಎನ್ನುವ ಹಾಗೆ ಹೋಗುವ ತಾಣಕ್ಕಿಂತ ಹಾದಿಯಲ್ಲಿ ಮಜ ವಿರುತ್ತದೆ. ಅದರಲ್ಲೂ ಮನೆಯವರ ಜತೆಗೆ ಕೆಲವೊಂದು ಹೇಳಲು ಆಗದಿರುವ ಮಾತುಗಳು ಕೂಡ ಹಂಚಿಕೊಳ್ಳಲು ಸಮಯವಿರುತ್ತದೆ. ಒಟ್ಟಾರೆ ಹಾಡು ಹೇಳುತ್ತಾ, ಮಾತನಾಡುತ್ತಾ, ನಗಿಸಿ ನಗುತ್ತಾ ಮೋಜಿನ ಪ್ರವಾಸದಲ್ಲಿ ಜಗತ್ತನ್ನೇ ಮರೆತು ಹೋಗುತ್ತೇವೆ. ಪ್ರವಾಸವೆಂದರೆ ದೂರದ ಸ್ಥಳಗಳಿಗೆ ಹೋಗುವುದು ಎಂಬುದು ನಮ್ಮ ಭಾವನೆ. ಆದರೆ ಹತ್ತಿರದ ಸ್ಥಳಗಳನ್ನು ಮನೋರಂಜನೆಯ ತಾಣವಾಗಿ ಪರಿವರ್ತಿಸಿ ನಾವು ಹೋಗುವುದರ ಜತೆಗೆ ಇತರ ಊರಿನ ಪ್ರವಾಸಿಗರನ್ನು ಆಕರ್ಷಿಸಬಹುದು.

ಸಾಮಾನ್ಯವಾಗಿ ನಮ್ಮ ಹತ್ತಿರವಿರುವ ವಸ್ತುವಿನ ಮಹತ್ವ ನಮಗೆ ಅರಿವಿರುವುದಿಲ್ಲ. ಆದರೆ ದೂರವಿರುವರಿಗೆ ಅದರ ಮಹತ್ವ ಗೊತ್ತಿರುತ್ತದೆ. ಹಾಗೆಯೇ ನಮ್ಮ ಊರಿನಲ್ಲಿ ಇರುವ ತಾಣ ಅಥವಾ ಪ್ರವಾಸ ಮಾಡುವ ವಿಸ್ಮಯ ಸ್ಥಳಗಳ ಮಹತ್ವವನ್ನು ನಾವು ಹೆಚ್ಚಾಗಿ ಅರಿತಿರುವುದಿಲ್ಲ. ಪಕ್ಕದಲ್ಲಿಯೇ ಇದ್ದರೂ ಅದರ ಮಹತ್ವ ಮತ್ತು ಅದರ ವೈಶಿಷ್ಟ್ಯ ನಮಗೆ ಗೊತ್ತಿರುವುದಿಲ್ಲ. ಬೇರೆ ಊರಿನ ತಾಣಗಳ ವೈಶಿಷ್ಟéಗಳನ್ನು ತಿಳಿದಿರುವ ನಾವು ನಮ್ಮೂರಿನ ಕೆಲವು ವೈಶಿಷ್ಟ್ಯ ಗಳನ್ನು ನೋಡಿರುವುದಿಲ್ಲ. ಅಂತಹ ವೈಶಿಷ್ಟéಗಳನ್ನು ಹೊಂದಿರುವ ಸ್ಥಳವೇ ವಿಜಯಪುರದ ಭುತ್ನಾಳ ಕೆರೆ.

ವಿಜಯಪುರದಲ್ಲಿ ಸುಮಾರು 12 ವರ್ಷಗಳಿಂದ ವಾಸ ಮಾಡುತ್ತಿದ್ದೇನೆ. ಆದರೆ ಈ ಕೆರೆಗೆ ಬೆರಳೆಣಿಕೆಯ ಸಂಖ್ಯೆಯಷ್ಟು ಬಾರಿ ಮಾತ್ರ ಭೇಟಿ ನೀಡಿದ್ದೇನೆ. ಭುತ್ನಾಳ್‌ ಕೆರೆ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಮುಂಭಾಗದಲ್ಲಿರುವ ಕಟ್ಟೆಯ ಮೇಲಿಂದ ಕೆಳಗೆ ನೀರು ಬೀಳುವ ನೋಟ ಸಣ್ಣ ಜಲಪಾತದಂತೇ ಕಾಣುತ್ತದೆ. ಕೆರೆಯ ಬಳಿಯಲ್ಲಿ ಉದ್ಯಾನವಿರುವುದು ಇಲ್ಲಿನ ಮತ್ತೂಂದು ವಿಶೇಷ. ವಿಶಾಲವಾದ ಈ ಉದ್ಯಾನ ಗಿಡ ಮರಗಳಿಂದ ತುಂಬಿ ಹಚ್ಚು ಹಸಿರಾಗಿದೆ. ಮಕ್ಕಳಿಗೆ ಆಟವಾಡಲು ಆಟದ ಸಾಮಗ್ರಿಗಳಿವೆ. ಪ್ರಕೃತಿ ಪ್ರೇಮಿಗಳನ್ನು ಈ ಸ್ಥಳ ವಿಶೇಷವಾಗಿ ಆಕರ್ಷಿಸುತ್ತದೆ. ಇದೊಂದು ಉದಾಹರಣೆ ಮಾತ್ರ.

 

-ಪೃಥ್ವಿರಾಜ ಕುಲಕರ್ಣಿ

ಎಸ್‌ಬಿ, ಕೆಸಿಪಿ ಮಹಾವಿದ್ಯಾಲಯ, ವಿಜಯಪುರ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.