ಸ್ವದೇಶಿಯಿಂದ ಪರಿಪೂರ್ಣ ಸ್ವಾವಲಂಬಿ


Team Udayavani, Aug 15, 2020, 8:00 AM IST

Make in india 10

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತ ಎಂದರೆ ಬರೀ ಜನಸಂಖ್ಯೆ ಹೊಂದಿರುವ ಭೂಪ್ರದೇಶವಷ್ಟೇ ಅಲ್ಲ.

ವಿಶ್ವಕ್ಕೆ ನೆರಳು ಒದಗಿಸುವ ಸಶಕ್ತ ರಾಷ್ಟ್ರ ಎಂಬುದನ್ನು ನಾವು ಅರಿಯಬೇಕಿದೆ.

ಇತ್ತೀಚೆಗೆ ಚೀನವು ಭಾರತದ ಗಡಿಯಲ್ಲಿ ಕುತಂತ್ರದಿಂದ ದಾಳಿ ಮಾಡಿತ್ತು.

ಈ ದಾಳಿಯಲ್ಲಿ ಸೈನಿಕರು ಹುತಾತ್ಮರಾಗಿದ್ದರು. ಆಗ ಭಾರತವೂ ಪ್ರತೀಕಾರಕ್ಕಾಗಿ ಚೀನದ ವ್ಯಾಪಾರದ ಮೇಲೆ ಡಿಜಿಟಲ್‌ ಸರ್ಜಿಕಲ್‌ ಸ್ಟ್ರೈಕ್‌ ಮಾಡಿತು. ಇದರಿಂದ ಚೀನದ ವಸ್ತುಗಳನ್ನು ತ್ಯಜಿಸುವ ಅಭಿಯಾನ ಆರಂಭವಾಯಿತು. ಅಲ್ಲದೇ ಕೇಂದ್ರ ಸರಕಾರವೂ ಚೀನಿ ಆ್ಯಪ್‌ಗ್ಳನ್ನು ನಿಷೇಧಿಸಿ ಮುಂದಡಿಯಿಟ್ಟಿತು.

ಎಲ್ಲ ವಲಯಗಳಲ್ಲಿ ಪ್ರಾಬಲ್ಯ ಹೊಂದಿದ್ದ ಚೀನಿ ವಸ್ತುಗಳ ನಿಷೇಧ ತರುವಾಯ ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಭಾರತವೂ ಮಹತ್ವದ ಹೆಜ್ಜೆ ಇಟ್ಟಿತು. ಅದುವೇ “ಆತ್ಮ ನಿರ್ಭರ ಭಾರತ’. ಸ್ವದೇಶಿ ವಸ್ತು, ಉತ್ಪನ್ನಗಳಿಗೆ ಬೆಂಬಲ ನೀಡುವ ಯೋಜನೆ ಇದಾಗಿತ್ತು. ಇದಕ್ಕಾಗಿ ಅಗತ್ಯವಾದ ಯೋಜನೆ, ಪ್ಯಾಕೇಜ್‌ಗಳನ್ನು ಕೇಂದ್ರ ಸರಕಾರ ಘೋಷಿಸಿತ್ತು.

ಇನ್ನು ಸ್ವದೇಶ ಜಾಗೃತಿ, ಸಾಕಾರಕ್ಕಾಗಿ “ಮೇಕ್‌ ಇನ್‌ ಇಂಡಿಯಾ’ ಎಂಬ ಪರಿಕಲ್ಪನೆಯೂ ನಿರ್ಣಾಯಕ ಹೆಜ್ಜೆಯಾಗಿದೆ. ಇದರಿಂದ ಸ್ವದೇಶಿ ಉತ್ಪನ್ನಗಳ ಮೇಲಿನ ಭಾರತದ ಹಿಡಿತ ಇನ್ನೂ ಹೆಚ್ಚು ಉತ್ಸಾಹ ರೂಪ ಪಡೆಯುತ್ತಿದೆ. ಅನೇಕ ಸ್ವಯಂ ಭಾರತೀಯ ಸ್ವದೇಶಿ ಭಾರತೀಯ ಉತ್ಪನ್ನಗಳ ಮಾರುಕಟ್ಟೆ ಉದ್ಯಮಗಳು ರಾಷ್ಟ್ರಾದ್ಯಂತ ಬೇರು ಬಿಡುತ್ತಿವೆ. ಇದು ಅವಶ್ಯವಾಗಿ ಬೇಕಾಗಿರೋದು. ಈ ಆತ್ಮನಿರ್ಭರ ಇಂದು ನಿನ್ನೆಯದಲ್ಲ ನಮ್ಮ ಋಷಿಮುನಿಗಳ ಕಾಲದಿಂದಲೂ ಆತ್ಮನಿರ್ಭರರಾಗಿಯೇ ಬದುಕುತ್ತಿದ್ದೇವೆ. ಗಿಡಮೂಲಿಕೆಗಳ ಸದ್ಬಳಕೆಯಿಂದ ಆಯುರ್ವೇದ ಪದ್ಧತಿಯಿಂದ ಆರೋಗ್ಯ ಕ್ಷೇತ್ರ ಸಶಕ್ತೀಕರಣವಾಗಿತ್ತು.

ಅನೇಕ ಸ್ವದೇಶಿ ಚಳವಳಿ ಹೋರಾಟಗಳಿಂದ ಭಾರತದ ಅನೇಕ ಸ್ವಯಂ ಸೇವಕರು ಹೋರಾಟ ಮಾಡಿ¨ªಾರೆ. ಸ್ವದೇಶಿ ಚಳವಳಿಯ ನೇತಾರ ರಾಜೀವ್‌ ದೀಕ್ಷಿತ್‌ ಹೋರಾಟ ಮುಂಚೂಣಿ ಪಡೆದಿತ್ತು. ಗಾಂಧೀ ತಮ್ಮ ಜೀವನುದ್ದದುಕ್ಕೂ ಸ್ವದೇಶಿ ವಸ್ತುಗಳನ್ನು ಬೆಂಬಲಿಸಿದರು. ರಂಗಕರ್ಮಿ ಪ್ರಸನ್ನ ಅವರು ಸ್ವದೇಶಿ ವಸ್ತುಗಳನ್ನು ಬೆಂಬಲಿಸುವುಕ್ಕಾಗಿ “ಪವಿತ್ರ ಆರ್ಥಿಕತೆ’ ಎಂಬ ಯೋಜನೆಯನ್ನು ಪರಿಚಯಿಸಿದ್ದಾರೆ.
ಆದರೆ ಬ್ರಿಟಿಷರು ಆಳ್ವಿಕೆಯೂ ನಮ್ಮನ್ನು ಗುಲಾಮಗಿರಿ ತಳ್ಳಿ ವಿದೇಶಿ ವ್ಯಾಮೋಹಕ್ಕೆ ಒಳಗಾಗುವಂತೆ ಮಾಡಿತ್ತು. ಅನಂತರದ ರಾಜಕೀಯದ ಮಹತ್ವಾಕಾಂಕ್ಷೆ ಅಭಿವೃದ್ಧಿ ದೃಷ್ಟಿಕೋನಗಳಿಂದ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ಆಹ್ವಾನದಿಂದ ಭಾರತಕ್ಕೆ ಸ್ವಲ್ಪ ವ್ಯಾಪಾರದ ಮಹತ್ವವೂ ಸಂಕುಚಿತಗೊಳಿಸಿತ್ತು.

ತದನಂತರದ ಪ್ರಚಲಿತ ಕೇಂದ್ರ ಸರಕಾರಗಳ ಕೆಲವು ರೈತಾಪಿ, ಕೃಷಿ ಪ್ರಾಧಾನ್ಯತೆ, ವ್ಯಾಪಾರದ ನೀತಿ ಯೋಜನೆಗಳಿಂದ ಬಹುತೇಕ ಭಾರತೀಯರಿಗೆ ಒಂದು ಭೂಮಿಕೆ ಒದಗಿಸಿ ರಫ್ತು-ಆಮದು ಭಾರತೀಯರಿಂದಲೇ ಆಗಬೇಕೆನ್ನುವ ನಿರ್ಧಾರಕ್ಕೆ ಬಂದಿತು.

ಅಭಿವೃದ್ಧಿಗೆ ವೇಗ
ಭಾರತದಲ್ಲೇ ಉತ್ಪನ್ನಗಳ ಮಾರುಕಟ್ಟೆ ತಯಾರಾದರೆ ಭಾರತದ ಅಭಿವೃದ್ಧಿಗೆ ವೇಗ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಮಾಣ ತಡೆಯುವಲ್ಲಿ ಭಾರತ ಯಶಸ್ವಿಯಾಗಬಹುದು. ಶೈಕ್ಷಣಿಕ, ಔದ್ಯೋಗಿಕವಾಗಿ ಜಾಗತಿಕ ಮಟ್ಟದಲ್ಲಿ ಭಾರತ ಸಶಕ್ತ ರಾಷ್ಟ್ರಗಳ ಸ್ಥಾನದಲ್ಲಿ ಮೇಲೇರಬಹುದು. ಇನ್ನೂ ಮುಂದೆ ಬಹುರಾಷ್ಟ್ರೀಯ ಕಂಪೆನಿಗಳ ಹಲವು ಒಪ್ಪಂದಗಳಿಗೆ ತಿಲಾಂಜಲಿ ಹಾಡಲು ರಾಷ್ಟ್ರೀಯತೆಯ ಮೇಕ್‌ ಇನ್‌ ಇಂಡಿಯಾ ಯೋಜನೆಗಳು ಭಾರತದ ಆರ್ಥಿಕತೆಗೆ ಅಭಿವೃದ್ಧಿಗೆ ಬಲ ತುಂಬುವ ಉತ್ಸಾಹದಲ್ಲಿದೆ. ಈಗಾಗಲೇ ಇಂತಹ ಆತ್ಮನಿರ್ಭರ ಮನಸ್ಥಿತಿ ಪ್ರತಿಯೊಬ್ಬ ಭಾರತೀಯನಲ್ಲಿ ನೆಲೆಯೂರಿದೆ.

ಮೊನ್ನೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ರು ಹೇಳಿದಂತೆ ಸೇನಾವಲಯ, ರಕ್ಷಣಾ ಕ್ಷೇತ್ರದಲ್ಲೂ ಸ್ವದೇಶಿ ಉತ್ಪನ್ನವಾಗಿ ಶಸ್ತ್ರಾಸ್ತ್ರಗಳಿಗೆ ಅನುಮೋದನೆ ಕೊಟ್ಟಿದ್ದು ಭಾರತಕ್ಕೆ ಆನೆ ಬಲ ತಂದಿದೆ. ಈ ಮೇಕ್‌ ಇನ್‌ ಇಂಡಿಯಾ ಲಾಭ ನಷ್ಟ ಹೋಲಿಕೆ ನೋಡಿದರೆ ಅಭಿವೃದ್ಧಿಪಥದಲ್ಲಿ ಭಾರತ ಯಶಸ್ವಿಯಾಗುವುದು ಶತಃ ಸಿದ್ಧ ಅಂತಹ ಭಾರತಕ್ಕೆ ನಾವು ಕೈಜೋಡಿಸಬೇಕು. ಆಗಲಾದರೂ ಸ್ವದೇಶಿ ಚಳುವಳಿಯ ಯುವ ಹೋರಾಟದ ರೂವಾರಿ ರಾಜೀವ್‌ ದೀಕ್ಷಿತ್‌ರಂಥ ಹೋರಾಟಗಾರರಿಗೆ ಗೌರವಾದರು ಸಿಗುತ್ತದೆ.

ಶಶಿ ಹಿರೇಮಠ ಸಿಂಧನೂರು, ಸ್ಪರ್ಧಾತ್ಮಕ ಪರೀಕ್ಷಾರ್ಥಿ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.