UV Fusion: ನನ್ನ ನೆಚ್ಚಿನ ಶಿಕ್ಷಕಿ

Team Udayavani, Sep 11, 2023, 12:58 PM IST

12-uv-fusion

ನಾನು ಅದಾಗಲೇ ಪಿಯುಸಿ ಶಿಕ್ಷಣ ಮುಗಿಸಿದ್ದು, ಪದವಿಗೆಂದು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯವನ್ನು ಆಯ್ದುಕೊಂಡೆ. ಆಗ ನಮ್ಮ ವಿಭಾಗದ ಮುಖ್ಯಸ್ಥೆಯಾಗಿದ್ದವರು ಭವ್ಯಾ ಶೆಟ್ಟಿ ಮೇಡಂ. ಸದಾ ಹಸನ್ಮುಖೀಯಾಗಿ ನಗುನಗುತ್ತಾ ಎಲ್ಲರೊಡನೆಯೂ ಮಾತನಾಡುವ ಅವರು ಕ್ಲಾಸ್‌ರೂಮ್‌ ವಿಚಾರಕ್ಕೆ ಬಂದಾಗ ಟೀಚರ್‌ ಎಂಬ ಪದಕ್ಕೆ ಸೂಕ್ತ ಅರ್ಥವನ್ನು ನೀಡುವಂತಿದ್ದರು.

ಆ ದಿನಗಳಲ್ಲಿ ಪದವಿ ತರಗತಿಗಳೆಂದರೆ ಯಾವುದೇ ರೀತಿಯ ಪಾಠ ಪುಸ್ತಕಗಳಿರುವುದಿಲ್ಲ, ಅಧ್ಯಾಪಕರು ಬಂದು ಒಂದು ಗಂಟೆ ಲೆಕ್ಚರ್‌ಕೊಟ್ಟು ಹೋಗುತ್ತಾರೆ… ಎಂಬಿತ್ಯಾದಿ ಅಂತೆ-ಕಂತೆಗಳನ್ನು ನಮ್ಮ ಅಕ್ಕ-ಅಣ್ಣಂದಿರು ಹೇಳುತ್ತಿದ್ದರು. ಇದನ್ನೇ ನಂಬಿ ನಾನೂ ಕಾಲೇಜಿಗೆ ಹೊರಟಿದ್ದೆ. ಆದರೆ ತರಗತಿಯಲ್ಲಿ ಕುಳಿತಮೇಲೆಯೇ ನನಗೆ ಅಸಲಿಯತ್ತಿನ ಅರಿವಾಗಿದ್ದು.

ನಮ್ಮ ಭವ್ಯಾ ಮೇಡಂ ಕ್ಲಾಸ್‌ ಕೇಳುವುದು ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ ಅವರು ಮಾಡುವ ಪಾಠಗಳು ಪುಸ್ತಕದಲ್ಲಿನ ಪ್ರಬಂಧಗಳಂತಿರದೆ, ವಾಸ್ತವ ಜಗತ್ತಿಗೆ ಸಂಬಂಧಿಸಿರುತ್ತಿತ್ತು. ಅಷ್ಟೇ ಅಲ್ಲದೆ ನಾವು ನಮ್ಮ ದಿನನಿತ್ಯದ ಜೀವನಕ್ಕೂ ಅದನ್ನು ಅಳವಡಿಸಿಕೊಳ್ಳುವಂತಿರುತ್ತಿತ್ತು. ಮಾಡುವ ಪಾಠಕ್ಕೆ ಜೀವ ತುಂಬುವಂತೆ, ಸುದ್ದಿ ಮೌಲ್ಯಗಳು, ಸುದ್ದಿ ಮೂಲಗಳ ಕುರಿತು ಪಾಠ ಪ್ರಾರಂಭಿಸುವಾಗ ಉದಾಹರಣೆಯ ಸಹಿತ ಅವುಗಳನ್ನು ವಿವರಿಸುತ್ತಿದ್ದರು. ಇದರಿಂದಲೇ ವಿಷಯಗಳ ಜತೆ ಅದನ್ನು ಕಲಿಸಿದವರೂ ನಮಗೆ ಹತ್ತಿರಾದದ್ದು.

ಪಾಠಗಳನ್ನು ಯಾವ ರೀತಿ ಮಾಡುತ್ತಿದ್ದರೋ ಅದೇ ರೀತಿ ಬಹಳ ಅಂದವಾಗಿ ತಯಾರಾಗಿ ತರಗತಿಗೆ ಬರುತ್ತಿದ್ದ ಅವರನ್ನು ನೋಡುವುದೇ ವಿದ್ಯಾರ್ಥಿಗಳಿಗೊಂದು ಸಂಭ್ರಮ. ಕಾಟನ್‌ ಸೀರೆ ಉಟ್ಟು, ಅದಕ್ಕೆ ಒಪ್ಪುವಂತಹ ಹಣೆಬೊಟ್ಟು ಇಟ್ಟು, ಬಣ್ಣಬಣ್ಣದ ಬಳೆಗಳನ್ನು ತೊಟ್ಟು ಬರುತ್ತಿದ್ದ ಭವ್ಯಾ ಮೇಡಂಗೆ ಅವರಿಗೇ ತಿಳಿಯದಂತೆ ಅನೇಕ ಫ್ಯಾನ್‌ಕ್ಲಬ್‌ಗಳು ಇರುತ್ತಿದ್ದವು.

ಮೇಡಂ ಇವತ್ತು ಯಾವ ಬಣ್ಣದ ಸೀರೆಯನ್ನುಟ್ಟು ಬರುತ್ತಾರೆ, ಯಾವ ರೀತಿಯ ಬಳೆಗಳನ್ನು ಹಾಕುತ್ತಾರೆ… ಎಂಬ ವಿಷಯಗಳು ನಮ್ಮನಮ್ಮಲ್ಲಿನ ಚರ್ಚೆಗಳ ಭಾಗವಾಗಿರುತ್ತಿದ್ದವು. ಹೀಗೆ ನಮಗೆ ಅವರು ತರಗತಿಗೆ ಬಂದು ಪಾಠ ಮಾಡುತ್ತಾರೆ ಎಂದಾಗ ಅದೇನೋ ಖುಷಿ. ಅವರ ಬರುವಿಕೆಗಾಗಿ ನಾವುಗಳು ಕುತೂಹಲದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದ ದಿನಗಳು ಇಂದಿಗೂ ನೆನಪಿವೆ.

ಇಂತಹ ಕೆಲ ಸವಿನೆನಪುಗಳೊಂದಿಗೆ ನಾನು ಸ್ನಾತಕೋತ್ತರ ಶಿಕ್ಷಣ ಮುಗಿಸಿ, ಪಿ.ಹೆಚ್‌.ಡಿ. ಶಿಕ್ಷಣಕ್ಕೆಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸೇರಿದಾಗ ಕೋರ್ಸ್‌ವರ್ಕ್‌ನಲ್ಲಿ ನನ್ನ ಸಹಪಾಠಿಯಾಗಿದ್ದುದು ಇದೇ ಭವ್ಯಾ ಮೇಡಂ. ಈ ಆರು ತಿಂಗಳಿನಲ್ಲಿ ನಾನು ಹಾಗೂ ಭವ್ಯಾ ಮೇಡಂ ಶಿಕ್ಷಕಿ-ವಿದ್ಯಾರ್ಥಿಗಿಂತ ಅಕ್ಕ-ತಂಗಿಯಂತಿದ್ದೆವು ಎಂದರೆ ಹೆಚ್ಚು ಸೂಕ್ತ.

ಇದಾಗಿ ನನ್ನ ವೃತ್ತಿ ಜೀವನದ ಭಾಗವಾಗಿ ನಾನು ಕಲಿತ ಕಾಲೇಜಿಗೇ ಉಪನ್ಯಾಸಕಿಯಾಗಿ ಬಂದಾಗ ನಮ್ಮ ಅಂದಿನ ಹೆಚ್‌ಓಡಿ ಇಂದೂ ನನ್ನೊಂಗಿದ್ದಾರೆ, ಅಂದಿಗಿಂತಲೂ ಅಧಿಕ ಆತ್ಮೀಯರಾಗಿದ್ದಾರೆ.

ಭವ್ಯಾ ಮೇಡಂ ನನ್ನ ಶಿಕ್ಷಕಿಯಾಗಿ, ಸಹಪಾಠಿಯಾಗಿ ಇಂದು ಸಹದ್ಯೋಗಿಯಾಗಿ ನನ್ನೊಂದಿಗಿದ್ದಾರೆ. ಕಳೆದ ಹನ್ನೊಂದು ವರ್ಷಗಳ ನಂಟು ಇಂದು ಜಾಸ್ತಿಯಾಗಿದೆ. ಅವರನ್ನು ಶಿಕ್ಷಕಿ ಎಂದಷ್ಟೇ ಹೇಳಿದರು ನಮ್ಮ ಬಾಂಧವ್ಯದ ವಿವರಣೆ ಅಪೂರ್ಣವಾದೀತು. ಅಂದು ಪಾಠ ಹೇಳಿಕೊಟ್ಟವರು ಇಂದು ಜೀವನದ ಪಥದಲ್ಲಿ ಸಾಗಲು ಸಹಕಾರಿಯಾಗಿದ್ದಾರೆ. ಅವರು ಆತ್ಮೀಯತೆಯಿಂದ ಅಶೂ ಎಂದು ಕರೆದಾಗ ಆಗುವ ಅನುಭವವನ್ನು ವರ್ಣಿಸಲಾರೆ. ಊಟ ತಿಂಡಿಗಳೊಂದಿಗೆ ನೋವು ನಲಿವುಗಳನ್ನು ಹಂಚಿಕೊಳ್ಳುವಾಗ ಅಕ್ಕನಂತಿರುವ ಅವರು, ಸ್ನೇಹಿತೆಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ.

ಮೇಡಂ’ ಎಂದು ಮಕ್ಕಳು ಅವರನ್ನು ಹುಡುಕಿಕೊಂಡು ಬರುವಾಗ ಒಂದೊಮ್ಮೆ ನಾನೂ ಹಾಗೆಯೇ ಬರುತ್ತಿದ್ದುದು ನೆನಪಾಗುತ್ತದೆ.

ಮಾರ್ಗದರ್ಶಕಿ, ಅಕ್ಕ, ಸ್ನೇಹಿತೆ, ಸಹೋದ್ಯೋಗಿ ಹೀಗೆ ನನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿರುವ ಭವ್ಯಾ ಮೇಡಂ ಇಂದಿಗೂ ನನ್ನ ಶಿಕ್ಷಕಿಯೇ; ನಾನು ಅವರ ವಿದ್ಯಾರ್ಥಿಯೇ. ಶೈಕ್ಷಣಿಕ ವಿಷಯಗಳ ಜತೆಗೆ ಜೀವನದ ಪಾಠವನ್ನೂ ಹೇಳಿಕೊಟ್ಟು, ಎಡವಿದಾದ ತಿದ್ದುವ, ಸಾಧಿಸಿದಾಗ ಪ್ರಶಂಸಿಸುವ ಅವರು ಅಂದಿಗೂ, ಇಂದಿಗೂ ಎಂದೆಂದಿಗೂ ನನ್ನ ನೆಚ್ಚಿನ ಶಿಕ್ಷಕಿ. ( ಭವ್ಯಾ ಮೇಡಂ.)

 ಅಶ್ವಿ‌ನಿ ಅನುಶ್‌

ಸಂತ ಅಲೋಶಿಯಸ್‌ ಕಾಲೇಜು,

ಮಂಗಳೂರು

ಟಾಪ್ ನ್ಯೂಸ್

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Fraud Case ಮೆಸ್‌ ಮ್ಯಾನೇಜರ್‌, ಸಿಬಂದಿಯಿಂದ ಮಾಲಕರಿಗೆ 30 ಲಕ್ಷ ರೂ. ವಂಚನೆ

Fraud Case ಮೆಸ್‌ ಮ್ಯಾನೇಜರ್‌, ಸಿಬಂದಿಯಿಂದ ಮಾಲಕರಿಗೆ 30 ಲಕ್ಷ ರೂ. ವಂಚನೆ

Manipal ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವನೆ: ಇಬ್ಬರು ವಶಕ್ಕೆ

Manipal ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವನೆ: ಇಬ್ಬರು ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-fusion-tour

UV Fusion: ಅಚ್ಚರಿಯ ಆಗರ ಇಕ್ಕೇರಿಯ ಅಘೋರೇಶ್ವರ

14–fusion-hasthashilpa

Hasta Shilpa Heritage Village Museum ಬಲು ಸುಂದರ ಹೆರಿಟೇಜ್‌ ವಿಲೇಜ್‌

10-fusion-college-campus

UV Fusion: ಸ್ವಾರಸ್ಯಗಳ ತಾಣ ಕಾಲೇಜು ಕ್ಯಾಂಪಸ್‌

9-fusion-camparison

UV Fusion: ಹೋಲಿಕೆಯೆಂಬ ವಿಷದ ಮಾಲಿಕೆ

8–fusion-paper

UV Fusion: ಪೇಪರ್‌ ಬಾಯ್‌ಗೊಂದು ಸಲಾಂ

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.