ಸಾಗರ/ಸಮುದ್ರ ಹಲವು ಉದ್ಯಮಗಳ ತವರು


Team Udayavani, Jun 9, 2020, 8:00 AM IST

ಸಾಗರ/ಸಮುದ್ರ ಹಲವು ಉದ್ಯಮಗಳ ತವರು

ಸಾಂದರ್ಭಿಕ ಚಿತ್ರ

ಭೂಮಿಯು ಸುಮಾರು ಶೇ.70ರಷ್ಟು ನೀರಿನಿಂದ ಅವೃತ್ತವಾಗಿದೆ. ದೇಶಗಳ ಅಭಿವೃದ್ಧಿಯಲ್ಲಿ ಸಮುದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂಚಾರ, ಪ್ರವಾಸೋದ್ಯಮ, ಮತ್ಸ್ಯೋದ್ಯಮಕ್ಕೆ ಸಮುದ್ರಗಳೇ ಮೂಲಾಧಾರ. ಮನೋರಂಜನೆಗೆ ಹೆಚ್ಚಿನ ಮಂದಿ ಸಮುದ್ರಗಳನ್ನೇ ಆಶ್ರಯಿಸುತ್ತಾರೆ. ಅಲ್ಲದೇ ಸಮುದ್ರಗಳು ಕೇವಲ ಪ್ರೇಕ್ಷಣೀಯ ಸ್ಥಳವಾಗಿರದೇ ಇಂದು ಉದ್ಯೋಗದ ತಾಣವಾಗಿವೆ. ಜೂ. 8ರಂದು ವಿಶ್ವ ಸಮುದ್ರ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ಪ್ರಪಂಚದ ಸಮುದ್ರಗಳ ಮಾಹಿತಿ ತಿಳಿಯುವುದು ಅತ್ಯಗತ್ಯ. ಇದರ ಸಲುವಾಗಿ ಪ್ರಪಂಚದ ಅತಿದೊಡ್ಡ ಸಮುದ್ರಗಳ ಮಾಹಿತಿ ಮತ್ತು ವಿಶೇಷವನ್ನು ಇಲ್ಲಿ ತಿಳಿಸಲಾಗಿದೆ.

ಬೇರಿಂಗ್‌ ಸಮುದ್ರ
ಅಲಾಸ್ಕಾ ಮತ್ತು ಸೈಬೀರಿಯಾಗಳ ಮಧ್ಯೆ ಇರುವ ಬೇರಿಂಗ್‌ ಸಮುದ್ರವೂ ಅತ್ಯಂತ ಭಯಾನಕ ಸಮುದ್ರಗಳಲ್ಲಿ ಒಂದು. ಈ ಸಮುದ್ರದಲ್ಲಿ ಸುಮಾರು 400 ವಿವಿಧ ಪ್ರಬೇಧದ ಮೀನುಗಳನ್ನು ಕಾಣಬಹುದು. ವಾಣಿಜ್ಯ ಮೀನುಗಾರಿಕೆ ಈ ಸಮುದ್ರದಲ್ಲಿ ಹೆಚ್ಚಿದ್ದರಿಂದಾಗಿ ಇಲ್ಲಿನ ಅಪರೂಪದ ಮೀನು ಪ್ರಬೇಧಗಳ ಹಾನಿಗೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ. ಈ ಸಮುದ್ರವೂ ಸುಮಾರು 22,61,060 ಚದರ ಕಿ.ಮೀ. ಹರಿಯುತ್ತದೆ. ಚಳಿಗಾಲದಲ್ಲಿ ಈ ಸಮುದ್ರದ ಹವಾಮಾನವು ಆಪಾಯಕಾರಿಯಾಗಿದ್ದು, ವೇಗದ ಅಲೆ, ಚಂಡಮಾರುತಗಳಿಗೆ ಕಾರಣವಾಗುತ್ತದೆ.

ಮೆಡಿಟೇರಿಯನ್‌ ಸಮುದ್ರ
ಅಟ್ಲಾಂಟಿಕ್‌ ಮಹಾಸಾಗರಕ್ಕೆ ಸಂಪರ್ಕ ಹೊಂದಿರುವ ಈ ಸಮುದ್ರವೂ ಮೆಡಿಟೇರಿಯನ್‌ ಪ್ರದೇಶಕ್ಕೆ ಅವೃತ್ತವಾಗಿದೆ. ಮೆಡಿಟೇರಿಯನ್‌ ಎಂಬ ಹೆಸರು ಲ್ಯಾಟಿನ್‌ ಪದದಿಂದ ಬಂದಿದೆ. ಒಳನಾಡು ಅಥವಾ ಭೂಮಿಯ ಮಧ್ಯದ ಸ್ಥಳ ಎಂದರ್ಥ. ಇದು ಸುಮಾರು 25,09,698 ಚದರ ಕಿ.ಮೀ. ವ್ಯಾಪ್ತಿ ಹೊಂದಿದೆ.
ಮೆಡಿಟೇರಿಯನ್‌ ಸಮುದ್ರವು ವಿಶ್ವದ ಕೆಲವು ಜನನಿಬಿಡ ಹಡುಗು ಮಾರ್ಗಗಳಿಗೆ ನೆಲೆಯಾಗಿದ್ದು, ಈ ಸಮುದ್ರ ಮಾರ್ಗದ ಮೂಲಕ ವಾಣಿಜ್ಯ, ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದೆ. ವಾರ್ಷಿಕವಾಗಿ ಸುಮಾರು 400 ಟನ್‌ ಇಂಧನಗಳ ಸರಬರಾಜು ಆಗುತ್ತದೆ. ದಿನಂಪ್ರತಿ 250ರಿಂದ 300 ಆಯಿಲ್‌ ಟ್ಯಾಂಕರ್‌ ಈ ಸಮುದ್ರದ ಮೂಲಕ ಸಂಚರಿಸುತ್ತವೆ. ಇದು ಹೆಚ್ಚಿನ ಸಮುದ್ರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.

ಕೆರೆಬಿಯನ್‌ ಸಮುದ್ರ
ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾದ ಕೆರೆಬಿಯನ್‌ ಸಮುದ್ರವು ಕಡಿಮೆ ಉಪ್ಪು ನೀರನ್ನು ಹೊಂದಿದೆ. ಇಲ್ಲಿ ಬೆಚ್ಚಗಿನ ವಾತಾವರಣ ಇದ್ದು, ಸುಮಾರು 75 ಡಿಗ್ರಿ ಸೆಲ್ಸಿಯನಷ್ಟು ಬಿಸಿ ನೀರು ಇರುತ್ತದೆ. ಇದು ಸುಮಾರು 25,14,878 ಚದರ ಕಿ.ಮೀ. ಹರಿವು ಇದೆ.

ಸೌತ್‌ ಚೀನ ಸಮುದ್ರ
ಸುಮಾರು 29,73,306 ಚದರ ಕಿ.ಮೀ. ಹರಿವು ಇರುವ ಸೌತ್‌ ಚೀನ ಸಮುದ್ರವು 100ಕ್ಕೂ ಅಧಿಕ ದ್ವೀಪಗಳನ್ನು ಹೊಂದಿದೆ. ಈ ಸಮುದ್ರದ ಮೂಲಕ ಚೀನ, ತೈವಾನ್‌, ವಿಯೆಟ್ನಾಂ, ಮಲೇಷ್ಯಾ ಮತ್ತು ಫಿಲಿಫೈನ್ಸ್‌ ದೇಶಗಳ ನಡುವೆ ಇಂಧನ ಸರಬರಾಜು ಮತ್ತು ಮತ್ಸ್ಯೋದ್ಯಮ ನಡೆಯುತ್ತದೆ.

ಅರಬ್ಬಿ ಸಮುದ್ರ
ಅರಬ್ಬೀ ಸಮುದ್ರವು ಭಾರತ, ಪಾಕಿಸ್ಥಾನ, ಒಮನ್‌, ಇರಾನ್‌, ಮಾಲ್ಡೀಸ್‌ ದೇಶಗಳ ಸಮುದ್ರ ತೀರವನ್ನು ಹೊಂದಿದೆ. ಅರಬ್ಬೀ ಸಮುದ್ರವೂ ಭಾರತದ ಮಟ್ಟಿಗೆ ಬಹುಮುಖ್ಯವಾದ ಸಮುದ್ರ ಮಾರ್ಗ. ಇದೇ ಸಮುದ್ರ ಮಾರ್ಗವಾಗಿ ಯುರೋಪ್‌ ದೇಶಗಳಿಗೆ ಭಾರತವೂ ವ್ಯಾಪಾರ, ವಾಣಿಜ್ಯ ವಹಿವಾಟು ನಡೆಸುತ್ತದೆ. ಇದು 38,61,672 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ.

ಅಟ್ಲಾಂಟಿಕ್‌ ಸಾಗರ
ಪ್ರಪಂಚದ ಎರಡನೇ ಅತಿದೊಡ್ಡ ಸಾಗರವಾದ ಅಟ್ಲಾಂಟಿಕ್‌ ಸಮುದ್ರವೂ ಭೂಮಿಯ ಮೇಲ್ಮೆ„ಯ ಶೇ. 21ರಷ್ಟು ಒಳಗೊಂಡಿದೆ. ಅಪಾಯಕಾರಿ ಬರ್ಮುಡಾ ಟ್ರೈ ಆ್ಯಂಗಲ್‌ ಬರುವುದು ಇದೇ ಸಮುದ್ರದ ವ್ಯಾಪ್ತಿಯಲ್ಲಿ. ಇದು 8,65,05,603 ಚದರ ಕಿ.ಮೀ. ಹರಿವು ಹೊಂದಿದೆ.

ಪೆಸಿಫಿಕ್‌ ಸಾಗರ
ಭೂಮಿಯ ಹೆಚ್ಚಿನ ನೀರಿನ ಭಾಗವನ್ನು ಪೆಸಿಫಿಕ್‌ ಹೊಂದಿದೆ. ಏಷ್ಯಾ ಮತ್ತು ಆಸ್ಟ್ರೇಲಿಯ ಮಧ್ಯೆದಲ್ಲಿ ಬರುವ ಈ ಸಾಗರ ಅಟ್ಲಾಂಟಿಕ್‌ ಮಹಾಸಾಗರಕ್ಕಿಂತ ಎರಡು ಪಟ್ಟು ಹೆಚ್ಚು ನೀರಿನ್ನು ಹೊಂದಿದೆ. ಇದನ್ನು ಶಾಂತ ಸಾಗರ ಎಂತಲೂ ಕರೆಯಲಾಗುತ್ತದೆ.

-ಶ್ರೀಶೈಲಾ ಸ್ಥಾವರಮಠ, ಕೂಡಲಸಂಗಮ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.