Udayavni Special

ಮಳೆಯು ಭೂಮಿಗೆ ಸೇರುವ ಪಯಣ…

Team Udayavani, Jun 7, 2021, 2:00 PM IST

ಮಳೆಯು ಭೂಮಿಗೆ ಸೇರುವ ಪಯಣ…

ಮೋಡದಿಂದ ಬಿಂದುವಿನ ರೂಪದಲ್ಲಿ ಮಳೆಯು ಭೂಮಿಗೆ ಸೇರುವ ಪಯಣ ಅಮೋಘವಾದದ್ದು,   ಮಲೆನಾಡಿನಲ್ಲಿ ಮಳೆಯ ಆಗಮನ ಒಂದು ಹಬ್ಬದಂತೆ ಭಾಸವಾಗುತ್ತದೆ. ಪ್ರಕೃತಿಯಲ್ಲಿ ಮಳೆಯ ಆಗಮನವಾದಾಗ ಏನೋ ಒಂದು ಲವಲವಿಕೆ, ಬಿಸಿಲಿನ ಬೇಗೆಯಿಂದ ತತ್ತರವಾದ ಬರಡು ಭೂಮಿ ಹಚ್ಚಹಸುರಾಗಿ ನಲಿಯುತ್ತದೆ. ಬಿರು ಬೇಸಗೆಯಲ್ಲಿ ಮಾಗಿದ ಮಾವಿನ ಹಣ್ಣನ್ನು ನೀಡಿದ ಮರ ಇಂದು    ವಸಂತನ ಆಗಮನಕ್ಕೆ ಚಿಗುರೊಡೆದು ಸಂತಸ ವ್ಯಕ್ತಪಡಿಸುತ್ತದೆ.

ಮಳೆಯೇ ಹಾಗೆ,  ವಾತಾವರಣದಲ್ಲಿ ಹಲವಾರು ಬಗೆಯ ಬದಲಾವಣೆಗಳನ್ನು ತರುತ್ತದೆ. ಮಲೆನಾಡ ಜನರಿಗೆ ಈ ಮಳೆಯಲ್ಲಿ ಹಲವು ವಿಧಗಳಿವೆ. ಮುಂಜಾನೆ ಬರುವ ಚುಮುಚುಮು ಮಳೆ,ಒಮ್ಮೆ ಬಂದು ಅರೆಕ್ಷಣ ನಿಂತು ಮತ್ತೆ ಬರುವ ಪಿರಿಪಿರಿ ಮಳೆ. ಧೋ ಎಂದು ಗಾಳಿಯೊಡನೆ ಬರುವಾಗ ಗಾಳಿಮಳೆ, ಧಾರಾಕಾರವಾಗಿ ಗುಡುಗು-ಸಿಡಿಲಿನೊಂದಿಗೆ ಬರುವ ಮಳೆ ಹೀಗೆ ಹಲವಾರು ವಿಧಗಳು.

ಮಳೆ ಬಂದಾಗಲೆಲ್ಲ ಭುವಿಯೂ ತಣ್ಣಗಿರಿಸುವುದರ ಜತೆ ಮನುಜರಲ್ಲಿ ತಮ್ಮ ಹಳೆಯ ನೆನಪುಗಳನ್ನು ನೆನಪಿಸುತ್ತಲೂ ಇರುತ್ತದೆ.

ಮಳೆ ಬಂದರೆ ಸಾಕು ನಾವೆಲ್ಲಾ ಭಾವನಾತ್ಮಕವಾಗಿ ನಮ್ಮ ಶಾಲಾ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತೇವೆ. ಬಣ್ಣಬಣ್ಣದ ಕೊಡೆಗಳ ನೋಟ, ಮುಂಜಾವಿನ ಮಳೆಯಿಂದ ಒದ್ದೆಯಾದ ಸಮವಸ್ತ್ರ, ರಸ್ತೆಯ ಹೊಂಡದ ನೀರನ್ನು ಗೆಳೆಯರಿಗೆ ರಟ್ಟಿಸಿ ಸಿಕ್ಕಿದ ಖುಷಿ.ಮಳೆಯೆಂದರೆ ಹೀಗೆ ನೆನಪಿನ ಬುತ್ತಿ ತೆರೆಯುತ್ತಾ ಹೋಗುತ್ತದೆ.  ಮಳೆ ಒಂದು ರೂಪಕ. ನಮ್ಮ ಜೀವನದಲ್ಲಿ ಬರುವ ಹೊಸತನವನ್ನು ಇದು ಸೂಚಿಸುತ್ತದೆ. ಬರಡು ಭೂಮಿಯಂತೆ ಉತ್ಸಾಹ ಕಳೆದುಕೊಂಡಿರುವ ನಮಗೆ ಮಳೆಯ ಆಗಮನ ಜೀವನೋತ್ಸಾಹ ಹೆಚ್ಚಿಸುತ್ತದೆ.  ಬದುಕುವಂತೆ ಪ್ರೇರೇಪಿಸುತ್ತದೆ.

ಕೀರ್ತಿ ಗೋಖಲೆ  

ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ

ಟಾಪ್ ನ್ಯೂಸ್

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

j

ಪುರುಷರ ತಪ್ಪಿಗೆ ಮಹಿಳೆಯರಿಗೇಕೆ ಶಿಕ್ಷೆ? ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತ ನಟಿ ರಿಚಾ ಚಡ್ಡಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಆ ಸಂತಸದ  ಘಳಿಗೆ ಮರೆಯುವುದುಂಟೇ?

ಆ ಸಂತಸದ  ಘಳಿಗೆ ಮರೆಯುವುದುಂಟೇ?

ನೆನಪಿರಲಿ ಆಕೆಗೂ ಒಂದು ಮನಸ್ಸಿದೆ…

ನೆನಪಿರಲಿ ಆಕೆಗೂ ಒಂದು ಮನಸ್ಸಿದೆ…

Untitled-3

ಕನಸುಗಳಿಗೆ  ರೆಕ್ಕೆ ಕಟ್ಟಿ ಹಾರುವ ಸಮಯವಿದು…

MUST WATCH

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

udayavani youtube

ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು

ಹೊಸ ಸೇರ್ಪಡೆ

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.