ಮಳೆಯೊಂದು ಪ್ರೀತಿಯ ಆಗರ


Team Udayavani, Jun 9, 2021, 10:00 AM IST

ಮಳೆಯೊಂದು ಪ್ರೀತಿಯ ಆಗರ

ಸಾಂದರ್ಭಿಕ ಚಿತ್ರ

“ಮೇಘರಾಜ ಬಂದ ನಮ್ಮ ಊರಿಗೆ ‘ ಎನ್ನುವ ಹಾಡು ಗುನುಗುತ್ತಲೆ ಆಕಾಶದ ಮೊಡದ ಮರೆಯಿಂದ ಚಿಟಪಟ ಹನಿ ಬೀಳುತ್ತಿದ್ದರೆ ಅದನ್ನು ನೋಡುವುದೇ ಒಂದು ಖುಷಿ ಇದ್ದಂತೆ. ಕಾಡುಗಳು ಮೆಲ್ಲನೆ ಹಸುರ ಸೆರಗನ್ನು ಹೊದ್ದು ಆಕಾಶಕ್ಕೆ ಮುಖ ಮಾಡಿ ಕನ್ನಡಿ ನೋಡಿಕೊಳ್ಳುವಂತೆ ನೋಡುತ್ತಾ ಶೃಂಗರಿಸಿಕೊಳ್ಳುತ್ತದೆ. ಅಲ್ಲಿಗೆ ಮೊದಲ ಮಳೆಯ ಹನಿ ಭುವಿಗೆ ಬಿದ್ದು ನಾಚುತ್ತಾ ಕರಗಿ ಹೋಗುತ್ತದೆ. ಆಮೇಲಿನದು ಏನಿದ್ದರೂ ನಾಚಿಕೆಯನ್ನೂ ಬಡಿದೆಬ್ಬಿಸಿಕೊಂಡು ಆಗಸದ ಮೇಲಿಂದ ಮೇಲೆ ಮಳೆಯ ಪ್ರಣಯಗೀತೆಯನ್ನು ಹಾಡುತ್ತಲೇ ಇರುತ್ತದೆ.

ಮಳೆ ಎಂದ ಕೂಡಲೇ  ಬಾಲ್ಯದ ನೆನಪಾಗುತ್ತದೆ. ಮಳೆಯಲ್ಲಿ ನೆನೆಯುವ ಆ ಸುಖವೇ ಬೇರೆ. ನಿಸರ್ಗದ ಈ ಪರಮ ರೋಚಕತೆಯನ್ನು ಅನುಭವಿಸಲು ವಯಸ್ಸಿನ ಹಂಗಿಲ್ಲ. ಚಿಟಪಟ ಸುರಿಯುವ ಮಳೆಯ ನಡುವೆ  ಮೈ ಮನ ಪುಳಕಗೊಂಡು ಮಿದುವಾದ ನೆಲದಲ್ಲಿ ನಾಲ್ಕು ಹೆಜ್ಜೆ ಹಾಕುತ್ತೇವೆ. ಆಗಸದ ಶೂನ್ಯದಿಂದ ಥಳಥಳಿಸುವ ಮುತ್ತುಗಳಂತೆ ನೆಲಕ್ಕೆ ಬಿದ್ದು ಜೀವಸೃಷ್ಟಿಗೆ ಮುನ್ನುಡಿಯ ಹಾಡುವ ಮಳೆಯು ಅದ್ಯಾವುದೋ ಮಾಯಾ ನಗರಿಯಿಂದ ಲಗ್ಗೆ ಇಟ್ಟಿದೆಯೇನೋ ಎಂದು ಭಾಸವಾಗುತ್ತದೆ.

ಈ ಮಳೆಯ ಹುಟ್ಟೇ ಒಂದು ಚೋದ್ಯ. ಬಿಸಿ ಬಿಸಿ ಬೇಗೆಯ ದಿನಗಳಲ್ಲಿ, ಮಳೆಯ ಸೂಚನೆ ಇರದೇ, ಆಗಸದಲ್ಲೆಲ್ಲ ಬಿಳಿ ಮೋಡ, ಬಿಸಿ ಗಾಳಿ. ನೆಲವೂ ಸಹ ಬಿರುಕು ಬಿಟ್ಟಿದ್ದು, ಅಂತರಾಳದ ಬೇಗೆಯನ್ನು ತಾಳದೇ ಬಿಸಿಯುಸಿರನ್ನು ಹೊರಹಾಕುತ್ತಿದೆಯೇನೊ ಎಂಬ ಭಾವನೆ. ಆಗ ಅದೆಲ್ಲಿಂದಲೋ ಒಂದಷ್ಟು ತಂಗಾಳಿ. ಬಿಳಿ ಮೋಡಗಳ ನಡುವೆ ದಟ್ಟ ನೀಲಿಯ ಛಾಯೆ; ಮದಿಸಿದ ಕರಿಗಳ ರೂಪ ಪಡೆಯುವ ಕರಿಮೋಡಗಳು. ಮಿಂಚುಗಳ ಕೋರೈಸುವ ಬೆಳಕು, ಗುಡುಗುಗಳ ಕೂಗಾಟ. ಖಾಲಿಯಾಗಿದ್ದ ಆಗಸದಲ್ಲಿ ಒಮ್ಮೆಗೇ ಸೃಷ್ಟಿಯಾಗುವ ನೀರಿನ ಹನಿಗಳು ನೆಲಕ್ಕೆ ಬಿದ್ದು, ಬಿಸಿ ಬಿಸಿ ಭೂಮಿಯನ್ನು ಹಸಿ ಹಸಿಗೊಳಿಸುವ ಅಪೂರ್ವ ಪ್ರಕ್ರಿಯೆಯೇ  ಚಂದ. ಅದಕ್ಕೇ ಇರಬೇಕು. ಮಳೆ ತರುವ ವಾಸನೆಯನ್ನೇ ಮನದೊಳಗೆ ಅಚ್ಚೊತ್ತಿಕೊಳ್ಳುವ ತವಕದಿಂದ, ಕಣ್ಮುಚ್ಚಿ ಮಣ್ಣಿನ ವಾಸನೆಯನ್ನು ಘ್ರಾಣಿಸುತ್ತಾರೆ.

ಮಳೆ ಬಿದ್ದ ಕೂಡಲೇ ಅದೇ ಮಳೆಯಲ್ಲಿ ನೆನೆಯುತ್ತಾ ನಿಲ್ಲುವರು, ತನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿರುವ ಪ್ರೀತಿಯ ಸೆಲೆಗೆ ದಾರಿ ಮಾಡಿಕೊಟ್ಟು, ಬಾನಿನಿಂದ ಬೀಳುವ ಮಳೆಯೊಡನೆ ಹರಿಬಿಡುತ್ತಾರೆ. ಮಳೆಯಲ್ಲಿ ನೆನೆಯುವುದರಲ್ಲೂ ಒಂದು ಖುಷಿ ಇದೆ – ಚಿಟಟಪ ಎಂದು ಆಗಸದಿಂದ ಬೀಳುವ ಮಳೆ ಹನಿಗಳು, ತಲೆ ಮೇಲೆ ತಮಟೆಯಂತೆ ಕುಟ್ಟಿ, ಕುತ್ತಿಗೆ ಭುಜದ ಮೇಲೆ ಹರಿದು, ಮೈ ಮನಗಳನ್ನೆಲ್ಲ ತೋಯಿಸಿ, ಮೂರ್ತ – ಅಮೂರ್ತ ಲೋಕಗಳ ಮಧ್ಯೆ ಇರುವ ಸೀಮಾರೇಖೆಯನ್ನು ಅಳಿಸಿ ಹಾಕಿ, ಅದ್ಯಾವುದೋ ಭಾವುಕ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

 

- ಪೂರ್ವಾ ಚಂದ್ರಕಾಂತ್‌ ,ಪೆಲತ್ತಡಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.