ಮಳೆಯಲಿ ಜತೆಯಲಿ


Team Udayavani, Jun 5, 2021, 3:47 PM IST

Untitled-1

ಅಂತೂ ಬೇಸಗೆ ಮುಗಿದು ಮಳೆಗಾಲ ಆರಂಭವಾಗುತ್ತಿದೆ. ಎಲ್ಲೆಲ್ಲೂ ಮಳೆಯದ್ದೇ ಅಬ್ಬರ. ವರುಣನ ಆಗಮನಕ್ಕೆ ಕಾದು ಕುಳಿ ತಿ ರುವ ರೈತನ ಮೊಗದಲ್ಲಿ ಖುಷಿಯ ಸಿಂಚನ ಮೂಡುವ ಸಮಯ ಈ ಮಳೆಗಾಲ. ಸಾಮಾನ್ಯವಾಗಿ ಮಳೆ ಎಂದ ತತ್‌ಕ್ಷಣ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ. ಆ ದಿನಗಳಲ್ಲಿ ಮಳೆ ಎಂದರೆ ಏನೋ ಒಂಥರಾ ಖುಷಿ. ಅದರಲ್ಲಿ ನೆನೆಯುವುದೆಂದರೆ ಎಲ್ಲಿಲ್ಲದ ಸಂತೋಷ. ಮೋಡದಿಂದ ಹನಿ ಬಿತ್ತೆಂದರೆ ಅದೇ ಮಳೆ ಎಂದುಕೊಳ್ಳುತ್ತಿದ್ದೆವು. ಆದರೆ ದಿನಗಳು ಕಳೆದಂತೆ ಮಳೆ ಹೇಗೆ ಉಂಟಾಗುತ್ತದೆ, ಅದರಿಂದಾಗುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಏನು ಎನ್ನುವುದನ್ನು ಕಲಿತಿದ್ದೇ ಅನಂತರದ ದಿನಗಳಲ್ಲಿ.

ಈಗಲೂ ಕೂಡ ಮಳೆಯ ಜತೆಗಿನ ಸಂಬಂಧ ಹಾಗೇ ಇದೆ. ಅದು ಒಂದು ರೀತಿಯ ಬಿಡಿಸಲಾಗದ ಅನುಬಂಧ. ಎಷ್ಟೇ ಸವಿದರೂ ಅನುಭವಿಸಿದರೂ ಇನ್ನೂ ಬೇಕು ಎನ್ನುವಷ್ಟು ಹಂಬಲ. ಮಳೆಯಲ್ಲಿ ನೆನೆಯುತ್ತಿದ್ದರೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದು ಕೂಡ ಬೇಕಾಗಿರುವು ದಿಲ್ಲ. ಮಳೆಯಲಿ, ಜತೆಯಲಿ ಕೈಗಳೆರಡು ಭೂಮಿಯಗಲಕ್ಕೆ ಚಾಚಿ, ಮುಖವನ್ನು ಬಾನೆತ್ತರಕ್ಕೆ ನೋಡುತ್ತ, ಕಣ್ಣು ಮುಚ್ಚಿ ವರ್ಷಧಾರೆಯನ್ನು ಅನುಭವಿಸುವುದರಲ್ಲಿ ಇರುವ ಸುಖ ಒಂದು ಕ್ಷಣ ವಾವ್‌Ø ಎನ್ನಿಸುತ್ತೆ. ಮೈ ಪುಳಕಿಸುವ ಮಳೆಗೆ ನಮ್ಮ ನೋವು, ಸಂತೋಷ ಎಲ್ಲವನ್ನೂ ಮರೆಮಾಚುವ ಶಕ್ತಿಯಿದೆ.

ಮಳೆ ಅಂದರೆ ಕೇವಲ ಅನುಭವಿಸುವುದಷ್ಟೇ ಅಲ್ಲ, ಇದು ರೈತನಿಗೆ ಜೀವ ಕೊಡುವ ಜೀವಾಮೃತ. ತಾನು ಬೆಳೆದ ಬೆಳೆಗೆ ಫ‌ಸಲು ಬರಬೇಕಾದರೆ ಮಳೆ ಅಗತ್ಯ. ಈ ದಿನಗಳಲ್ಲಿ ಬಿತ್ತನೆ ಪ್ರಾರಂಭವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮಳೆಯು ರೈತನ ಪಾಲಿಗೆ ಹಿಗ್ಗು ಆಗಬೇಕೇ ಹೊರತು ಆತನ ಕೊರಳಿಗೆ ಹಗ್ಗವಾಗಬಾರದು. ಏಕೆಂದರೆ ಮಳೆಗಾಗಿಯೇ ರೈತ ತನ್ನ ಎಷ್ಟೋ ಕಷ್ಟಗಳನ್ನು ಬದಿಗಿಟ್ಟು ಅದಕ್ಕೆಂದೇ ಕಾದು ಕೂರುತ್ತಾನೆ. ಹಾಗಾಗಿ ಮಳೆ ನಮ್ಮೆಲ್ಲರ ಹಿಗ್ಗು ಅಷ್ಟೇ ಅಲ್ಲದೆ ರೈತನ ಮುಖದ ಮೇಲಿನ ನಗೆಯಾಗಲಿ.

 

-  ಪೂರ್ಣಿಮಾ,  ಅಕ್ಕಮಹಾದೇವಿ ವಿವಿ, ವಿಜಯಪುರ

ಟಾಪ್ ನ್ಯೂಸ್

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-saddsdsadd

ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ

1-3qeqwreqwrw3

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಹರಿಪ್ರಿಯಾ

1-wwewqewq

ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ಇಸ್ಲಾ-ವ-ತಂಝೀಮ್ ನಿರ್ಣಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-23

ಮೈ ಮನ ಸೆಳೆಯುವ ದೂದ್‌ಸಾಗರ್‌

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

tdy-19

ಹಬ್ಬದ ದಿನ ದೋಸೆ ಕದ್ದು ತಿಂದ ನೆನಪು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-sadsasad

ಸರಣಿ ನಿರ್ಣಾಯಕ ಪಂದ್ಯ: ಆಸೀಸ್ 269ಕ್ಕೆ ಆಲೌಟ್ ಮಾಡಿದ ಟೀಮ್ ಇಂಡಿಯಾ

1-adassad

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಯುನಿಕೋರ್ಟ್‌ ದಿನ

1-ffsdfsf

ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು

1-qweqw

ಕುಷ್ಟಗಿ:ಭಕ್ತ ಜನಸಾಗರದ ಮಧ್ಯೆ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.