ಇಳೆಯ ಬೆಳೆಗೆ ಮಳೆಯೇ ಕಳೆ


Team Udayavani, Jun 7, 2021, 3:00 PM IST

ಇಳೆಯ ಬೆಳೆಗೆ ಮಳೆಯೇ ಕಳೆ

ಮಳೆ ಎಂಬುದೇ ಒಂದು ರೋಮಾಂಚನ ಅನುಭವ. ಮಳೆಯಿಂದಲೇ ಇಳೆ, ಇಳೆಯಿಂದಲೇ ಜೀವಿಗಳು. ಮಳೆ ಇಲ್ಲದೇ ಬಸವಳಿದಿದ್ದ ಭುವಿಗೆ ಮೊದಲ ಮಳೆ ಕೊಡುವ ಹರ್ಷಕ್ಕೆ ಪಾರವೇ ಇಲ್ಲ. ಮೊದಲ ಮಳೆಗೆ ಭೂಮಿಯಿಂದ ಬರುವ ಪರಿಮಳ ಆಘ್ರಾಣಿಸುವುದೇ ಒಂದು ಚೇತೋಹಾರಿ ಕಂಪನ. ಭುವಿ -ಭಾನು ಒಂದಾಗಿ ಬೀಳುವ ಕುಂಭದ್ರೋಣದ ಮಳೆಯ ಜತೆಗೆ, ಗುಡುಗು ಸಿಡಿಲುಗಳಿಂದ ಆರ್ಭಟಿಸುವ ಹಾಗೂ ಎಲ್ಲವನ್ನೂ ಸ್ಥಾನಪಲ್ಲಟಗೊಳಿಸುವ ವಾಯುವಿನ ವೇಗವು ನಿಜಕ್ಕೂ ಮೈ ನಡುಕ ಹುಟ್ಟಿಸುವ ಸಂಗತಿ.  ಹಿತವಾದ ತಂಗಾಳಿಯ ಜತೆಗೆ ಮಿತವಾಗಿ ಬೀಳುವ ಮಳೆ ನಿಜಕ್ಕೂ ಮೈ ನವಿರೇಳಿಸುವಂತದ್ದು.

ಭೋರ್ಗರೆವ ಆರ್ಭಟದ ಮಳೆಯಿಂದ ನಮ್ಮೂರಿನ ಕೆರೆ ತುಂಬಿ ಕೋಡಿ ಹರಿದಾಗ ಎಲ್ಲೆಲ್ಲೂ ನೀರು ತುಂಬಿ ರಸ್ತೆಯಲ್ಲೇ ಈಜಾಡಿದ ಸಂಗತಿ ಇನ್ನೂ ನಮ್ಮ ಮನದಲ್ಲೇ ಜೀವಂತವಾಗಿದೆ. ಪ್ರತೀ ಮಳೆಯಿಂದಾಗಿ ಅದರ ಸವಿನೆನಪು ಮರುಕಳಿಸುವಂತಿರುತ್ತದೆ. ಇಳೆಗೆ ಸುರಿವ ಮಳೆ ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ. ಮಳೆಗಳ ನಾಡು  ಎಂದೆನಿಸಿರುವ ಮಲೆನಾಡು, ಕರಾವಳಿ ತೀರಾ ಪ್ರದೇಶ, ಉತ್ತರಕನ್ನಡ, ದಕ್ಷಿಣ ಕನ್ನಡ, ಕರ್ನಾಟಕದ  ಕಾಶ್ಮೀರ ಎಂದೆನಿಸಿರುವ ಕೊಡಗು ಇಲ್ಲೆಲ್ಲಾ ಮಳೆ ಬೀಳುವ ಸಂದರ್ಭದಲ್ಲಿ ನಿಸರ್ಗ ರಮಣೀಯವಾದ ವಾತಾವರಣ ನೋಡಲು ತುಂಬಾ ಸೊಗಸಾಗಿರುತ್ತದೆ.

ಚುಮು ಚುಮು ಎನಿಸುವ ಮಳೆ, ಹಿತವಾದ ತಂಗಾಳಿ, ಬಿಸಿ ಬಿಸಿಯಾದ, ರುಚಿ ರುಚಿಯಾದ ಆಹಾರವನ್ನು ಮೆಲ್ಲುವುದೇ ಮಹದಾನಂದ. ಇಂತಹ ಸಮಯದಲ್ಲಿ ಸ್ನೇಹಿತರೊಂದಿಗೆ ಚಾರಣ ಮಾಡುವುದೇ ಒಂದು ಬೃಹತ್‌ ಸಾಹಸ. ಪ್ರಕೃತಿಯೂ ಒಂದು ಉತ್ತಮ ಮಾರ್ಗದರ್ಶಿ ಎನ್ನುವಂತೆ ನಿಜಕ್ಕೂ ನಿಸರ್ಗದಲ್ಲಿ ಕೌತುಕ, ಕುತೂಹಲ ಸಂಗತಿಯನ್ನು ಅರಿಯುವುದೇ ಒಂದು ದೈವದತ್ತ ಕೊಡುಗೆ. ಮಲೆನಾಡ ಪ್ರದೇಶದಲ್ಲಿ ಬೇಸಗೆಯಲ್ಲಿ ಆಹಾರ ಮತ್ತು ಊರುವಲುಗಳನ್ನು, ದನಗಳ ಮೇವುಗಳನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಜೀವನ ನಿರ್ವಹಿಸುವ ಪರಿಯೇ ಚೆಂದ. ಮಾಯಾದಂತ ಮಳೆಗೆ ಖುಷಿ ಪಡದ ಜನರಿಲ್ಲ. ಮಳೆಯು ಬೆಂದಿರುವ ಭೂಮಿಯನ್ನು ಸ್ವತ್ಛ ಮಾಡುವುದರ ಜತೆಗೆ ಬೇಸತ್ತ ಮನಸ್ಸಿಗೂ ಶಾಂತಿ ನೀಡುತ್ತದೆ.

 

ಹರಿನಾಥ್‌ ವಿ.ಎ.

ಎಸ್‌.ಡಿ.ಎಂ ಕಾಲೇಜು,ಉಜಿರೆ

ಟಾಪ್ ನ್ಯೂಸ್

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.