ನೀ ಬರುವ ಹಾದಿಯನು ಕಾದು ಕುಳಿತವರು ನಾವು…


Team Udayavani, Jun 6, 2021, 3:00 PM IST

ನೀ ಬರುವ ಹಾದಿಯನು ಕಾದು ಕುಳಿತವರು ನಾವು…

ಸುಂದರ ಕ್ಷಣಗಳಿಗೆ ಸಾಕ್ಷಿಯಾಗುವ  ಒಂದು ಘಳಿಗೆ ಅದುವೇ ಮಳೆಗಾಲದ ಸಮಯ.  ಮಳೆ ಬರುವ ಮುನ್ನ ನಿಸರ್ಗದಲ್ಲಿ ಆಗುವ ಬದಲಾವಣೆ ಎಷ್ಟೊಂದು ಆಹ್ಲಾದಕರವಾಗಿರುತ್ತದೆ ಎಂದರೆ ಅದನ್ನು  ಪದಗಳಲ್ಲಿ ಹೇಳುವುದಕ್ಕಿಂತ  ಅನುಭವಿಸುವುದರಲ್ಲಿ ತುಂಬಾ ಖುಷಿ ಸಿಗುತ್ತದೆ. ತಂಪಾಗಿ ಬೀಸುವ   ಗಾಳಿ  ಒಂದು ಕಡೆಯಾದರೆ ಮೋಡಕವಿದ  ವಾತಾವರಣ ಮತ್ತೂಂದು ಕಡೆ. ಅದರ ಮಧ್ಯದಲ್ಲಿ ನಾನು ಏಕೆ ಸುಮ್ಮನೆ ಇರಲಿ ಎಂದು ಗುಡುಗು ಮತ್ತು ಸಿಡಿಲಿನ ನಡುವೆ ಭಯಂಕರವಾಗಿ ಸಮರಕ್ಕೆ ಸಿದ್ಧ.

ಈ ವರುಣನು  ಸಹ ಯಾವಾಗ ಬೇಕಾದರೂ ಬಂದು ಬಿಡುವನು. ಅವನ ಅಚಾನಕ್‌ ಆಗಮನ ನಮಗೆ  ಒಂದು ಕಡೆ ಖುಷಿಯನ್ನು  ತಂದರೆ ಮತ್ತೂಂದು ಕಡೆ  ದುಃಖಕ್ಕೆ ಆಹ್ವಾನವನ್ನು ಕೊಟ್ಟು ಅನಾಹುತಗಳ ರಹದಾರಿಯಲ್ಲಿ ತಂದು ಬಿಟ್ಟು ಬಿಡುತ್ತಾನೆ. ಆದರೂ ವರುಣನ ಆಗಮನ  ಏನೋ ಒಂದು ಹರುಷವನ್ನು  ವ್ಯಕ್ತ ಪಡಿಸುತ್ತದೇ ನೀ ಬರುವ ದಾರಿಯನ್ನು  ಕಾದು ಕುಳಿತವರು ನಾವು ಎಂದರೂ ಅತಿಶಯೋಕ್ತಿ ಇಲ್ಲ.

ಜಿಟಿಪಿಟಿ ಮಳೆ ಬರುವ ಸಮಯದಲ್ಲಿ ಬಿಸಿಯಾದ ಚಹಾ  ಜತೆಗೆ ಮಿರ್ಚಿ ಬಜ್ಜಿ ಇದ್ದರೆ ಬೇರೊಂದು ಲೋಕಕ್ಕೆ ಹೋಗಿ ಬಂದ ಹಾಗೆ  ಭಾಸವಾಗುತ್ತದೆ. ಅದರೊಂದಿಗೆ ಓದಲು ಪುಸ್ತಕ ಹಾಗೂ ಕೇಳಲು ಇಂಪಾದ ಹಾಡು ಇದ್ದರೆ ಆ ಸಂತೋಷವೇ ಬೇರೆ.

“ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಯೋಗರಾಜ್‌ ಭಟ್ಟರು ಬರೆದ  ಸಾಲುಗಳು ನೆನಪಿಗೆ ಬರುತ್ತದೆ. ಅವರು ಹೇಳಿದ ಹಾಗೇ ಮಳೆರಾಯನ ಲೀಲೆಯನ್ನು ತಿಳಿದುಕೊಂಡವರು ಯಾರೂ ಇಲ್ಲ ಎನ್ನಬಹುದು.

ಮಳೆ ಮತ್ತೇ  ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಪುಟ್ಟ ಪುಟ್ಟ ಕೊಡೆ, ರೈನ್‌ ಕೋಟ್‌ಗಳು ಅಮ್ಮ ಬೈದು ಬೈದು ಹಾಕಿದರು ಮತ್ತೆ  ಮನೆಗೆ ಮರಳುವಾಗ ತಲೆ ಎಲ್ಲ ಒದ್ದೆಯಾಗಿರುವುದನ್ನು ಕಂಡು ಮತ್ತೆ ಅವರು ಮುನಿಸಿಕೊಳ್ಳುವುದು, ಆಲಿಕಲ್ಲು ಬೀಳುವಾಗ ಅದನ್ನು ಹಿಡಿಯಲು ಮಳೆಯಲ್ಲಿ ಓಡಾಡುವುದು, ನಿಂತ ನೀರಿನಲ್ಲಿ ಸ್ನೇಹಿತರ ಜತೆಗೂಡಿ ಆಟವಾಡುವುದು, ಮಳೆರಾಯನ ಆರ್ಭಟಕ್ಕೆ ಅದೆಷ್ಟು ಸಲ ಭಯ ಪಟ್ಟಿದ್ದು ಉಂಟು.  ಅಮ್ಮನ ಮಡಿಲಲ್ಲಿ  ಹೋಗಿ ಬಚ್ಚಿಟ್ಟುಕೊಂಡಿದ್ದು ಉಂಟು. ಹೀಗೆ ಹತ್ತು ಹಲವಾರು ಕೀಟಲೆಗಳನ್ನು ಮಾಡುತ್ತಿದ್ದುದು ಉಂಟು. ಆದರೆ  ಈಗ ಅವು ನೆನಪು ಮಾತ್ರ ಅಷ್ಟೇ. ಮಳೆ , ವರುಣ, ವರ್ಷಧಾರೆ , ಹೀಗೆ ಹಲವಾರು  ರೀತಿಯಿಂದ ಕರೆಯುವ ಈ ವರುಣ ದೇವನ ಆಗಮನವೇ ಮನುಜ ಕುಲಕ್ಕೆ ಒಂದು ಹರುಷದ ವಾತಾವರಣ.

ರೈತನ ಮೊಗದಲ್ಲಿ ಮಂದಹಾಸವನ್ನು ಮೂಡಿಸುವವನು ಇವನೇ. ಹಾಗೆ ಕೆಲವೊಂದು ಸಲ ಎಡೆ‌ಬಿಡದೆ ಸುರಿದು ಅವರ ಖುಷಿಯನ್ನು ಹಿಂದೆ  ಪಡೆಯವವನು ಇವನೇ.  ಮಳೆ ಇಲ್ಲದೆ ಸಕಲ ಜೀವ ರಾಶಿಗಳು ಬದುಕಲು ಸಾಧ್ಯವಿಲ್ಲ.  ನಾವು ಮತ್ತೆ ನಮ್ಮ ಕನಸಿನ ಜೀವನಕ್ಕೆ ಜ್ಯೋತಿಯನ್ನು ಬೆಳಗಬೇಕು ಎಂದರೆ ಪರಿಸರ ಮಾತೆ ಯನ್ನು ರಕ್ಷಿಸಬೇಕು.  ಮತ್ತೇ ಬಾಲ್ಯದ ನೆನಪುಗಳು ಬೇಕು ಎಂದರೆ ಗಿಡಗಳನ್ನು ಬೆಳೆಸಬೇಕು. ಸದ್ಯ ಪರಿಸ್ಥಿತಿ ಒಮ್ಮೆ ಅರಿತು ಕೊಂಡರೆ  ನಾವೇ ನಮ್ಮಲ್ಲಿ ಬದಲಾವಣೆಯನ್ನು ತರಬಹುದು.

 

ಭಾಗ್ಯಶ್ರೀ ಎಸ್‌. ಆರ್‌.ಧಾರವಾಡ

ಟಾಪ್ ನ್ಯೂಸ್

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

shivaram

ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ ; ಐಸಿಯುನಲ್ಲಿ ಚಿಕಿತ್ಸೆ

accident

ಅಪಘಾತ: ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

1-fdssdf

ರೌಡಿ ಹಿನ್ನಲೆ, ತೆರಿಗೆ ಕಳ್ಳರೇ ಡಿಕೆಶಿ ಆಯ್ಕೆ : ಬಿಜೆಪಿಯಿಂದ ಟ್ವೀಟ್ ಆಸ್ತ್ರಗಳ ಪ್ರಯೋಗ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

ಹೊಸ ಸೇರ್ಪಡೆ

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

suicide lovers

ಮದುವೆಗೆ ಪೋಷಕರ ವಿರೋಧ: ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಶರಣು

shivaram

ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ ; ಐಸಿಯುನಲ್ಲಿ ಚಿಕಿತ್ಸೆ

ಕನೇರಿಯಲ್ಲಿ ಗರ್ಭಸಂಸ್ಕಾರ ಕೇಂದ್ರ ಲೋಕಾರ್ಪಣೆ : ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ

ಕನೇರಿಯಲ್ಲಿ ಗರ್ಭಸಂಸ್ಕಾರ ಕೇಂದ್ರ ಲೋಕಾರ್ಪಣೆ : ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.