ಹಸುರಿನ ತೆಕ್ಕೆಯಲ್ಲಿನ ಮಲೆನಾಡ ದಿನಚರಿಯೇ ಅದ್ಭುತ

Team Udayavani, Aug 31, 2020, 10:20 AM IST

Malnadu

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಮ್ಮೂರು ಮಲೆನಾಡು… ಸೌಂದರ್ಯದ ತರುನಾಡು… ಕಾಫಿಯ ತವರೂರು… ಶಿಲ್ಪಕ್ಕೆ ಬೇಲೂರು… ಈ ಹಾಡು ಎಷ್ಟು ಚಂದಾ ಅಲ್ವಾ?

ಹಾಡಿನಂತೆ ನಮ್ಮೂರೂ ಅಷ್ಟೆ ಚಂದ.

ಮಳೆಗಾಲದಲ್ಲಿ ಪ್ರಕೃತಿಯೆ ಹಸಿರು ಕಂಬಳಿ ಹೊದ್ದು ಮಲಗಿದಂತೆ ಕಾಣುತ್ತದೆ.

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಜಾಸ್ತಿಯಾಗಿ ಓದಿನ ಸಲುವಾಗಿ ಬೇರೆ ಊರಿನಲ್ಲಿ ಇರುತ್ತಿದ್ದ ನನಗೆ ನಮ್ಮೂರಿನಲ್ಲಿ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ.

ಆದರೆ ಈಗ ಮಳೆಗಾಲದಲ್ಲಿ ನಮ್ಮೂರನ್ನು ನೋಡಿ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ.

ಎಲ್ಲಿ ನೋಡಿದರು ಪ್ರಕೃತಿಯ ನವಿಲ ನರ್ತನ, ಪ್ರೀತಿಯ ಮಳೆಯ ಜಿನುಗು ಸಿಂಚನ. ನನ್ನೂರಿನ ಆ ಮಳೆ, ಕಾಫಿ ವಾಸನೆ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ , ಬಾಳೆತೋಟ ಹೀಗೆ…ನನ್ನೂರನ್ನು ವರ್ಣಿಸುವುದಕ್ಕೆ ಪದಗಳೆ ಸಿಗುತ್ತಿಲ್ಲ.

ಸದಾ ಹರಿಯೊ ನಮ್‌ ತುಂಗಾ ಭದ್ರಾ ಮತ್ತು ಹೇಮಾವತಿ ನಮ್ಮಲ್ಲಿ ಉತ್ಸಾಹ ತುಂಬುತ್ತವೆ. ತಿಂಡಿಯ ವಿಷಯಕ್ಕೆ ಬಂದರೆ ಕಡುಬು, ಪತ್ರೊಡೆ, ನೀರುದೋಸೆ ಬಹಳ ನಮ್ಮಲ್ಲಿ ಜನಪ್ರಿಯ.

ನಮ್ಮ ಚಿಕ್ಕಮಗಳೂರಿನ ಇನ್ನೊಂದು ವಿಶೇಷ ಗೊತ್ತಾ?ಇದನ್ನು ಎರಡನೇ ಸ್ವೀಜರ್‌ಲ್ಯಾಂಡ್‌ ಅಂತಾನೂ ಕರೆಯುತ್ತಾರೆ. ದೇಶಕ್ಕೆ ಪರಿಚಯವಾದ ಕಾಫಿ ಡೇ ನಮ್ಮೂರ ಹೆಮ್ಮೆಯ ಕೊಡುಗೆ. ಪ್ರತಿ ವರ್ಷ ಮಳೆಗಾಲದಲ್ಲಿ ಒಂದೆರಡು ದಿನ ಕಾಲೇಜಿಗೆ ರಜೆ ಹಾಕಿ ಗೆಳತಿಯರ ಜತೆ, ಮಳೆಯ ಮಜಾ ಅನುಭವಿಸುವುದು ನನಗೆ ಪ್ರಿಯವಾದ ಹವ್ಯಾಸ. ಚಿಕ್ಕವಳಿದ್ದಾಗಿನಿಂದ ಕಳೆದ ಮಳೆಗಾಲದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ದಿನಗಟ್ಟಲೆ ಸುರಿಯುವ ಮಳೆಯಲ್ಲಿ ಛತ್ರಿ ಇದ್ದರೂ ಬೇಕೆಂತಲೇ ನೆನೆಯುತ್ತಿದ್ದುದು, ಬಿಳಿ ಅಂಗಿಗೆ(ಯುನಿಫಾರ್ಮ್ )ಎಷ್ಟು ಸಾಧ್ಯವೋ ಅಷ್ಟು ಕೆಸರು ಮೆತ್ತಿಕೊಂಡು ಅಪ್ಪನಿಂದ ಬೈಗುಳ ತಿನ್ನುತ್ತಿದ್ದ ನೆನಪು ನಮ್ಮೂರಿನಂತೆ ಸದಾ ಹಸಿರು.

ತುಂಬಿದ ಹೊಳೆ ನೋಡಲು ಹೋಗಿ ಸ್ವಲ್ಪದರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು, ಬಿಕ್ಕೆ ಹಣ್ಣು, ಚಳ್ಳೆಹಣ್ಣು ಮೆಲ್ಲುತ್ತಿದ್ದುದು, ವಾರಗಟ್ಟಲೇ ಕರೆಂಟು ಇಲ್ಲದೆ ಕಳೆದ ದಿನಗಳು ಎಲ್ಲವೂ ಸ್ಮತಿ ಪಟಲದಲ್ಲಿ ಹಾದು ಹೋಗುತ್ತದೆ.

ಸುನೀತಾ ಎಚ್‌.ಎಸ್‌. ಚಿಕ್ಕಮಗಳೂರು, ಎಂ.ಪಿ.ಎಂ. ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.