ನಾನು ಮೆಚ್ಚಿದ ಸಿನೆಮಾ “ಇನ್‌ ಟು ದಿ ವೈಲ್ಡ್‌”


Team Udayavani, Jul 10, 2020, 5:15 PM IST

ನಾನು ಮೆಚ್ಚಿದ ಸಿನೆಮಾ “ಇನ್‌ ಟು ದಿ ವೈಲ್ಡ್‌”

“ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎನ್ನುವ ಮಾತಿನಂತೆ ಪ್ರವಾಸಗಳು, ಅನುಭವಗಳು, ನಮಗೆ ಪ್ರತಿ ಗಳಿಗೆಯೂ ಹೊಸತೊಂದು ಅನುಭವ, ಜೀವನದ ಮೌಲ್ಯವನ್ನು, ಪಾಠವನ್ನು, ಜೀವಿಸುವ ಸಂಭ್ರಮವನ್ನು ನೀಡುತ್ತವೆೆ. ಇಂತಹುದೇ ಒಂದು ಗುರಿಯನ್ನು ಇಟ್ಟುಕೊಂಡು; 1992ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನೆಮಾ “ಇನ್‌ ಟು ದಿ ವೈಲ್ಡ್’. ಇದು ನಾನು ಮೆಚ್ಚಿದ ಸಿನೆಮಾವಾಗಿದೆ.

ಈ ಸಿನೆಮಾವನ್ನು ಜಾನ್‌ ಕ್ರಾಕರ್‌ ಅವರ ಬರೆದ “ಇನ್‌ ಟು ದಿ ವೈಲ್ಡ್‌’ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಲಾಗಿದೆ. ಸಿನ್‌ ಪಿನ್‌ ಅವರ ನಿರ್ದೇಶನ, ಎಮಿಲಿ ಹಿರ್ಷ್‌ ಕ್ರಿಸ್ಟೋಫ‌ರ್‌ ಪಾತ್ರವನ್ನು ನಿಭಾಯಿಸುವ ರೀತಿ ಎಲ್ಲರ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ನಾಯಕ ನಟನು ಯಾವುದೇ ರೀತಿಯ ತಯಾರಿ ಇಲ್ಲದೆ, ಹಣವಿಲ್ಲದೆ, ಕೈಯಲ್ಲೊಂದು ಬ್ಯಾಗ್‌ ಹಿಡಿದುಕೊಂಡು ಪ್ರಯಾಣವನ್ನು ಆರಂಭಿಸುತ್ತಾನೆ.

ಪ್ರತಿಯೊಬ್ಬರಿಗೂ ಪದವಿ ಮುಗಿದ ಅನಂತರ ತಮ್ಮದೇ ಆದ ಕೆಲಸ, ಕನಸುಗಳನ್ನು ನನಸು ಮಾಡಿಕೊಳ್ಳುತ್ತ ಪ್ರಯಾಣ ಬೆಳೆಸುತ್ತಾರೆ. ಆದರೆ, ಚಿತ್ರದಲ್ಲಿ ನಾಯಕ ನಟನಿಗೆ ವಸ್ತುಗಳು, ಹಣದ ಮೇಲೆ ವ್ಯಾಮೋಹವೇ ಇರುವುದಿಲ್ಲ. ತನ್ನೆಲ್ಲ ಉಳಿತಾಯದ 18 ಲಕ್ಷ ರೂ. ಹಣವನ್ನು ಒಂದು ಸಂಸ್ಥೆಗೆ ದಾನ ಮಾಡಿ ತನ್ನ ಹತ್ತಿರವಿದ್ದ ಗುರುತಿನ ದಾಖಲೆಗಳನ್ನು ನಾಶ ಮಾಡಿ ವರ್ಜೀನಿಯಾದಿಂದ ಅಲಾಸ್ಕಾಗೆ ಪ್ರಯಾಣ ಬೆಳೆಸುತ್ತಾನೆ.

ಯಾವುದೇ ಭಯವಿಲ್ಲದೆ, ಆಸೆಯಿಲ್ಲದೆ, ದಾರಿ ಉದ್ದಕ್ಕೂ ಸಿಗುವ ಜನರ ಜತೆ ಮಾತನಾಡುತ್ತ¤, ಕಾಲವನ್ನು ಕಳೆಯುವುದನ್ನು ರೂಢಿಸಿಕೊಂಡನು. ಚಿತ್ರದಲ್ಲಿ ನಾಯಕ ನಟ ಹೇಳುವಂತೆ, ಜೀವನದಲ್ಲಿ ಒಮ್ಮೆಯಾದರೂ ಮೊಬೈಲ್‌ ಇಲ್ಲದೆ, ಸ್ನೇಹಿತರ ಜತೆ ಸಂಪರ್ಕವಿಲ್ಲದೆ, ಎಲ್ಲ ಸಂಬಂಧಗಳಿಂದ ದೂರವಾಗಿರಬೇಕು. ಪ್ರತಿ ಸಮಸ್ಯೆಯನ್ನು ನೀವೇ ಪರಿಹರಿಸಿಕೊಳ್ಳಬೇಕೆಂದು ಹೇಳುತ್ತಾನೆ. ಸಿನೆಮಾದಲ್ಲಿನ ಚಿಕ್ಕಚಿಕ್ಕ ವಿಷಯಗಳು ನಮಗೆ ಖುಷಿ ನೀಡುತ್ತವೆ.

ಕಾರಿನಲ್ಲಿ ದೂರ ಪ್ರಯಾಣ ಮಾಡುವುದು, ಕಾಡಿನಲ್ಲಿ ಹಣ್ಣುಗಳನ್ನು ತಿನ್ನುವುದು, ಪರ್ವತಗಳನ್ನು ಹತ್ತುವುದು, ಪ್ರಕೃತಿಯನ್ನು ಒಬ್ಬಂಟಿಯಾಗಿ ಆಸ್ವಾದಿಸುವುದು. ಒಟ್ಟಾರೆಯಾಗಿ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಖುಷಿಯಾಗಿರಬೇಕೆಂದು ಹೇಳುತ್ತಾನೆ. ಸಿನೆಮಾದಲ್ಲಿ ಇನ್ಯಾರೋ ಕುಟುಂಬದ ಪ್ರೀತಿಯನ್ನು ತೋರಿಸುತ್ತಾರೆ, ಸಂಗಾತಿ ಆಗುವುದಕ್ಕೆ ಪ್ರಯತ್ನಿಸುತ್ತಾರೆ, ಇನ್ನೊಬ್ಬರು ಪುತ್ರ ವಾತ್ಸಲ್ಯ ತೋರಿಸುತ್ತಾರೆ. ನಾಯಕ ಯಾವುದೇ ರೀತಿಯ ಬಂಧನಕ್ಕೆ ಒಳಗಾಗದೆ, ಒಬ್ಬ ಯೋಗಿಯಂತೆ ಬದುಕುತ್ತಾನೆ. ಹೀಗೆ ತನ್ನ ಪ್ರಯಾಣವನ್ನು ಮುಂದುವರಿಸುತ್ತ ಅಲಾಸ್ಕಾದ ಡೆನಾಲಿ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಾನೆ. ಅಲ್ಲಿರುವ ಮ್ಯಾಜಿಕ್‌ ಬಸ್‌ನಲ್ಲಿ ಜೀವನ ಮಾಡುತ್ತಾನೆ. 4 ತಿಂಗಳ ಅನಂತರ ತನ್ನ ಜೀವನ ಕಠಿನವೆನಿಸುತ್ತದೆ. ಪ್ರಕೃತಿಯು ನಡುವಿನ ಜೀವನ ಕಠಿನ ಹಾಗೂ ಕಾಳಜಿಯಿಲ್ಲ ಎಂಬ ದುಗುಡ ಕಾಡುತ್ತದೆ.

ನಮ್ಮ ಸಂತೋಷವನ್ನು ಬೇರೆಯವರ ಹತ್ತಿರ ಹಂಚಿಕೊಂಡಾಗ ಮಾತ್ರ ಖುಷಿಯಾಗಿರಬಹುದೆಂದು ಅರಿತುಕೊಳ್ಳುತ್ತಾನೆ. ಅದಕ್ಕಾಗಿ ಸ್ನೇಹಿತರ ಹಾಗೂ ಕುಟುಂಬದ ಜತೆ ಕಾಲ ಕಳೆಯಲು ಕಾಡಿನಿಂದ ಹಿಂದಿರುಗುವಾಗ ಪ್ರಕೃತಿಯು ವಿಕೋಪ ತಾಳುತ್ತದೆ. ಮುಂದೆ ಏನು ಮಾಡಬೇಕೆಂಬುದು ತೋಚದೆ ಅಲ್ಲೇಉಳಿಯಬೇಕಾದ ಸಂದರ್ಭ ಬರುತ್ತದೆ. ಹೀಗೆ ಒಂದು ದಿನ ಅವನಿಗೆ ತಿಳಿಯದೆ ವಿಷಕಾರಿ ಆಹಾರವನ್ನು ಸೇವಿಸಿ ಮೃತಪಡುತ್ತಾನೆ. ಕೆಲವು ದಿನಗಳ ಅನಂತರ ಅಲ್ಲಿನ ಆದಿವಾಸಿಗಳು ಅಥವಾ ಬೇಟೆಗಾರರು ಸ್ಥಳೀಯ ಅರಣ್ಯ ಇಲಾಖೆಗೆ ಮತ್ತು ಪೊಲೀಸರಿಗೆ ಈತನ ಸಾವನ್ನು ತಿಳಿಸುತ್ತಾರೆ. ಇದು ಈ ಚಿತ್ರದಲ್ಲಿ ಬರುವ ಪ್ರಮುಖ ಕಥೆಯ ಸಾರವಾಗಿದೆ.

ಹರೀಶ್‌ ಕೆ.
ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.