ಸಾಮಾಜಿಕ ಬದಲಾವಣೆ, ದೇಶ ಕಟ್ಟುವಲ್ಲಿ  ಯುವ ಜನರ ಪಾತ್ರ


Team Udayavani, Jul 26, 2021, 11:00 AM IST

Untitled-3

ಸಾಮಾಜಿಕ ಜವಾಬ್ದಾರಿ ಎನ್ನುವಂಥದ್ದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇರಬೇಕು. ಆದರೆ ಹೆಚ್ಚು ಹೆಚ್ಚು  ಸಾಮಾಜಿಕ ಕಾಳಜಿ ಯುವಜನರಿಗೆ ಬೇಕು. ನೆಲಕ್ಕಾಗಿ, ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಡಿದ ಮಹಾತ್ಮರನ್ನು ನಾವು ನೋಡಿದ್ದೇವೆ ಮತ್ತು ಅವರ ಆದರ್ಶಗಳನ್ನು ನಾವು ಪಾಲಿಸುತ್ತ ಬದುಕುತ್ತಿದ್ದೇವೆ.

ದೇಶದಲ್ಲಿ ಸಾಮಾಜಿಕ ಬದಲಾವಣೆ ಅಂದರೆ ಒಂದು ಚೌಕಟ್ಟನ್ನು ಹಾಕಿಕೊಂಡು ಯಾರೋ ಹೇಳಿದ ಹಾದಿ ಹಿಡಿದು ಹೊರಟಿದ್ದೇವೆ. ತಪ್ಪು ಗ್ರಹಿಕೆ ಮತ್ತು ಉಹಾಪೋಹದ ಮಾತುಗಳನ್ನು ಕೇಳುತ್ತಾ ಸ್ವಂತ ಆಲೋಚನೆ ಇಲ್ಲದೆ, ಅದೇ ಸರಿ ಎಂದು ಹೊರಟಿದ್ದೇವೆ. ಅದು ಸರಿ ಮಾಡಿಕೊಂಡಾಗ ಮಾತ್ರ ನಾವು, ಮೊದಲು ಬದಲಾವಣೆ ಕಾಣಲು ಸಾಧ್ಯ.

ನಾವು ಮೊದಲು ಅರಿಯಬೇಕಾದದ್ದು ಏನೆಂದರೆ ನಾವು ನಮ್ಮ ಆದರ್ಶ ವ್ಯಕ್ತಿಗಳನ್ನು, ಮಹಾತ್ಮರನ್ನು ನೋಡುವಾಗ ಸ್ವಾಮಿ ವಿವೇಕಾನಂದರು ಏನು ಹೇಳಿದ್ದಾರೆ, ಭಗತ್‌ ಸಿಂಗ್‌ ಏನು ಹೇಳಿದ್ದಾರೆ ಅವರ ಮಾರ್ಗ ಹೇಗಿತ್ತು. ಅವರ ಧೋರಣೆಗಳು ಹೇಗಿದ್ದವು, ಇದನ್ನು ನಾವು ನೋಡುವುದಿಲ್ಲ. ಬರೀ ಯಾರೋ ಬಿಗಿದ ಭಾಷಣಕ್ಕೆ ಮರುಳಾಗಿ ಅದೇ ಸತ್ಯದ ಇತಿಹಾಸವೆಂದು ಭಾವಿಸಿ ದ್ವೇಷ ಸಾಧಿಸುತ್ತೇವೆ. ಇದೇ ನಮ್ಮ ಮೊದಲ ತಪ್ಪು. ಗ್ರಹಿಕೆಗೆ ನಮ್ಮ ಸ್ವಂತ ಆಲೋಚನೆ ಬೇಕಿದೆ.

ಮಹಾತ್ಮಾರ ಪುಸ್ತಕಗಳನ್ನು ಓದುವುದರಿಂದ ನಾವು ಸತ್ಯವನ್ನು ಅರಿಯಬೇಕಿದೆ. ಬಳಿಕ ನಾವು ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ಅಲ್ಲದೇ ವಿಚಾರಿಸುವ ಮುನ್ನ, ಮಾತನಾಡುವ ಮುನ್ನ ವಾಸ್ತವದ ಸ್ಥಿತಿಗತಿಗಳನ್ನು ಪರಾಮರ್ಶಿಸಿ ಮಾತನಾಡಬೇಕಿದೆ. ಆಗ ಮಾತ್ರ ನಮ್ಮ ವಿಚಾರಗಳು ಎಲ್ಲರಿಗೂ ಅಪ್ಯಾಯಮಾನವಾಗುತ್ತವೆ.

ಯುವಜನರು ಇತ್ತೀಚೆಗೆ ಯಾವ್ಯಾವುದೋ ಸಾಮಾಜಿಕ ಸಾಮರಸ್ಯ ಕೆಡಿಸುವ ಅಂಶಗಳಿಗೆ ಬಲಿಯಾಗುತ್ತಿರುವುದು ದುರಂತ. ಇದರಿಂದ ತಮ್ಮ ಜೀವನವನ್ನೇ ಅವರು ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂಥವುಗಳಿಂದ ಮೊದಲು ದೂರವಾಗಿ ಮಹಾತ್ಮರ ಸಾನ್ನಿಧ್ಯದಲ್ಲಿ ಪುಣ್ಯಸ್ನಾನ ಮಾಡಿ, ಅವರ ವಿಚಾರಗಳನ್ನು ನಾವು ಜೀವನದಲ್ಲಿ ಬೆಳಸಿಕೊಂಡಾಗ ಮಾತ್ರ ನಾವು ಮಾನವರಾಗಲೂ ಸಾಧ್ಯ.

ಪ್ರಶ್ನಿಸಿ? :

ನಾವು ಯಾವುದೇ ವಿಚಾರವನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಮುನ್ನ ಅದರ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ. ಅದು ಸಾಮಾಜಿಕ ಸಾಮರಸ್ಯಕ್ಕೆ ಒಳಿತಾಗಬಹುದೇ  ಅಥವಾ ನನ್ನ ಆದರ್ಶ ಜೀವನಕ್ಕೆ ಪೂರಕವಾಗಬಲ್ಲುದೇ ಎಂದು ಗಮನಹರಿಸಬೇಕಿದೆ. ಇದರಿಂದ ನಾವು ನಮ್ಮನ್ನು ನಾವು ಪ್ರಶ್ನಿಸಿ,  ಸ್ವವಿಮರ್ಶೆ ಮಾಡಿಕೊಂಡಾಗ ಮಾತ್ರ ನಮ್ಮ ವಿಚಾರ ಮತ್ತು ಜೀವನ ಮಾದರಿಯಾಗಬಲ್ಲುದು. ಇದರಿಂದ ಬದಲಾವಣೆ ಸಾಧ್ಯವಾಗಬಹುದು. ಯುವಜನರಿಂದ ಮುಖ್ಯವಾಗಿ ಸಮಾಜವನ್ನು ಕಟ್ಟುವ ಒಂದುಗೂಡಿಸುವ ಬದಲಾವಣೆ ತರುವ ಅವಕಾಶವಿದೆ. ಹಾಗಾಗಿ ಯಾವುದು ತಪ್ಪು, ಯಾವುದು ಸರಿ ಎನ್ನುವಂತದ್ದು ಯುವಜನರು ತೀರ್ಮಾನಿಸಬೇಕು. ಬೇರೆಯವರು ಹೇಳಿದ್ದನ್ನು ಅವರದ್ದೇ ಪಾಲಿಸಿದರೆ ನಾವು ಗುಲಾಮರಾಗುವುದರಲ್ಲಿ ಸಂದೇಹವಿಲ್ಲ. ನಿಜವಾಗಿಯೂ ದೇಶ, ಸಮಾಜ ಏನು ಎನ್ನುವಂಥದ್ದು ನಾವು ಅರಿತುಕೊಳ್ಳೋಣ.  ನಮ್ಮ ಜೀವನದ ಮೊದಲ ಪಾಠ ನಮ್ಮ ಬದುಕು ನಾವು ಬಂದಂತಹ ಕುಟುಂಬದ ಹಿನ್ನೆಲೆ ನಡವಳಿಕೆ. ಜನರೊಂದಿಗಿನ ಬೆಳೆಸುವ ಪ್ರೀತಿ, ವಿಶ್ವಾಸ, ಮಾನವ ಪರವಾದ ಕಾಳಜಿ. ಇನ್ನೊಬ್ಬರ ಕಷ್ಟಗಳನ್ನು ಪರಿಗಣಿಸಿ ನಮ್ಮ ಕಷ್ಟ ಎಂದುಕೊಂಡು ಅದನ್ನು ಪರಿಹರಿಸಿಕೊಂಡಾಗ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಈ ಎಲ್ಲ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗೋಣ.

 

ಶಂಕರ್‌ ಡಿ. ಸುರಳ್‌ 

ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೊಪ್ಪಳ

ಟಾಪ್ ನ್ಯೂಸ್

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ಇಂದು ನಾ ಕಂಡ ಜೋಗತಿ

ಇಂದು ನಾ ಕಂಡ ಜೋಗತಿ

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

nokia c30

ನೋಕಿಯಾ ಸಿ30 ಬಿಡುಗಡೆ

Inauguration of Maharishi Valmiki Jayanti Program

ಮಹಾಕಾವ್ಯ ರಾಮಾಯಣ ಎಂದಿಗೂ ಪ್ರಸ್ತುತ: ಸಚಿವ

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

DCC Bank has not been involved in any transactions

ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.