ಎಸೆಸೆಲ್ಸಿ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಯುವ ಜನರು ಹೇಳಿದ್ದೇನು?


Team Udayavani, Jun 10, 2020, 5:42 PM IST

ಎಸೆಸೆಲ್ಸಿ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಯುವ ಜನರು ಹೇಳಿದ್ದೇನು?

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸುವ ಕುರಿತು ಸರಕಾರ ಸ್ಪಷ್ಟಪಡಿಸಿದ ಬಳಿಕವೂ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ʼಉದಯವಾಣಿ ಫ್ಯೂಷನ್‌ ವಿಭಾಗʼ ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸಬೇಕಾ? ಬೇಡ್ವ? ಎಂಬ ಕುರಿತು ಯುವಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಇದಕ್ಕೆ ರಾಜ್ಯದ ನಾನಾ ಭಾಗಗಳಿಂದ ಪ್ರತಿಕ್ರಿಯೆಗಳನ್ನು ಬಂದಿದ್ದು, ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಮುಂಜಾಗ್ರತೆಯಿಂದ ಪರೀಕ್ಷೆ ಏರ್ಪಡಿಸಿ
ಶಿಕ್ಷಣ ಗುಣಮಟ್ಟ ಕಳಪೆಯಾಗುತ್ತಿರುವ ಸಮಯದಲ್ಲಿ ಸಾಮಾನ್ಯ ಜ್ಞಾನದ ಅರಿವು ಕೂಡ ಇಂದಿನ ಮಕ್ಕಳಿಗಿಲ್ಲ ವಾ ಗಿದೆ. ವಿದ್ಯಾರ್ಥಿಗಳಿಗೆ ವಾರ್ಷಿಕ ಪಠ್ಯ ಬೋಧಿಸಿರುವುದರಿಂದ ಎಸೆಸೆಲ್ಸಿ ಪರೀಕ್ಷೆ ಮಾಡುವುದು ಸೂಕ್ತ. ಇಲ್ಲವಾದರೆ ಮಕ್ಕಳ ಬೌದ್ಧಿಕ ಮಟ್ಟ ಕುಸಿಯುವುದು ಖಂಡಿತ. ತಡವಾದರೆ ಪರವಾಗಿಲ್ಲ ಮುಂಜಾಗ್ರತೆಯೊಂದಿಗೆ ಪರೀಕ್ಷೆ ಏರ್ಪಡಿಸಿ ಅವರ ಉಜ್ವಲ ಭವಿಷ್ಯಕ್ಕೆ ಕಾರಣರಾಗಬೇಕಿದೆ.
ಎ.ಸಿ. ಶೋಭಾ, ವಿದ್ಯಾರ್ಥಿನಿ, ಕಾರ್ಕಳ

ಪರೀಕ್ಷೆ ನಡೆಸದಿರಿ
ಕೋವಿಡ್‌ ತಂದಿರುವ ಆಪತ್ತಿನಿಂದಾಗಿ ಮುಂಜಾಗ್ರತೆಗಾಗಿ ಎಸೆಸೆಲ್ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಮಕ್ಕಳ ಭವಿಷ್ಯದೊಂದಿಗೆ ನಾವು ಆಟ ಆಡುವುದು ಸಲ್ಲ. ಮಕ್ಕಳ ಪರೀಕ್ಷಾ ತಯಾರಿ ಕೂಡ ಸರಿಯಾದ ಮಾಹಿತಿ ಇಲ್ಲ. ಮನೆ ಬಿಟ್ಟು ದೂರದ ಊರಿನಲ್ಲಿ ಅಭ್ಯಾಸ ನಡೆಸುತ್ತಿದ್ದ ಮಕ್ಕಳಿಗೆ ಹೋಗಿ ಬರಲು ಕಷ್ಟ ಆಗಬಹುದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನು ನಡೆಸಬಾರದು.
-ತನುಶ್ರೀ ಬೆಳ್ಳಾರೆ, ವಿವೇಕಾನಂದ ಕಾಲೇಜು ಪುತ್ತೂರು

ಸಮಸ್ಯೆಗಳಾಗದಂತೆ ಕ್ರಮ ವಹಿಸಿ
ಎಸೆಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಎಂದೋ ನಡೆಯಬೇಕಾದ ಈ ಪರೀಕ್ಷೆಗೆ ಕೋವಿಡ್‌ ಮಹಾಮಾರಿ ತಡೆ ಒಡ್ಡಿತ್ತು. ಸರಕಾರ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಾ‌ದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಇದೇ ರೀತಿಯಾಗಿ ಸರಕಾರ ಎಸೆಸೆಲ್ಸಿ ಪರೀಕ್ಷೆಯ ವೇಳೆ ತೆಗೆದುಕೊಂಡು ಪರೀಕ್ಷೆ ನಡೆಸುವುದು ಸೂಕ್ತ.
-ಸಂಧ್ಯಾ ತೇಜಪ್ಪ, ತೀರ್ಥಹಳ್ಳಿ

ಕೋವಿಡ್‌ ನಿಯಂತ್ರಣದ ಬಳಿಕ ಪರೀಕ್ಷೆ ನಡೆಸಿ
ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸುವ ವಿಚಾರದಲ್ಲಿ ಕೊರೊನಾ ಹಾವಳಿ ಕಡೆಮಯಾದ ಬಳಿಕ ಪರೀಕ್ಷೆಯನ್ನು ನಡೆಸುವುದು ಸೂಕ್ತ. ಮೊದಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು.
– ಮಂಜುನಾಥ ಬಿ.ವಿ., ಮುದ್ರಾಡಿ

ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ನೈತಿಕ ಬಲ
ಕೋವಿಡ್‌ ಸೃಷ್ಟಿಸಿದ ಆತಂಕದಿಂದ ಮುಂಡೂಡಿಕೆಯಾಗಿದ್ದ ಎಸೆಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸುವುದು ವಿದ್ಯಾರ್ಥಿಗಳಲ್ಲಿ ನೈತಿಕಬಲ ಹೆಚ್ಚಿಸಿದೆ. ಇದರಿಂದ ಇಷ್ಟೂ ದಿನದ ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ರೀತಿ ನ್ಯಾಯ ಸಿಗುವಂತಾಗುತ್ತದೆ. ಸರಕಾರಿ ಹುದ್ದೆ ಗಳಿಗೆ ಎಸೆಸೆಲ್ಸಿ ಅಂಕಗಳು ಮಾನದಂಡವಾಗಿರುವುದರಿಂದ ಪರೀಕ್ಷೆ ನಡೆಸುವುದು ಸೂಕ್ತ. ಅವೈಜ್ಞಾನಿಕವಾಗಿ ಪಾಸ್‌ ಮಾಡಿದರೆ ಮುಂದೆ ಭವಿಷ್ಯದ ದೃಷ್ಟಿಯಲ್ಲಿ ಸಮಸ್ಯೆ ಉಂಟಾಗಬಹುದು. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸರಕಾರ ಪರೀಕ್ಷೆ ನಡೆಸುವುದು ಒಳ್ಳೆಯದು.
– ಮಹೇಶ್‌ ಎಂ.ಸಿ., ದಾವಣಗೆರೆ

ಪರೀಕ್ಷೆ ನಡೆಸಿದರೆ ವ್ಯಾಸಂಗಕ್ಕೆ ಪೂರಕ
ಲಾಕ್‌ಡೌನ್‌ ರಜೆಯಿಂದಾಗಿ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿರುತ್ತಾರೆ. ಉತ್ತಮ ಫ‌ಲಿತಾಂಶ ತೆಗೆಯುವ ನಿರೀಕ್ಷೆಯಲ್ಲಿರುವ ಮಕ್ಕಳಿಗೆ ನಿರೀಕ್ಷೆ ಹುಸಿ ಮಾಡದೇ ಪರೀಕ್ಷೆ ನಡೆಸಿ. ಇನ್ನೂ ಪರೀಕ್ಷೆ ನಡೆಸದಿದ್ದರೆ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ನಿರಾಸಕ್ತಿ ಮೂಡಬಹುದು. ಉನ್ನತ ವ್ಯಾಸಂಗಕ್ಕೆ ಪೂರಕವಾಗಲು ಪರೀಕ್ಷೆ ನಡೆಸುವುದು ಸೂಕ್ತ.
-ಶಾಂಭವಿ, ವಿ.ವಿ. ಸಂಧ್ಯಾ ಕಾಲೇಜು ಹಂಪನಕಟ್ಟೆ, ಮಂಗಳೂರು

ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಿ
ಎಸೆಸೆಲ್ಸಿ ಪರೀಕ್ಷೆ ನಡೆಸದೇ ಮುಂದಿನ ತರಗತಿಗಳಿಗೆ ಭಡ್ತಿ ನೀಡಿದರೆ ಭವಿಷ್ಯದ ದೃಷ್ಟಿಯಿಂದ ಸಮಸ್ಯೆಯಾಗಬಹುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತಿರ್ಣರಾದವರಿಗೆ ಈ ಇದರಿಂದ ಉದ್ಯೋಗಕ್ಕೆ ನೆರವಾಗಬಹುದು. ಆದ್ದರಿಂದ ಕೋವಿಡ್‌-19ಸೊಂಕಿನಿಂದ ಭಾರತವನ್ನು ಮುಕ್ತಗೊಳಿಸುವುದು ಎಷ್ಟು ಅನಿವಾರ್ಯವೋ ಹಾಗೆಯೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಮನವಿಟ್ಟು ಎಸೆಸೆಲ್ಸಿ ಪರೀಕ್ಷೆ ನಡೆಸುವುದೂ ಅಷ್ಟೇ ಮುಖ್ಯ.
– ಮಗು ಹೊಂಗಲವಾಡಿ, ತಲಕಾಡು

ಮುಂಜಾಗ್ರತೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಿ
ಎಸೆಸೆಲ್ಸಿ ಪರೀಕ್ಷೆ ನಡೆಸದಿದ್ದರೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗಲಿದೆ. ಹೀಗಾಗಿ ಪರೀಕ್ಷೆ ನಡೆಸುವುದೆ ಉತ್ತಮ. ಅನೇಕ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವುದು ಸೂಕ್ತ. ಅನೇಕ ಉದ್ಯೋಗಗಳಿಗೆ ಎಸೆಸೆಲ್ಸಿ ಅಧಾರಿತ ಅಂಕಗಳನ್ನೆ ನೋಡಲಾಗುತ್ತದೆ. ಆದ ಕಾರಣ ಪರೀಕ್ಷೆ ನಡೆಸುವುದೇ ಉತ್ತಮ
ತೌಫೀಕ್‌ ಸಾಣೂರು.ಕಾರ್ಕಳ….

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಭದ್ರ ಬುನಾದಿ
10ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್‌ ಪರೀಕ್ಷೆ ನಡೆಸದೇ ಹಾಗೆಯೇ ಪಾಸ್‌ ಮಡುವುದು ಸರಿಯಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ದಾರಿ ತೊಂದರೆಯಾಗಬಹುದು. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬುನಾದಿಯ ಹಂತವಾಗಿದೆ. ಅದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅತೀ ಮುಖ್ಯ. ವಿದ್ಯಾರ್ಥಿಗಳ ಜೀವನದ ಗೆಲುವು, ಸೋಲಿನ ಹಂತ ಈ ಒಂದು ಪರೀಕ್ಷೆಯಿಂದ ತಿಳಿಯಬಹುದಾಗಿದೆ.
-ಯು.ಎಚ್‌.ಎಂ. ಗಾಯತ್ರಿ, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

ಪರೀಕ್ಷೆ ನಡೆಸದಿದ್ದರೆ ಶೈಕ್ಷಣಿಕ ಗುಣಮಟ್ಟ ಕ್ಷೀಣ
ಎಸೆಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟವಾಗಿದ್ದು,ಪರೀಕ್ಷೆಯನ್ನು ನಡೆಸದೆ ಉತ್ತೀರ್ಣಗೊಳಿಸಿದರೆ ಅದು ರಾಜ್ಯದ ಶೈಕ್ಷಣಿಕ ಗುಣಮಟ್ಟ ಹಾಗೂ ವಿದ್ಯಾರ್ಥಿ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವುದೇ ಸೂಕ್ತವೆನಿಸುತ್ತದೆ.
– ಶಕುಂತಲಾ ವಿನಯ್‌, ಬೆಂಗಳೂರು

ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿಯಾಗಲಿ
ಸರಕಾರಕ್ಕೆ ತಲೆನೋವಾಗಿ ಪರಣಮಿಸಿರು ಎಸೆಸೆಲ್ಸಿ ಪರೀಕ್ಷೆಯನ್ನು ಮುಂಜಾಗ್ರತೆ ಕ್ರಮಗಳೊಂದಿಗೆ ನಡೆಸಬೇಕಿದೆ. ಈಗಾಗಲೇ ಸರಕಾರ ಕೊರೊನಾ ಸೋಂಕಿತ ಮತ್ತು ಶಂಕಿತರನ್ನು ಕಟ್ಟುನಿಟ್ಟಾಗಿ ಗೃಹ ಬಂಧನದಲ್ಲಿರಿಸಿ ಮುನ್ನೆಚರಿಕೆ ವಹಿಸಿದೆ. ಇದರಿಂದಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಸರಕಾರ ಪರೀಕ್ಷೆಗೆ ಅನುವು ಮಾಡಿಕೊಟ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು.
-ಬಸವರಾಜ್‌ ಹೊಸೂರು, ಸಿಂಧನೂರು

ಪರೀಕ್ಷೆ ನಡೆಸುವುದು ಸೂಕ್ತವಲ್ಲ
ಎಸೆಸೆಲ್ಸಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕ್ಷೇಮವಲ್ಲ. ಎಷ್ಟೇ ಸುರಕ್ಷ ಕ್ರಮಗಳನ್ನು ಸರಕಾರ ತೆಗೆದುಕೊಂಡರೂ ಕುರಿತಾದ ಭಯ ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತದೆ. ಹೀಗಿರುವಾಗ ನಿರಾತಂಕವಾಗಿ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ. ಜತೆಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಕಷ್ಟವಾಗಬಹುದು. ಹೀಗಾಗಿ ಪರೀಕ್ಷೆಯನ್ನು ಈ ಸಮಯದಲ್ಲಿ ನಡೆಸುವುದು ಸೂಕ್ತವಲ್ಲ.
– ಸೌಜನ್ಯ. ಬಿ.ಎಂ.ಕೆಯ್ಯೂರು, ವಿವೇಕಾನಂದ ಪದವಿ ಕಾಲೇಜು ಪುತ್ತೂರು

ಪರೀಕ್ಷೆಗಿಂತ ಪರ್ಯಾಯ ಕ್ರಮ ಅಗತ್ಯ
ಸದ್ಯದ ಪರಿಸ್ಥಿತಿಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು ಅಸಾಧ್ಯವಾಗಿದದ್ದು ಪರೀಕ್ಷೆ ನಡೆಸುವುದು ಅಷ್ಟೊಂದು ಸರಿ ಕಾಣುವುದಿಲ್ಲ. ಮುಂದಿನ ಪರಿಸ್ಥಿತಿಗೆ ಅನುಗುಣವಾಗಿ ಎಸೆಸೆಲ್ಸಿ ಪರೀಕ್ಷೆಯ ಕುರಿತು ಸರಕಾರ ನಿರ್ಧಾರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಶಿಕ್ಷಣ ಸಂಸ್ಥೆ ಮತ್ತು ಸರಕಾರ ಸರಿಯಾದ ಮಾರ್ಗದರ್ಶನವನ್ನು ನೀಡಬೇಕಿದೆ. ಅನೇಕರಲ್ಲಿ ಪರೀಕ್ಷೆಯ ಬಗ್ಗೆ ಮತ್ತು ತಮ್ಮ ಮುಂದಿನ ಶಿಕ್ಷಣದ ಬಗ್ಗೆ ಆತಂಕ ಇದೆ. ಅವುಗಳನ್ನು ನಿಭಾಯಿಸುವ ಪರ್ಯಾಯ ಕ್ರಮಗಳನ್ನು ತರಬೇಕಿದೆ.
– ಚೈತ್ರಾ ಕುಲಾಲ್‌, ಪಾಣೆಮಂಗಳೂರು ವಿವೇಕಾನಂದ ಪದವಿ ಕಾಲೇಜು, ಪುತ್ತೂರು

ಪರೀಕ್ಷೆ ಮುಂದೂಡುವುದು ಅನಿವಾರ್ಯ
ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಕೋವಿಡ್‌ ಹಾವಳಿಯಿಂದಾಗಿಇಂತಹ ಭಯಾನಕ ಪರಿಸ್ಥಿತಿಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ. ತೆಲಂಗಾಣ ರಾಜ್ಯದ ಮಾದರಿಯಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸುವುದು ಸರಿಯಲ್ಲ, ಆದರೆ ಸದ್ಯ ನಿಗದಿಪಡಿಸಿದ ಪರೀಕ್ಷೆಗಳನ್ನು ಮುಂದೂಡುವುದು ಸೂಕ್ತ. ಈ ಬಗ್ಗೆ ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸುವುದು ಅಗತ್ಯ.
-ಪರಮೇಶ್ವರ ಬಿ. ಬಿರಾದಾರ, ನಾರಾಯಣಪೂರ. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಮರಳೂರು, ತುಮಕೂರು

ವಿದ್ಯಾರ್ಥಿಗಳ ಶ್ರಮ ವ್ಯರ್ಥ ಮಾಡದಿರಿ
ಎಸೆಸೆಲ್ಸಿ ಅಂಕಗಳು ಸರಕಾರದ ನೇಮಕಾತಿಗಳಿಗೆ ಮಾನದಂಡವಾಗುತ್ತದೆ. ಹಾಗಾಗಿ ಈ ಪರೀಕ್ಷೆಯನ್ನು ನಿಲ್ಲಿಸಬಾರದು. ಪರೀಕ್ಷೆ ನಿಲ್ಲಿಸಿದ್ದೇ ಅದಲ್ಲಿ ಕಠಿನ ಪರಿಶ್ರಮಪಟ್ಟ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇರುವ ಹತ್ತು ಕಿ.ಮಿ. ವ್ಯಾಪ್ತಿಯಲ್ಲಿಯೇ ಪರೀಕ್ಷೆ ಕೇಂದ್ರಗಳು ಸ್ಥಾಪಿಸಿ, ಸಾಮಾಝಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಬೇಕು.
-ಪ್ರವೀಣ್‌ ಕುಮಾರ್‌ ಎನ್‌. ವಿವಿ ಕಲಾ ಕಾಲೇಜು, ತುಮಕೂರು

ಮುಂದಿನ ವಿದ್ಯಾಭ್ಯಾಸಕ್ಕೆ ಪೂರಕ
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಏರ್ಪಡಿಸುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ. ಈಗಾಗಲೇ ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆಯ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಅಂತೆಯೇ ಹೆತ್ತವರು ಕೂಡ ಅಷ್ಟೇ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಪರೀಕ್ಷೆಯನ್ನು ನಡೆಸುವುದು ಸೂಕ್ತ.
-ರಾಧಾ ಎ.ಎಲ್‌.,ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು.

ಕಠಿನ ನಿಯಮಗಳೊಂದಿಗೆ ಪರೀಕ್ಷೆ ನಡೆಸಿ
ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಪರೀಕ್ಷೆ ನಡೆಸುವುದು ಕಷ್ಟವೇನಲ್ಲ. ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪರೀಕ್ಷೆಯನ್ನು ನಡೆಸಬಹುದು. ವಿದ್ಯಾರ್ಥಿಗಳಿಗೆ ಓದಲು ಹಾಗೂ ಪುನರಾವರ್ತನೆ ಮಾಡಲು ಸಾಕಷ್ಟು ಸಮಯವೇ ದೊರೆತಿದೆ. ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿಗಳ ಒಂದು ವರ್ಷದ ಕಾಲಾವಧಿ ವ್ಯರ್ಥವಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸುವುದು ಒಳ್ಳೆಯದು.
– ಸುಶ್ಮಿತಾ ಕೆ., ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ.

ಪರೀಕ್ಷೆ ಮುಂದೂಡಿಕೆಗೆ ಆದ್ಯತೆ ನೀಡಲಿ
ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಬೇಕು ವಿನಃ ರದ್ದುಗೊಳಿಸಬಾರದು. ಪರೀಕ್ಷಾರ್ಥಿ ವಿದ್ಯಾರ್ಥಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದರು ಸಹ ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಸಾಧ್ಯತೆ ಜಾಸ್ತಿಯೇ ಇದೆ. ಚಿಕ್ಕ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಕೋವಿಡ್‌ ಹೆಚ್ಚಾಗಿ ಕಂಡು ಬರುವ ಕಾರಣಕ್ಕಾಗಿ ಪಾಲಕರಲ್ಲಿ ಭಯವಿದೆ. ಇದರಿಂದ ಪರೀಕ್ಷೆಗೆ ಬರೆಯಲು ನಿರಾಕರಿಸುತ್ತಿದ್ದಾರೆ. ತೆಲಂಗಾಣ, ತಮಿಳುನಾಡು, ಪುದುಚೆರಿ ರಾಜ್ಯಗಳಲ್ಲಿ ಪರೀಕ್ಷೆ ರದ್ದುಗೊಳಿಸಿದೆ. ರಾಜ್ಯದಲ್ಲಿ ಪರೀಕ್ಷೆಯನ್ನು ಸರಕಾರ ರದ್ದುಗೊಳಿಸುವುದು ಬೇಡ. ಎಸೆಸೆಲ್ಸಿ ಪರೀಕ್ಷೆ ಮಕ್ಕಳ ಜೀವನಕ್ಕೆ ಒಂದು ಬುನಾದಿ ಇದ್ದಂತೆ. ಸದ್ಯದ ಮಟ್ಟಿಗೆ ಪರೀಕ್ಷೆ ಮುಂದೂಡಲಿ.
– ಅಂಬಿಕಾ ವಿ. ಘೋರ್ಪಡೆ,  ಅಕ್ಕ ಮಹಾದೇವಿ ಮಹಿಳಾ ವಿವಿ ವಿಜಯಪುರ

ಆಗಸ್ಟ್‌ರ ವರೆಗೆ ಪರೀಕ್ಷೆ ಮುಂದೂಡಿ
ಕೋವಿಡ್‌ನ ಸಂದಿಗ್ಧತೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ನೆಲೆಗಟ್ಟಿನಲ್ಲಿ ಯೋಚಿಸುವುದಾದರೆ ಪರೀಕ್ಷೆಯನ್ನು ನಡೆಸಲೇಬೇಕು. ಆದರೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆ ಆಗಸ್ಟ್‌ ವರೆಗೆ ಮುಂದೂಡುವುದು ಒಳಿತು. ಇಂತಹ ಸಂದರ್ಭ ನಮ್ಮ ಸುರಕ್ಷತೆಗೆ ನಾವು ಮೊದಲ ಪ್ರಾಶಸ್ತ್ಯ ನೀಡಬೇಕಾಗಿದೆ. ಶಿಕ್ಷಣ ಇಲಾಖೆ ಈ ಕುರಿತು ಆಲೋಚಿಸಬೇಕು.
-ಮೋಹಿತಾ ಲೋಕಯ, ಹೊಸಮಠ, ಬಲ್ಯ

ಅಜಾಗರೂಕತೆಯಿಂದ ಸೋಂಕಿನ ಭೀತಿ
ಪರೀಕ್ಷೆಯನ್ನು ನಡೆಸುವಾಗ ಎಷ್ಟೇ ಜಾಗ್ರತೆ ವಹಿಸಿದರೂ ಕೂಡ ಅಜಾಗರೂಕತೆಯಿಂದ ಸೋಂಕು ಹರಡುವ ಭೀತಿಯಿದೆ. ಆದ್ದರಿಂದ ಈಗಿನ ಪರಿಸ್ಥಿತಿಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸದೆ ಕೆಲವು ತಿಂಗಳ ಅನಂತರ, ಕೋವಿಡ್‌ ಕಡಿಮೆಯಾದಾಗ ಪರೀಕ್ಷೆಯನ್ನು ನಡೆಸುವುದು ಉತ್ತಮ.
ಸಿಲ್ವಿಯಾ, ಬಜಗೋಳಿ ಕಾರ್ಕಳ.

ಪರೀಕ್ಷೆ ರದ್ದುಗೊಳಿಸಿ
ಕೋವಿಡ್‌ ಆತಂಕ ಹೆಚ್ಚಳದಿಂದಾಗಿ ಸದ್ಯದ ದಿನಗಳಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ವಿದ್ಯಾರ್ಥಿ ಮತ್ತು ಹೆತ್ತವರಲ್ಲಿ ವೂರಸ್‌ ಕುರಿತಾದ ಆತಂಕ ಇರುವುದರಿಂದ ಪರೀಕ್ಷೆಯನ್ನು ರಾಜ್ಯ ಸರಕಾರ ರದ್ದುಗೊಳಿಸಲಿ. ಅಲ್ಲದೇ ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗಿದ್ದು, ಪುನಃ ತಮ್ಮ ಶಾಲೆಗಳಿಗೆ ಹಿಂದಿರುಗಿ ಪರೀಕ್ಷೆ ಎದುರಿಸುವುದು ಕೂಡ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕಿದೆ.
-ನಿಸರ್ಗ ಸಿ. ಎ., ಚೀರನಹಳ್ಳಿ.

ಪರೀಕ್ಷೆ ಮಾಡಲೇಬೇಕು,ಮುಂಜಾಗೃತೆ ವಹಿಸಲೇಬೇಕು
ಎಸೆಸೆಲ್ಸಿ ಪರೀಕ್ಷೆ ಖಂಡಿತವಾಗಿ ಆಗಲೇಬೇಕು. ವಿದ್ಯಾರ್ಥಿಗಳ ಭವಿಷ್ಯ, ಐಟಿಐ, ಡಿಪ್ಲೊಮಾ, ಪಿ.ಯು.ಕಾಲೇಜುಗಳಿಗೆ ಆಗುವ ತೊಂದರೆಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗಾಗುವ ಅನ್ಯಾಯ, ತಿಂಗಳುಗಳ ಕಾಲ ಓದಿದ ವಿದ್ಯಾರ್ಥಿಗಳ ಶ್ರಮ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ನಡೆಸಲೇಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ʼಕೊರೋನಾ ಕಾರಣದಿಂದ ಉತ್ತೀರ್ಣರಾದವರು’ ಎಂಬ ಹಣೆಪಟ್ಟಿ ವಿದ್ಯಾರ್ಥಿಗಳು ಹೊರುವಂತಾಗಬಾರದು. ಪರೀಕ್ಷೆ ನಡೆಸಲೇಬೇಕು ಎನ್ನುವುದು ಎಷ್ಟು ಮುಖ್ಯವಾದ ಸಂಗತಿಯೋ, ಅಂತೆಯೇ 8.45 ಲಕ್ಷ ವಿದ್ಯಾರ್ಥಿಗಳ ಮತ್ತು ಸಾವಿರಾರು ಶಿಕ್ಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಸುರಕ್ಷಿತವಾಗಿ ಮತ್ತು ಸುವ್ಯವಸ್ಥಿತವಾಗಿ ಪರೀಕ್ಷೆ ಜರುಗುವಂತೆ ಮಾಡುವುದು ಸರಕಾರದ ಕರ್ತವ್ಯ.
-ಅರುಣ್ ಕಿರಿಮಂಜೇಶ್ವರ, ವಿವೇಕಾನಂದ ಕಾಲೇಜು, ಪುತ್ತೂರು

ಎಸೆಸೆಲ್ಸಿ ಪರೀಕ್ಷೆ ನಡೆಸಬೇಕು
ಮುಂಡೂಡಿಕೆಯಾಗಿದ್ದ ಎಸೆಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸುವುದು ವಿದ್ಯಾರ್ಥಿಗಳಲ್ಲಿ ನೈತಿಕಬಲ ವೃದ್ಧಿಯಾಗಿದೆ. ಇಷ್ಟೂ ದಿನದ ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ರೀತಿ ನ್ಯಾಯ ಸಿಕ್ಕಂತಾಗಿದೆ. ನೇರವಾಗಿ ಪಾಸ್‌ ಮಾಡುವ ಕ್ರಮ ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸರಕಾರ ಪರೀಕ್ಷೆ ನಡೆಸುವುದು ಒಳ್ಳೆಯದು.
ಭಾರತಿ ಗೌಡ, ಮಾಡ್ತೇಲು, ವಿಟ್ಲ

ತುರ್ತು ನಿಲುವು ಅವಶ್ಯಕ
ಕೋವಿಡ್‌-19 ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮವಾಗಿ ಪರೀಕ್ಷೆಯ ಬಗೆಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಬೀಳುತ್ತಿದೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಸರಕಾರದ ನಿರ್ಧಾರದಿಂದ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ಪರೀಕ್ಷೆಯ ಮೇಲಿನ ಆಸಕ್ತಿ, ಪರೀಕ್ಷೆಯ ತಯಾರಿ ಎಲ್ಲದರ ಮೇಲೆಯೂ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ ಇತ್ತ ನುಂಗಲಿಕ್ಕೂ ಆಗಲ್ಲ, ಉಗುಳುವುದಕ್ಕೂ ಆಗದ ಬಿಸಿ ತುಪ್ಪದಂತಾಗಿದೆ. ಆದ್ದರಿಂದ ಆದಷ್ಟು ಬೇಗನೇ ಸರಕಾರ ಎಸೆಸೆಲ್ಸಿ ಪರೀಕ್ಷೆಯ ವಿಚಾರವಾಗಿ ತುರ್ತಾದ ನಿಲುವನ್ನು ಕೈಗೊಳ್ಳಬೇಕಾಗಿದೆ.
-ಪೂರ್ಣಿಮಾ ಹಿರೇಮಠ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.

ಸಮರ್ಪಕವಾಗಿ ಪರೀಕ್ಷೆ ನಡೆಯಲಿ
ಎಸೆಸೆಲ್ಸಿ ಪರೀಕ್ಷೆ ನಡೆಸಬೇಕಾ ಅಥವಾ ಮುಂಡೂಡಬೇಕ ಎಂಬ ವಿಚಾರದಲ್ಲಿ ನಾವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕೆ ಹೊರತು, ಹಿಂದೆ ಸರಿಯುವುದಲ್ಲ. ಕೋವಿಡ್‌-19ನ ಜತೆ ಜತೆಗೆ ನಮ್ಮ ಜೀವನವನ್ನು ನಾವು ಸಾಗಿಸಬೇಕು ಎಂಬ ಪ್ರಧಾನಿ ಅವರ ಕರೆಯಂತೆ ಈ ವೈರಸ್‌ನಿಂದ ಮುಂಜಾಗ್ರತೆ ಕ್ರಮ ವಹಿಸಬೇಕಿದೆ. ಸರಕಾರ ಸಮರ್ಪಕ ಮುಂಜಾಗ್ರತ ಕ್ರಮಗಳನ್ನು ರೂಪಿಸಿ ಪರೀಕ್ಷೆಗಳನ್ನು ನಡೆಸಲಿ ಎಂಬುದು ನನ್ನ ಅಭಿಪ್ರಾಯವಾಗಿದೆ.
-ಹರ್ಷಿತಾ ಎಂ., ಮಾನಸಗಂಗೋತ್ರಿ ಮೈಸೂರು

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.