ಜನ್ಮಾಷ್ಟಮಿ ಬಂತೆಂದರೆ ನಮಗೆಲ್ಲಾ ನಾಡ ಹಬ್ಬದ ಸಂಭ್ರಮ

ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಅದು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರುವಂತದ್ದಲ್ಲ. ಈ ಆಚರಣೆಯೊಂದಿಗೆ ಉಡುಪಿ ಮತ್ತು ಸುತ್ತಮುತ್ತಲಿನ ಜನತೆಗೆ ಭಾವನಾತ್ಮಕವಾದ ಸಂಬಂಧವಿದೆ. ವರ್ಷದ ಉಳಿದ ದಿನಗಳಲ್ಲಿ ಅದೆಷ್ಟು ಬಾರಿ ಶ್ರೀ ಕೃಷ್ಣ ಮಠದ ಪರಿಸರಕ್ಕೆ ಭೇಟಿ ಕೊಟ್ಟರೂ, ಅಷ್ಟಮಿ ಮತ್ತು ವಿಟ್ಲಪಿಂಡಿ ದಿನಗಳಂದು ರಥಬೀದಿಗೊಂದು ಸುತ್ತು ಹೊಡೆಯದಿದ್ದರೆ ಉಡುಪಿಯ ಜನತೆ ಅದೇನೋ ಕಳೆದುಕೊಂಡ ಭಾವದಲ್ಲಿರುತ್ತಾರೆ. ಹಾಗಾದರೆ ಉಡುಪಿ ಜನರ ದೃಷ್ಟಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಎಷ್ಟು ಮಹತ್ವದ್ದು ಎಂಬುದಕ್ಕೆ ಕೆಲವರ ಅಭಿಪ್ರಾಯಗಳ ಸಂಗ್ರಹ ವಿಡಿಯೋ ಇಲ್ಲಿದೆ.


ಹೊಸ ಸೇರ್ಪಡೆ