ಕಲ್ಪನೆಯಲ್ಲಿದ್ದರೆ “ಅಡಚಣೆಗಾಗಿ ಕ್ಷಮಿಸಿ’: ಥ್ರಿಲ್ಲರ್‌ ಟ್ರೈಲರ್ ವೀಕ್ಷಿಸಿ

“ಶ್ರೀ ಭೂಮಿಕಾ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸದ್ಗುಣಮೂರ್ತಿ ನಿರ್ಮಿಸಿರುವ “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಭರತ್‌ ಎಸ್‌. ನಾವುಂದ್‌ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರದೀಪ್‌ ವರ್ಮ, ಶಿವಮಂಜು, ಕೆ.ಎಸ್‌ ಶ್ರೀಧರ್‌, ಶ್ರೀನಿವಾಸ ಪ್ರಭು, ಅರ್ಪಿತಾ ಗೌಡ, ಮೇಘ, ವಿದ್ಯಾ ಕುಲಕರ್ಣಿ, ಶ್ರೀನಿವಾಸ್‌, ಸುಶೀಲ್‌ ಕುಮಾರ್‌ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರದ ಈ ಚಿತ್ರಕ್ಕೆ ಎಸ್‌. ಪ್ರದೀಪ್‌ ವರ್ಮ ಸಂಗೀತ, ರವಿವ‌ರ್ಮ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ ಕಾರ್ಯವಿದೆ. ಚಿತ್ರದ ಥ್ರಿಲ್ಲರ್‌ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ