ಡ್ರೋಣ್ ಕಣ್ಣಲ್ಲಿ ಸೆರೆಯಾದ ಕೃಷ್ಣೆಯ ಸೊಬಗು

ರಾಯಚೂರು: ಒಂದೆಡೆ ಕೃಷ್ಣೆಗೆ ಪ್ರವಾಹ ಭೀತಿ ಎದುರಾಗಿ ನದಿಪಾತ್ರದ ಜನ ಸಂಕಷ್ಟ ಎದುರಿಸುತ್ತಿದ್ದರೆ , ಮತ್ತೊಂದೆಡೆ ತುಂಬಿ ಹರಿವ ನದಿಯ ಸೊಬಗನ್ನು ಕಣ್ತಂಬಿಕೊಳ್ಳಲು ಜನ ನದಿಯತ್ತ ಮುಖ ಮಾಡುತ್ತಿದ್ದಾರೆ. ಸಮೀಪದ ಕೃಷ್ಣ ಸೇತುವೆಯನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಅದು ನೋಡಲು ಮೋಹಕವಾಗಿದೆ. ಇಂಥಹ ಅನೇಕ ಫೋಟೊ, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಜನ ನಾರಾಯಣಪುರ ಜಲಾಶಯ, ಲಿಂಗಸೂಗುರಿನ ಜಲದುರ್ಗ, ಹೂವಿನಹೆಡಗಿ, ಗೂಗಲ್ ,ಕೃಷ್ಣ ನದಿ ಸೇತುವೆ, ಜುರಾಲಾ ಡ್ಯಾಂ ಸೇರಿ ವಿವಿದ ಪ್ರದೇಶಗಳಿಗೆ ಜನ ಭೇಟಿ ನೀಡಿ ಕೃಷ್ಣೆಯ ಸೊಬಗು ಸವಿಯುತ್ತಿದ್ದಾರೆ


ಹೊಸ ಸೇರ್ಪಡೆ