ಕಾಂಗ್ರೆಸ್, ಜೆಡಿಎಸ್ ಗೆದ್ದರೆ ತಲಾ ಒಂದು ಕ್ಷೇತ್ರವಷ್ಟೇ: ಧರ್ಮಸ್ಥಳದಲ್ಲಿ ಯಡಿಯೂರಪ್ಪ

ಬೆಳ್ತಂಗಡಿ: ಎಲ್ಲರ ನಿರೀಕ್ಷೆ ಚುನಾವಣೆ ಫಲಿತಾಂಶದ ಕಡೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಸಚಿವರೊಂದಿಗೆ ನಾವು ಸುತ್ತು ಬಂದಿದ್ದು, ಸಮೀಕ್ಷೆ ಪ್ರಕಾರ 15 ಕ್ಷೇತ್ರದಲ್ಲಿ 13 ಕ್ಷೇತ್ರ ಗೆಲ್ಲುತ್ತೇವೆ. ಅಕಸ್ಮಾತ್ ಗೆದ್ದರೆ ಕಾಂಗ್ರೆಸ್ ಗೆ ಒಂದು, ಜೆಡಿಎಸ್ ಒಂದು ಸ್ಥಾನ ಬರಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ವಿವಿಧ ಯೋಜನೆಗಳ ಕಾಮಗಾರಿಗೆ ಶಿಲಾನ್ಯಾಸ ಮಾಡಲು ಧರ್ಮಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಮ್ಮ ಲೆಕ್ಕಾಚಾರ ಮಿಸ್ ಆಗುವ ವಿಷಯವೇ ಇಲ್ಲ. ಇನ್ನೂ ಮೂರುವರೆ ವರ್ಷ ಬಿಜೆಪಿ ಸ್ಥಿರ ಸರಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಹೊಸ ಸೇರ್ಪಡೆ