Chikkaballapur Seal Down ಪೊಲೀಸರಿಂದ ಡ್ರೋಣ್ ಮೂಲಕ ಜಾಗೃತಿ
Team Udayavani, Apr 19, 2020, 7:34 PM IST
ಚಿಕ್ಕಬಳ್ಳಾಪುರ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ 6 ಕೊರೊನಾ ಸೋಂಕಿತರು ಕಂಡು ಬಂದಿರುವ ಹಿನ್ನಲೆಯಲ್ಲಿ ನಗರದ 31 ವಾಡ್೯ ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು ಪೊಲೀಸರು ಪ್ರಚಾರ ಕಾರ್ಯಕ್ಕೆ ಡ್ರೋಣ್ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಡ್ರೋಣ್ ಮೂಲಕ ನಗರದ ಪ್ರದೇಶಗಳನ್ನು ಅವಲೋಕಿಸಿ ಸಾರ್ವಜನಿಕರು ಕಂಡು ಬರುವ ಕಡೆ ಪೊಲೀಸರನ್ನು ಕಳುಹಿಸಿ ಜನರನ್ನು ನಿಯಂತ್ರಣ ಮಾಡುವುದು ಸಹಜ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಡ್ರೋಣ್ ಗೆ ಧ್ವನಿವರ್ಧಕವನ್ನು ಅಳವಡಿಸಿ ಜನ ಯಾರು ಹೊರಗೆ ಬಾರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಸೀಲ್ ಡೌನ್ ಗೆ ಸಹಕರಿಸುವಂತೆ ಕೋರುತ್ತಿದ್ದಾರೆ. ಈ ವಿನೂತನ ಕಾರ್ಯಕ್ಕೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಾಲನೆ ನೀಡಿದರು.