ನೀರಿನ ದರಕ್ಕೆ ಎಳನೀರು

ಮಂಗಳೂರು: ನೀರಿನ ದರದಲ್ಲಿ ಎಳುನೀರು! ಈ ಶೀರ್ಷಿಕೆ ನೋಡಿ ಒಂದಷ್ಟು ಅಶ್ಚರ್ಯ ಎನಿನಿದರೂ ಇದು ಸತ್ಯ. ಅಡ್ಯಾರು ಬರಕಾ ಸ್ಕೂಲ್ ಸಮೀಪ ನ್ಯಾಚುರಲ್ ಐಸ್ ಕ್ರೀಮ್ ಅವರ ಫ್ಯಾಕ್ಟರಿಯಲ್ಲಿ ಮಾತ್ರ ಈ ಸೌಲಭ್ಯ ಲಭ್ಯ.

ನ್ಯಾಚುರಲ್ ಐಸ್ ಕ್ರೀಮ್’ಗೆ ಎಳನೀರಿನ ಗಂಜಿ ಬೇಕು. ನೀರು ಬೇಡ. ಎಳನೀರ ನೀರನ್ನು ಹಿಂದೆಲ್ಲಾ ಹೊಳೆಗೆ ಬಿಡುತ್ತಿದ್ದರಂತೆ. ಈಗ ಒಂದು ವರ್ಷದಿಂದ ಅದನ್ನು ಸೇವಾ ರೂಪದಲ್ಲಿ ಮಾರಾಟ ಮಾಡುತ್ತಿದ್ದಾರೆ. ದಿನನಿತ್ಯ ಸಾವಿರಾರು ಲೀಟರ್ ನೀರು ಇಲ್ಲಿ ಬಿಕರಿಯಾಗುತ್ತದೆ.

ಆದರೆ ಕೆಲ ಕಂಡಿಷನ್ ಕೂಡಾ ಇದೆ. ಸೀಸನಲ್ಲಿ ಒಬ್ಬರಿಗೆ ಒಂದೇ ಲೀಟರ್ ನೀರು ಕೊಂಡೊಯ್ಯಬಹುದು. ಬಾಟಲಿ ತೆಗೆದುಕೊಂಡು ಹೋಗಬೇಕು. ಜೊತೆಗೆ ದಾಹ ತೀರಿಸಲು ಅಲ್ಲೇ ಗರಿಷ್ಟ 3 ಗ್ಲಾಸು (750 ಒಐ) ಎಳನೀರೂ ಕುಡಿಯಬಹುದು. ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ಲಭ್ಯ. ಭಾನುವಾರ ರಜೆ. ಸ್ವಲ್ಪ ಹೊತ್ತು ಕ್ಯೂ ನಿಲ್ಲಬೇಕಾಗುತ್ತೆ. ಮಳೆಗಾಲದಂತಹ ಅನ್ ಸೀಸನಲ್ಲಿ ಕ್ಯೂ ಕಮ್ಮಿ. ಜೊತೆಗೆ ಬೇಕಾದಷ್ಟು ಎಳನೀರು ಕೊಂಡೊಯ್ಯಬಹುದು. ಅಡ್ಯಾರಲ್ಲಿ ಇಂತಹ ಸೇವೆ ಇರುವುದು ಹೆಚ್ಚಿನವರಿಗೆ ಇನ್ನೂ ಗೊತ್ತಿಲ್ಲ. ಸದುಪಯೋಗಪಡಿಸಿಕೊಳ್ಳಿ.


ಹೊಸ ಸೇರ್ಪಡೆ