Mangaluru ರಿಗೆ ಬಂದಿದೆ 12 ಲ. ರೂ. ಮೌಲ್ಯದ bicycle!
Team Udayavani, Jun 4, 2020, 6:33 PM IST
ಮಂಗಳೂರು: ದುಬಾರಿ ಬೆಲೆಯ ಬೈಕ್, ಕಾರುಗಳ ಖರೀದಿ ಸಾಮಾನ್ಯ. ಆದರೆ ನಗರದಲ್ಲೊಬ್ಬರು 12 ಲ.ರೂ. ಮೌಲ್ಯದ ಸೈಕಲ್ ಖರೀದಿಸಿ ಗಮನ ಸೆಳೆದಿದ್ದಾರೆ.
ಕೆನಡಾ ಮೂಲದ ರೇಸಿಂಗ್ ಸೈಕಲ್ಗಳಲ್ಲಿ ಮಾನ್ಯತೆ ಪಡೆದ “ಸರ್ವೆಲ್ಲೊ’ ಕಂಪೆನಿಯವರ “ಪಿಎಕ್ಸ್ ಸೀರೀಸ್’ನ ಡ್ಯೂರೇಸ್ ಡೈ2 2020′ ಸೈಕಲ್ ಭಾರತದಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪರಿಚಯವಾಗುತ್ತಿದೆ.
ಮೈಸೂರಿನ “ಟ್ರಯತ್ಲಾನ್’ ಕ್ರೀಡಾ ಪಟುವೊಬ್ಬರು ಪಂಪ್ವೆಲ್ನಲ್ಲಿರುವ ತಾಜ್ ಸೈಕಲ್ ಕಂಪೆನಿಯಲ್ಲಿ ಅದನ್ನು ಖರೀದಿಸಿದ್ದಾರೆ. ಈಗಾಗಲೇ ಮಳಿಗೆಯಲ್ಲಿ ಈ ಸೈಕಲ್ ಪ್ರದರ್ಶನಗೊಳ್ಳುತ್ತಿದ್ದು, ಜೂ. 4ರಂದು ಖರೀದಿದಾರರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಪ್ರಮುಖರಾದ ಮುಬಿನ್ ‘ಉದಯವಾಣಿ’ಗೆ ತಿಳಿಸಿದ್ದಾರೆ.
Read More: https://bit.ly/2UpGFLV
Read More:https://bit.ly/2XUgT3a