ಬಾದಾಮಿ ಯುವತಿಗೆ ಸೋಂಕು ಉಡುಪಿ ಸಂಪರ್ಕದಿಂದ ಬಂದಿಲ್ಲ ; ಜಿಲ್ಲಾಧಿಕಾರಿ ಸ್ಪಷ್ಟನೆ
Team Udayavani, May 7, 2020, 10:07 AM IST
ಉಡುಪಿಯಿಂದ ಬಾದಾಮಿಗೆ ತೆರಳಿದ 18ರ ಯುವತಿಯಲ್ಲಿ ಕೋವಿಡ್ ಪಾಸಿಟಿನ್ ಕಂಡುಬಂದಿದೆ. ನಿಟ್ಟೆಯಲ್ಲಿ ಓದುತ್ತಿದ್ದ ಆಕೆ ರಜೆಯ ಕಾರಣ ಮಾರ್ಚ್ 14ರಂದು ಊರಿಗೆ ತೆರಳಿರುವುದಾಗಿ ಬಾಗಲಕೋಟೆ ಜಿಲ್ಲಾಧಿಕಾರಿ, ಎಸ್ಪಿ ಅವರು ಮಾಹಿತಿ ನೀಡಿದ್ದಾರೆ. ಹಾಗಾಗಿ ಆಕೆಗೆ ಉಡುಪಿಯ ಯಾವುದೇ ಸಂಪರ್ಕದಿಂದ ಕೋವಿಡ್ ಪಾಸಿಟಿವ್ ಬರುವ ಸಾಧ್ಯತೆ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಬಾದಾಮಿಯಲ್ಲಿ ಮೇ 2ರಂದು ಪಾಸಿಟಿವ್ ಬಂದ 23ರ ಹರೆಯದ ಗರ್ಭಿಣಿಯ ಸಂಪರ್ಕಕ್ಕೆ ಮೊದಲೇ ಬಂದಿದ್ದ ಈ ಯುವತಿಯಲ್ಲಿ ಬುಧವಾರ ಪಾಸಿಟಿವ್ ಕಂಡುಬಂದಿದೆ. ಬಾದಾಮಿಯಲ್ಲಿ ಬುಧವಾರ ಕಂಡುಬಂದ ಒಟ್ಟು 13 ಪ್ರಕರಣಗಳಲ್ಲಿ 12 ಮಂದಿ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಉಡುಪಿ ಡಿಎಚ್ಒ ಡಾ| ಸುಧೀರ್ಚಂದ್ರ ಸೂಡ ತಿಳಿಸಿದರು.