ಚಿನ್ನಾರಿಮುತ್ತನ “ಧರ್ಮಸ್ಯ’: ಆ್ಯಕ್ಷನ್‌ ಟ್ರೈಲರ್ ವೀಕ್ಷಿಸಿ

ವಿಜಯ ರಾಘವೇಂದ್ರ ಅಭಿನಯದ “ಧರ್ಮಸ್ಯ’ ಈಗಾಗಲೇ ಟೈಟಲ್‍ನಿಂದಲೇ ಸದ್ದು ಮಾಡುತ್ತಿದ್ದು, ಮೊದಲ ಬಾರಿಗೆ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಇಮೇಜ್‌ನಲ್ಲಿ ವಿಜಯ ರಾಘವೇಂದ್ರ ಮಿಂಚಿದ್ದಾರೆ. ಅಲ್ಲದೇ ನೀವು ಈ ಹಿಂದೆ ನೋಡಿದ ವಿಜಯರಾಘವೇಂದ್ರ ಅವರಿಗೂ ಈ ಚಿತ್ರದಲ್ಲಿ ನೋಡುವ ವಿಜಯರಾಘವೇಂದ್ರ ಅವರಿಗೂ ಸಾಕಷ್ಟು ವ್ಯತ್ಯಾಸವಿದೆಯಂತೆ. ಕನ್ನಡ, ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ವಿರಾಜ್‌, “ಧರ್ಮಸ್ಯ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂಧೋರ್‌ ಮೂಲದ ಅಕ್ಷರ ತಿವಾರಿ, “ಅಕ್ಷರ ಪ್ರೊಡಕ್ಷನ್ಸ್‌’ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್‌ ವಿಲನ್‌ ಆಗಿ ನಟಿಸಿದ್ದು, ಶ್ರಾವ್ಯಾ ನಾಯಕಿ. “ಇದೊಂದು ಕಮರ್ಷಿಯಲ್‌ ಆಯಕ್ಷನ್‌ ಎಂಟರ್‌ಟೈನ್ಮೆಂಟ್‌ ಚಿತ್ರವಾಗಿದ್ದು, ಜ್ಯೂಡಾ ಸ್ಯಾಂಡಿ ಮತ್ತು ಪರಾಗ್‌ ಸಂಗೀತ ಸಂಯೋಜನೆಯಿದೆ. ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಆ್ಯಕ್ಷನ್‌ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ