ಕಾರ್ಕಳದ ವೈದ್ಯ ಡಾ. ಅವಿನಾಶ್ ಅಡಿಗ ಅವರ ಅನುಪಮ ಸೇವೆಗೆ ಅಮೆರಿಕನ್ನರು ಸಲ್ಲಿಸಿದ ಗೌರವ !
Team Udayavani, May 10, 2020, 10:18 AM IST
ಕೋವಿಡ್ ಸೋಂಕಿನ ವಿರುದ್ಧ ಅಮೆರಿಕದ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾದ ಡಾ.ಅವಿನಾಶ್ ಅಡಿಗ ಅವರ ಅನುಪಮ ಸೇವೆಗೆ ನ್ಯೂಜರ್ಸಿಯಲ್ಲಿರುವ ತಮ್ಮ ನಿವಾಸದ ಎದುರು ಅಮೆರಿಕನ್ನರು ನೂರಾರು ವಾಹನಗಳಲ್ಲಿ ಹಾರ್ನ್ ಹಾಕುತ್ತಾ, ಕೈಯಲ್ಲಿ ಧನ್ಯವಾದಗಳ ಫಲಕವನ್ನು ಹಿಡಿದು ಕೈ ಮುಗಿದು ಗೌರವ ಸಲ್ಲಿಸಿದರು.