ವರುಣ ವೆಡ್ಸ್ ವರ್ಷ- ಉಡುಪಿಯಲ್ಲಿ ನಡೆಯಿತು ಕಪ್ಪೆ ಮದುವೆ

ಮಳೆಯ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ‘ಮಂಡೂಕ ಪರಿಣಯ'(ಕಪ್ಪೆ ಮದುವೆ) ನಡೆಸಲಾಗಿದೆ. ಹೆಣ್ಣು ಕಪ್ಪೆಯನ್ನು ಕೊಳಲಗಿರಿ ಕೀಳಿಂಜೆಯಿಂದ ಹಾಗೂ ಗಂಡು ಕಪ್ಪೆಯನ್ನು ಉಡುಪಿ ಕಲ್ಸಂಕದಿಂದ ತರಲಾಗಿತ್ತು. ಹೆಣ್ಣು ಕಪ್ಪೆಗೆ ವರ್ಷಾ ಎಂದೂ, ಗಂಡು ಕಪ್ಪೆಗೆ ವರುಣ ಎಂದೂ ನಾಮಕರಣ ಮಾಡಲಾಗಿತ್ತು. ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ ಎಂಬ ಒಕ್ಕಣೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿತ್ತು.


ಹೊಸ ಸೇರ್ಪಡೆ