ದುರಾಸೆಯಿಂದ ಮೀನುಗಳಿಲ್ಲದ ದಿನಗಳು ಎದುರಾಗಿವೆ

ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ತಂದೆಗೆ ಆರೋಗ್ಯ ಇರಲಿಲ್ಲ. ವಿದ್ಯೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಶಾಲೆ ಮೊಟಕುಗೊಳಿಸಿ 39 ವರ್ಷಗಳ ಹಿಂದೆ ಮೀನು ಗಾರಿಕೆಯಲ್ಲಿ ತೊಡಗಿಕೊಂಡೆ. ಆಗ ಯಾಂತ್ರೀಕೃತ ದೋಣಿಗಳಿರಲಿಲ್ಲ, ಮೊಬೈಲ್‌ ಇರಲಿಲ್ಲ, ಆಧುನಿಕ ಸೌಕರ್ಯಗಳು ಇಲ್ಲದ ಆ ದಿನಗಳಲ್ಲಿ ಸಮುದ್ರಕ್ಕೆ ತೆರಳಿದವರು ಮರಳಿ ಬಂದರೆ ಬಂದರು, ಇಲ್ಲದಿದ್ದರೆ ಮನೆಗೊಬ್ಬ ಸದಸ್ಯ ಕಡಿಮೆಯಾದಂತೆಯೇ. ಆದರೆ ಈಗ ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದಂತಿರುವ ಸ್ಥಿತಿಗೆ ಬಂದು ದುರಾಸೆ ಯಿಂದಾಗಿ ಮೀನಿಲ್ಲದ ದಿನಗಳನ್ನು ಕಳೆಯುತ್ತಿದ್ದೇವೆ ಎಂದು ಹೇಳಿ ಕ್ಷಣಕಾಲ ಭಾವುಕರಾದರು ಗಂಗೊಳ್ಳಿಯ ಮೀನುಗಾರ ಜಿ. ರಾಮಪ್ಪ ಖಾರ್ವಿ.


ಹೊಸ ಸೇರ್ಪಡೆ