ಹಳ್ಳಿ ಮದ್ದು – ಔಷಧೀಯ ಗುಣದ ಗಣಿ ದೊಡ್ಡಪತ್ರೆ
Team Udayavani, Jun 18, 2019, 5:38 PM IST
ತಮ್ಮ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಅವು ಅಲಂಕಾರ ಸಸ್ಯವಾಗಿ ಕಂಗೊಳಿಸುತ್ತಾ ಔಷಧಿಗೆ ಬಳಕೆಯಾಗುತ್ತಿತ್ತು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನವಿದೆ. ಇದು ಅವತ್ತಿನ ಕಾಲದಲ್ಲಿ ಕಾಲಾರದಂತಹ ರೋಗವನ್ನೇ ಹತೋಟಿಗೆ ತರುವಂತಹ ಶಕ್ತಿಯನ್ನು ಹೊಂದಿತ್ತು ಎಂದರೆ ಅಚ್ಚರಿಯಾಗಬಹುದು