ಗುಡಿಸಲಿಗೆ ಬೆಂಕಿ ಬಿದ್ದು ಆರು ಮೇಕೆಗಳು ಸಜೀವ ದಹನ

ವಿಜಯಪುರ: ಆಕಸ್ಮಿಕ ಅಗ್ನಿ ದುರಂತದಲ್ಲಿ ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯ ಉತ್ನಾಳ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹನುಮಂತ ಭೀಮಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೆಂಕಿ ಹೊತ್ತಿ ಕೊಂಡಿದೆ. ಅಗ್ನಿ ಅವಘಡದಿಂದ ಮನೆಯಲ್ಲಿದ್ದ 4 ಕುರಿ, 2 ಮೇಕೆ ಸಜೀವ ದಹನವಾಗಿವೆ. ಘಟನೆಯಲ್ಲಿ 1 ಲಕ್ಷ ರೂ. ನಗದು, 25 ಕ್ವಿಂಟಾಲ್ ಧವಸ ಧಾನ್ಯ, 2 ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇದಲ್ಲದೇ ಮನೆಯಲ್ಲಿದ್ದ ಅಮೂಲ್ಯ ದಾಖಲೆಗಳೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.


ಹೊಸ ಸೇರ್ಪಡೆ