ಕಿಕ್ ಕೊಡ್ತಿದೆ “ಕಿಸ್’ನ ಡೊಂಟು ವರಿ: ಸೂಪರ್ ಸಾಂಗ್ ವೀಕ್ಷಿಸಿ
Team Udayavani, Jan 4, 2019, 11:27 AM IST
“ಅದ್ಧೂರಿ’, “ಅಂಬಾರಿ’, “ರಾಟೆ’ಯಂತಹ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಎ.ಪಿ.ಅರ್ಜುನ್ “ಕಿಸ್’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಇದೀಗ ಚಿತ್ರದ “ಶೀಲ ಸುಶೀಲ ಡೊಂಟು ವರಿ’ ಎಂಬ ಹಾಡು ಬಿಡುಗಡೆಯಾಗಿದ್ದು, ಸಿನಿರಸಿಕರಿಗೆ ಸಖತ್ತಾಗೇ ಕಿಸ್ ಕೊಡ್ತಾ ಇದೆ. ಹೌದು, ಇತ್ತೀಚೆಗಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಹಾಡನ್ನು ರಿಲೀಸ್ ಮಾಡಿದ್ದು, ಈ ವೇಳೆ ಚಿತ್ರತಂಡದ ಜೊತೆಗೆ ನಿರ್ದೇಶಕರಾದ ಬಹದ್ದೂರ್ ಚೇತನ್ ಹಾಗೂ ಮಹೇಶ್ ಗೌಡ ಕೂಡ ಭಾಗಿಯಾಗಿದ್ದರು. ಅಲ್ಲದೇ ಚಿತ್ರದ ಈ ಹಾಡು ಕೇಳಲು ಸಖತ್ ಮಜಾವಾಗಿದ್ದು, ಹಾಡಿನ ಬೀಟ್ಸ್ ಕೇಳುಗರನ್ನ ಕುಣಿಯುವಂತೆ ಮಾಡುತ್ತಿದೆ. ಎ.ಪಿ.ಅರ್ಜುನ್ ಸಾಹಿತ್ಯವಿರುವ ಈ ಹಾಡಿಗೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಧ್ವನಿ ನೀಡಿದ್ದು, ಹಾಡಿನ ಕಿಕ್ ಹೆಚ್ಚಾಗಿದೆ. ಹಾಡಿನಲ್ಲಿ ವಿರಾಟ್ ಹಾಗೂ ಅಪೂರ್ವ ಗೌಡ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಿದೆ. ಇನ್ನು “ಕಿಸ್’ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ವಿರಾಟ್ ಮತ್ತು ಶ್ರೀಲೀಲಾ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದು, “ತುಂಟ ತುಟಿಗಳ ಆಟೋಗ್ರಾಫ್’ ಎಂಬ ಟ್ಯಾಗ್ಲೈನ್ ಚಿತ್ರಕ್ಕಿದೆ. ಜೊತೆಗೆ ಅನಂತ್ ನಾಗ್, ಚಿಕ್ಕಣ್ಣ, ದತ್ತಣ್ಣ ಮತ್ತು ಸಾಧುಕೋಕಿಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ವಿ.ರವಿಕುಮಾರ್ ಬಂಡವಾಳ ಹೂಡಿದ್ದಾರೆ. ಚಿತ್ರದ ಸೂಪರ್ ಸಾಂಗ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ